ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಸರು ಕುಡಿಕೆ ಸ್ಪರ್ಧೆ ವೇಳೆ ಅವಘಡ, ಯುವಕ ಸಾವು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 30 : ಮೊಸರು ಕುಡಿಕೆ ಉತ್ಸವದ ವೇಳೆ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟಿದ್ದಾರೆ. ಪಿಂಜಾಲ ಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಯುವಕರನನ್ನು ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ನಿವಾಸಿ ಪಿ.ಎಂ. ಪ್ರಭಾಕರ ಎಂಬವರ ಪುತ್ರ ಶಿಶಿರ್ (22) ಎಂದು ಗುರುತಿಸಲಾಗಿದೆ. ಭಾನುವಾರ ಮೊಸರು ಕುಡಿಕೆ ಉತ್ಸವ ವೇಳೆ ಬಿದ್ದು ಗಂಭೀರ ಗಾಯಗೊಂಡಿದ್ದ ಶಿಶಿರ್ ಅವರು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾರೆ.[ವೇಷ ತೊಟ್ಟು ಫೋಟೋಗೆ ಪೋಸ್ ನೀಡಿದ ಕಿಟ್ಟುಮರಿಗಳು!]

Youth falls down during Mosaru Kudike competition, dies

ಬೆಳ್ತಂಗಡಿಯಲ್ಲಿ ಮೊಸರು ಕುಡಿಕೆ ಪ್ರಯುಕ್ತ ಆಯೋಜಿಸಲಾಗಿದ್ದ ಗೋವಿಂದ ಸ್ಪರ್ಧೆಯಲ್ಲಿ ವಿವಿಧ ತಂಡಗಳು ಭಾಗವಹಿಸಿದ್ದು, ಇಲ್ಲಿನ ಪುಂಜಾಲ ಕಟ್ಟೆ ಸಮೀಪದ ಶ್ರೀ ರಾಮನಗರ ಶ್ರೀ ರಾಮಾಂಜನೇಯ ತಂಡದಲ್ಲಿ ಶಿಶಿರ್ ಪಾಲ್ಗೊಂಡಿದ್ದರು.[ಬಾಲ ಕೃಷ್ಣರ ತುಂಟಾಟ ಯಾರಿಗೆ ತಾನೆ ಇಷ್ಟ ಆಗಲ್ಲ?]

ಮಡಕೆ ಒಡೆಯಲು ಮಾನವ ಪಿರಮಿಡ್ ಮೇಲೇರಿ ಕಟ್ಟಿದ್ದ ಹಗ್ಗ ಹಿಡಿದು ಹಲವಾರು ಮಡಕೆಗಳನ್ನು ಅವರು ಒಡೆದಿದ್ದರು. ಆದರೆ, ಕೊನೆಯ ಮಡಕೆ ಒಡೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.[ಕೃಷ್ಣ ಜನ್ಮಾಷ್ಟಮಿಗೂ ಮುನ್ನ ಮುರಾರಿಯ ಧ್ಯಾನ]

ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಆಯೋಜಕರು ನೀಡಿದ ದೂರಿನ ಅನ್ವಯ ಪಿಂಜಾಲ ಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಾವಂತ : ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದ ಶಿಶಿರ್ ಪ್ರತಿಭಾವಂತ ಕಲಾವಿದನಾಗಿದ್ದು, ಬಾಲ್ಯದಿಂದಲೇ ಮಿಮಿಕ್ರಿ ಕಲೆ ಮೂಲಕ ಪ್ರೌಢ ಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಕಾಲೇಜಿನಲ್ಲಿ ಕೂಡಾ ಪ್ರಹಸನ, ನಾಟಕ, ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

English summary
A 22-year-old Shishir fallen down on the road and sustained serious injuries to his head during Mosaru Kudike festival died without responding to medical treatment, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X