ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೃಹ ಸಚಿವ ಪರಮೇಶ್ವರಗೆ ಕಡ್ಲೆಪುರಿ ಪಾರ್ಸಲ್!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 26 : ಕರಾವಳಿಯಲ್ಲಿ ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಗೃಹ ಸಚಿವರಿಗೆ ಕಡ್ಲೆಪುರಿ ಪಾರ್ಸೆಲ್ ಕಳಿಸುವ ವಿನೂತನ ಪ್ರತಿಭಟನೆ ಆರಂಭಿಸಿವೆ. ಸಮಸ್ಯೆಗೆ ಅವರು ಸ್ಪಂದಿಸುವ ತನಕವೂ ಈ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್‌ಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ ಕೋಮುವಾದಿಗಳ ಬಂಧನಕ್ಕೆ ಆಗ್ರಹಿಸಿ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅನಾಚಾರಗಳತ್ತ, ಅಪರಾಧಗಳತ್ತ ಗೃಹಮಂತ್ರಿಗಳ ಗಮನ ಸೆಳೆಯಲು ಈ ವಿಶಿಷ್ಟ ಪ್ರತಿಭಟನೆ ನಡೆಸಲಾಗುತ್ತಿದೆ. [ಗೃಹ ಸಚಿವ ಪರಮೇಶ್ವರ ಪರಿಚಯ]

protest

ಶುಕ್ರವಾರ ಬೆಂಗಳೂರಿನ ಟೌನ್‌ಹಾಲ್, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರಿಗೆ ಕಡ್ಲೆಪುರಿ ಪಾರ್ಸೆಲ್ ಕಳಿಸಲಾಗುತ್ತದೆ.

ಕಡ್ಲೆಪುರಿ ತಿನ್ನುತ್ತಾ ಕೂತಿದ್ದಾರೆ ಎಂದರೆ ಏನು ಕೆಲಸ ಮಾಡುತ್ತಿಲ್ಲ ಎಂದು ಅರ್ಥ ನೀಡುತ್ತದೆ. ಇದನ್ನು ಪ್ರತಿಭಟನೆ ಮೂಲಕ ತಿಳಿಸಲು ಈ ವಿಶಿಷ್ಟ ಪ್ರತಿಭಟನೆ ನಡೆಸಲಾಗುತ್ತದೆ. ಗೃಹ ಸಚಿವರು ಸ್ಪಂದನೆ ನೀಡುವ ತನಕ ಈ ಪ್ರತಿಭಟನೆಯನ್ನು ಮುಂದುವರೆಸಲು ಸಂಘಟನೆಗಳು ನಿರ್ಧರಿಸಿವೆ.

ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್‌ಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ ಕೋಮುವಾದಿಗಳ ಬಂಧನಕ್ಕೆ ಆಗ್ರಹಿಸಿ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅನಾಚಾರಗಳತ್ತ, ಅಪರಾಧಗಳತ್ತ ಗೃಹಮಂತ್ರಿಗಳ ಗಮನ ಸೆಳೆಯಲು ಮತ್ತು ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಅನಂತ್ ನಾಯಕ್ ಹೇಳಿದ್ದಾರೆ..

ವಿದ್ಯಾ ದಿನಕರ್‌ ಯಾರು? : ಮಂಗಳೂರಿನಲ್ಲಿ ದಿಲ್‌ವಾಲೆ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದ ಭಜರಂಗ ದಳದ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ 'ಮಂಗಳೂರು ಅಭಿವೃದ್ಧಿಗಾಗಿ ನಾಗರಿಕ ವೇದಿಕೆ' ಸಂಯೋಜಕಿ ವಿದ್ಯಾ ದಿನಕರ್‌ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ನೀಡಿದ್ದ ವಿದ್ಯಾ ಅವರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬೆದರಿಕೆ ಸಂದೇಶಗಳು ಬಂದಿದ್ದವು. ಪುನೀತ್‌ ರಾಜ್‌ ಕೊಟ್ಟಾರಿ ಎಂಬ ಯುವಕನ ಖಾತೆಯಿಂದ ಮೊದಲಿಗೆ ವಿದ್ಯಾ ಅವರಿಗೆ ಬೆದರಿಕೆ ಸಂದೇಶ ಬಂದಿತ್ತು. ಪುನೀತ್‌ ಭಜರಂಗ ದಳದ ಮಂಗಳೂರು ಘಟಕದ ಸಹ ಸಂಚಾಲಕ ಎಂಬ ಮಾಹಿತಿ ಅವರ ಫೇಸ್‌ಬುಕ್‌ ಖಾತೆಯಲ್ಲೇ ಇತ್ತು.

English summary
A unique protest in which the Home Minister of Karnataka, Dr.G.Parameshwar will get puffed rice is underway. It has been decided by some activists that they would send puffed rice to the Home Minister and also the Police Commissioner of Mangaluru, S Murugan as they have been unable to stop the communalisation of the coastal city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X