ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾಣಿಪಕ್ಷಿಗಳಿಗೆ ನೀರಿನ ಕೊರತೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 21 : ಮಂಗಳೂರಿನಲ್ಲಿನ ಕುಡಿಯುವ ನೀರಿನ ಕೊರತೆ ಬಿಸಿ ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೂ ತಟ್ಟಿದೆ. ಸುಮಾರು 120 ಪ್ರಬೇಧದ ಪ್ರಾಣಿಗಳನ್ನು ಹೊಂದಿರುವ ಜೈವಿಕ ಉದ್ಯಾನವನದಲ್ಲಿ ನೀರಿಗೆ ಸಂಕಷ್ಟ ಎದುರಾಗಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆ ಸ್ವಲ್ಪ ಮಟ್ಟಿನ ನಿರಾಳತೆ ಒದಗಿದೆ.

ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಸ್ವತಂತ್ರ ನೀರಿನ ವ್ಯವಸ್ಥೆ ಇದೆ. ಇಲ್ಲಿಗೆ ಮಂಗಳೂರು ಮಹಾನಗರ ಪಾಲಿಕೆಯಾಗಲಿ, ಸಮೀಪ ಗ್ರಾಮ ಪಂಚಾಯಿತಿಯಾಗಲಿ ನೀರು ಒದಗಿಸುತ್ತಿಲ್ಲ. ಉದ್ಯಾನವನ ಬದಿಯಲ್ಲಿರುವ ಫಲ್ಗುಣಿ ಹೊಳೆ ತೀರದ ಬಾವಿ ಮತ್ತು ನಾಲ್ಕು ಬೋರ್‌ವೆಲ್ ನೀರಿನ ಮೂಲಗಳು. [ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿ ಬನ್ನಿ]

plikula

ಈ ನೀರಿನ ಮೂಲದ ಮೂಲಕವೇ ಇಲ್ಲಿನ ಪ್ರಾಣಿ ಪಕ್ಷಿ ಹಾಗೂ ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಅಪರೂಪದ ಪ್ರಭೇದದ ಗಿಡ ಮರಗಳಿಗೆ ನೀರುಣಿಸಲಾಗುತ್ತದೆ. ಆದರೆ, ಈ ಬಾರಿ ಮೇ ತಿಂಗಳ ಆರಂಭದಲ್ಲೇ ಜೈವಿಕ ಉದ್ಯಾನವನಕ್ಕೆ ನೀರಿನ ಸಮಸ್ಯೆ ತಟ್ಟಿದೆ. ಜಿಲ್ಲೆಯ ಎಲ್ಲೆಡೆಯ ಹೊಳೆ, ಕೆರೆ, ಬಾವಿಗಳ, ನೀರು ಬತ್ತಿದಂತೆ ಇಲ್ಲೂ ಹೊಳೆಯಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. [ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ]

2 ಲಕ್ಷ ಲೀಟರ್ ಬೇಕು : ಜೈವಿಕ ಉದ್ಯಾನವನದಲ್ಲಿ ಸುಮಾರು 1,179 ಪ್ರಾಣಿ- ಪಕ್ಷಿಗಳಿವೆ. ಇದರಲ್ಲಿ 5 ಸಿಂಹ, 11 ಹುಲಿ ಹಾಗೂ 11 ಚಿರತೆ, 50 ಕೃಷ್ಣ ಮೃಗ ಹಾಗೂ 300 ವಿವಿಧ ಜಾತಿಯ ಪಕ್ಷಿಗಳು ಸೇರಿವೆ. ಹಾಗೆಯೇ ಪಶ್ಚಿಮ ಘಟ್ಟದಲ್ಲಿರುವ ಅಪರೂಪದ ಪ್ರಭೇದದ ಗಿಡ ಮರಗಳನ್ನು ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ. [ತೋಟಗಳಿಗೆ ನೀರಿಲ್ಲ, ಅಡಿಕೆ ಬೆಳೆಗಾರರು ಕಂಗಾಲು]

ಪ್ರಾಣಿಗಳಿಗೆ ದಿನಾ ಕುಡಿಯಲು ಮತ್ತು ಸ್ನಾನಕ್ಕೆ ಹಾಗೂ ಗಾರ್ಡನ್ ಗಳಿಗೆ ನೀರುಣಿಸಲು ದಿನಕ್ಕೆ ಸುಮಾರು 2 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಜೈವಿಕ ಉದ್ಯಾನವನದ ಬಾವಿ ಹಾಗೂ ಬೋರ್ ವೆಲ್‌ಗಳೇ ಪ್ರತಿದಿನ 2 ಲಕ್ಷ ಲೀಟರ್ ನೀರು ಒದಗಿಸುತ್ತವೆ.

nisagradama

ಪ್ರಾಣಿಗಳಿಗೆ ಸ್ನಾನವೂ ಮುಖ್ಯ : ಬರ ಪರಿಸ್ಥಿತಿ ಕುರಿತು ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರು ಮಾತನಾಡಿದ್ದು, 'ಪ್ರಾಣಿಗಳಿಗೆ ನೀರು ಒದಗಿಸುವಷ್ಟೆ ಅದರ ಸ್ನಾನ ಕೂಡಾ ಮುಖ್ಯವಾದದ್ದು. ಪ್ರಾಣಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅದನ್ನು ಸ್ವಚ್ಛವಾಗಿ ಇಡುವುದು ಬಹಳ ಪ್ರಮುಖವಾದದ್ದು. ಉಷ್ಣತೆ ಪ್ರಮಾಣವನ್ನು ಇಳಿಸಲು ಅದಕ್ಕೆ ನೀರಿನ ವ್ಯವಸ್ಥೆ ಮಾಡಿದ್ದೇವೆ' ಎಂದು ಹೇಳಿದ್ದಾರೆ.

ಇಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಹಬ್ಬಿರುವ ಭತ್ತದ ಗದ್ದೆಯಲ್ಲಿ 3 ಬೆಳೆ ತೆಗೆಯಲಾಗುತ್ತದೆ. ಆದರೆ ಈ ಬಾರಿ ನೀರಿನ ಅಲಭ್ಯತೆಯಿಂದ ಎರಡು ಬೆಳೆಯನ್ನು ಮಾತ್ರ ತೆಗೆಯಲಾಗಿದೆ. ನೀರಿನ ಸಂರಕ್ಷಣೆಯ ದೃಷ್ಠಿಯಿಂದ ನೀರಿಂಗಿಸುವ ಕಾರ್ಯವು ಇಲ್ಲಿ ನಡೆಯುತ್ತಿದೆ.

English summary
Pilikula Nisarga Dhama at Mangaluru facing Water crisis. Pilikula Nisarga Dhama is a major eco-education and tourism development project of Dakshina Kannada, in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X