ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಸುದೇವ ಭಟ್ಟರ ಸಾವಿಗೆ ವಾಟ್ಸಪ್ ವಿಡಿಯೋ ಕಾರಣ?

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ.30 : ವಾಮಂಜೂರಿನ ವಾಸುದೇವ ಭಟ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಭಟ್ಟರನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯುತ್ತಿರುವ ವಿಡಿಯೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನಂತರ ಭಟ್ಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೋಷ ನಗರದ ಮನೆಯಲ್ಲಿ ಶುಕ್ರವಾರ ವಾಸುದೇವ ಭಟ್ (53) ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಭಟ್ಟರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಫೋಟೋ, ವಿಡಿಯೋ ಸೋಮವಾರ ಲಭ್ಯವಾಗಿದೆ. [ಗೃಹಿಣಿಯ ಜೀವ ಬಲಿ ಪಡೆದ ವಾಟ್ಸಪ್ ಸಂದೇಶ]

mangaluru

ಘಟನೆ ವಿವರ : ವಾಸುದೇವ ಭಟ್ಟರಿಗೆ ಕುಡಿತದ ಚಟವಿತ್ತು. ಪ್ರತಿದಿನ ಕುಡಿದು ಬಂದು ಕುಟುಂಬದವರು ಮತ್ತು ಅಕ್ಕ-ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನವೂ ಕುಡಿದು ಬಂದು ನೆರೆಮನೆಯವರೊಂದಿಗೆ ಜಗಳವಾಡಿದ್ದರು. ನಂತರ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. [ಪಾಲಿಕೆಗೆ ಫಜೀತಿ ತಂದ ವಾಟ್ಸಪ್ ಸಂದೇಶ!]

ಶಿಕ್ಷಕಿಯಾಗಿರುವ ವಾಸುದೇವ ಭಟ್ಟರ ಪತ್ನಿ ಮನೆಗೆ ಬಂದಾಗ ಭಟ್ಟರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿತ್ತು. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಆದರೆ, ಸೋಮವಾರ ಈ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ವಾಟ್ಸಪ್‌ನಲ್ಲಿ ಫೋಟೋ, ವಿಡಿಯೋ : ವಾಸುದೇವ ಭಟ್ ಅವರನ್ನು ಮರಕ್ಕೆ ಕಟ್ಟಿಹಾಕಿ ಅವರ ಮುಖಕ್ಕೆ ಖಾರದ ಪುಡಿ ಹಾಕಿ ಅವರನ್ನು ಥಳಿಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಮವಾರ ವಾಟ್ಸಪ್‌ನಲ್ಲಿ ಹರಿದಾಡುತ್ತಿವೆ. ಸ್ಥಳೀಯರು ಥಳಿಸಿ, ಅದನ್ನು ವಿಡಿಯೋ ಮಾಡಿದ್ದರಿಂದ ಮನನೊಂದ ಭಟ್ಟರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

suicide

ಸೋಮವಾರ ಸಂಜೆ ಸಂತೋಷ ನಗರಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ. ನಾಲ್ವರಿಗೆ ಮಂಗಳವಾರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ವಾಟ್ಸಪ್ ವಿಡಿಯೋ ಭಟ್ಟರ ಜೀವ ತೆಗೆದಿತೆ? ಎಂದು ತನಿಖೆಯ ನಂತರ ತಿಳಿಯಲಿದೆ.

English summary
While it has been claimed that the death of man in Santosh Nagar, Mangaluru on Friday last was caused by suicide, now suspicions have arisen about the cause of his death. It was said that Vasudeva Bhat (53) had ended his reportedly after a video of him being beaten up went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X