ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 12ರಿಂದ ವಿವೇಕ್ ಬ್ಯಾಂಡ್ ಅಭಿಯಾನ

|
Google Oneindia Kannada News

ಮಂಗಳೂರು, ಜನವರಿ 04 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸಾರುವ 'ವಿವೇಕ್ ಬ್ಯಾಂಡ್-2016' ಅಭಿಯಾನ ಜನವರಿ 12ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.

ಬೆಂಗಳೂರಿನ ಸಾಮಾಜಿಕ ಸಂಸ್ಥೆ 'ಸಮರ್ಥ ಭಾರತ' ಈ ಯುವ ಅಭಿಯಾನವನ್ನು ಆಯೋಜಿಸಿದ್ದು, ಜನವರಿ 12ರಂದು ಸ್ವಾಮಿ ವಿವೇಕಾನಂದರ 153ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದಂದು ರಾಜ್ಯಾದ್ಯಂತ ನಡೆಯುವ ಅಭಿಯಾನವನ್ನು ಆರಂಭಿಸಲಾಗುತ್ತದೆ. [ಸ್ವಾಮಿ ವಿವೇಕಾನಂದ ವ್ಯಕ್ತಿಯಲ್ಲ, ಭಾರತದ ಆತ್ಮ : ಮೋದಿ]

vivek band

ಎಸ್‌ಡಿಎಂ ಬ್ಯುಸಿನೆಸ್ ಸೆಮಿನಾರ್ ಹಾಲ್‌ನಲ್ಲಿ ಜನವರಿ 6 ರಂದು ಬೆಳಗ್ಗೆ 11 ಗಂಟೆಗೆ ಅಭಿಯಾನ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳಲಿದೆ. ನಿರ್ದೇಶಕ ಟಿ.ಎಸ್.ನಾಗಾಭರಣ, ಮಂಗಳೂರು ವಿವಿ ರಿಜಿಸ್ಟ್ರಾರ್ ವಿಶಾಲ್ ಹೆಗ್ಡೆ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. [150ರ ವಸಂತ: ಸ್ವಾಮಿ ವಿವೇಕಾನಂದರ 9 ಆಣಿಮುತ್ತು]

ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವುದು ಅಭಿಯಾನದ ಉದ್ದೇಶವಾಗಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್‍ ಬ್ಯಾಂಡ್‌ ಧರಿಸಲಿದ್ದು, ವಿವೇಕಾನಂದರ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ.

ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಆರಂಭವಾಗಲಿರುವ ಅಭಿಯಾನವು ಜನವರಿ 26ರ ತನಕ ನಡೆಯಲಿದ್ದು, ಸುಮಾರು 12 ಲಕ್ಷ ಯುವಕ-ಯುವತಿಯರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು ಅಭಿಯಾನಕ್ಕೆ ಬೆಂಬಲ ನೀಡಿವೆ.

ಅಭಿಯಾನದ ರಾಯಭಾರಿಗಳು : ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲನಂದನಾಥ ಸ್ವಾಮೀಜಿ, ನಾರಾಯಣ ಹೃದಯಾಲಯದ ಮುಖ್ಯಸ್ಥರಾದ ಡಾ.ದೇವಿ ಶೆಟ್ಟಿ, ನಟ ಶ್ರೀನಗರ ಕಿಟ್ಟಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮುಂತಾದವರು ವಿವೇಕ ಬ್ಯಾಂಡ್ ಅಭಿಯಾನದ ರಾಯಭಾರಿಗಳಾಗಿದ್ದಾರೆ.

ಜನವರಿ 5ರ ನಂತರ ರಾಜ್ಯದ ಅನೇಕ ಚಿಲ್ಲರೆ ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯವಿರುತ್ತದೆ, ಬೆಲೆ 10 ರೂ.ಗಳು. ವಿವೇಕ್ ಬ್ಯಾಂಡ್ ದೊರೆಯುವ ಎಲ್ಲಾ ಮಾರಾಟ ಮಳಿಗೆಗಳ ಸಮಗ್ರ ವಿವರಗಳು http://www.samarthabharata.org/ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9880621824, 9663330692 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
The Samartha Bharatha Trust, Bengaluru will be launching a Vivek Band -2016 campaign in Mangaluru on January 12th to spread the message of 'Be Good-Do Good' on the occasion of the 153rd birth anniversary of Swami Vivekananda. Campaign will be held in all over the state from January 12th to 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X