ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ

ತಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡಿದ್ದ ಬಾಳಿಗಾ ಕುಟುಂಬಕ್ಕೆ ಇನ್ನೊಂದು ಅಘಾತವಾಗಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಜಯಂತಿ ಬಾಳಿಗ (81) ನಿಧನರಾಗಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 08 : ತಮ್ಮ ಪ್ರೀತಿಯ ಮಗನನ್ನು ಕಳೆದುಕೊಂಡಿದ್ದ ಬಾಳಿಗಾ ಕುಟುಂಬಕ್ಕೆ ಇನ್ನೊಂದು ಅಘಾತವಾಗಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಜಯಂತಿ ಬಾಳಿಗ (81) ನಿಧನರಾಗಿದ್ದಾರೆ.

ಜಯಂತಿ ಅವರು ಪತಿ ಬಿ.ರಾಮಚಂದ್ರ ಬಾಳಿಗಾ ಹಾಗೂ ನಾಲ್ವರು ಪುತ್ರಿಯರಾದ ಶ್ವೇತಾ, ಆಶಾ, ಅನು ಮತ್ತು ಹರ್ಷಾರನ್ನು ಅಗಲಿದ್ದಾರೆ. ಜಯಂತಿ ಬಾಳಿಗಾ ಅವರು ತಮ್ಮ ಏಕೈಕ ಪುತ್ರ ವಿನಾಯಕ ಬಾಳಿಗಾರ ಹತ್ಯೆಗೀಡಾಗಿ ಸಾವನ್ನಪ್ಪಿದ ಬಳಿಕ ಖಿನ್ನತೆಗೊಳಗಾಗಿದ್ದರು.

ಶನಿವಾರದಂದು ಜಯಂತಿ ಅವರು ಅಸೌಖ್ಯದಿಂದ ಕುಸಿದು ಬಿದ್ದು ತಲೆಗೆ ಗಂಭೀರ ಏಟು ಬಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅದು ಪ್ರಯೋಜನವಾಗದೇ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರೆಳೆದಿದ್ದಾರೆ. [ಬಾಳಿಗ ಕೊಲೆ ಪ್ರಕರಣ : ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ]

Lakshmi Baliga

ತನ್ನ ಮಗನನ್ನು ಕೊಲೆಗೈದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು, ನಾನು ಜೀವಂತವಾಗಿರುವಾಗಲೇ ನ್ಯಾಯ ನಮ್ಮ ಪರ ಬರಬೇಕೆಂದು ಗಂಡ ಹೆಂಡತಿ ಇಬ್ಬರು ಸಕ್ಕಷ್ಟು ಹೋರಾಟ ಮಾಡಿದ್ದಾರೆ ಆದರೆ ತಮ್ಮ ಮಗನ ಪರ ನ್ಯಾಯ ಸಿಗುವ ಮುಂಚೆಯೇ ಜಯಂತಿಬಾಳಿಗರವರು ಇಹಲೋಕ ತ್ಯಜಿಸಿದ್ದಾರೆ.

ಮಂಗಳೂರಿನ ಆರ್ ಟಿಐ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗ ರನ್ನು ಕಳೆದ ಮಾರ್ಚ್ 21ರಂದು ಮುಂಜಾನೆ ಬರ್ಬರವಾಗಿ ಹತ್ಯೆಗೈಯಲಾಗಿತ್ತು.

English summary
Slain RTI activist's Vinayak Baliga's mother Jayanti Baliga (81) passed away on Sunday, January 8 at a local hospital in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X