ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆರೆಗಳೊಂದಿಗೆ ಆಟವಾಡುತ್ತಾ ಬದುಕು ಕಟ್ಟಿಕೊಂಡ ಕಲಾವಿದ

By ಎನ್.ಪೂಜಾ ಪಕ್ಕಳ, ದ್ವಿತೀಯ ಎಮ್.ಸಿ.ಜೆ, ಎಸ್ ಡಿಎಂ ಕಾಲೇಜ್
|
Google Oneindia Kannada News

ಮೂಡಬಿದಿರೆಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ವಾಸ್ತವತೆಯನ್ನು ಚಿತ್ರದಲ್ಲಿ ಸಮೀಕರಿಸುತ್ತಾ ನೋಡುಗನನ್ನು ಆಕರ್ಷಿಸುವುದು ಚಿತ್ರಗಾರ ಗಿರೀಶ್ ಕನಸು.

ಕುಂದಾಪುರದ ಬೈಂದೂರು ಮೂಲದ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಪೂರ್ತಿ. 27ರ ಹರೆಯದ ಈತನಿಗೆ ಆರಂಭದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು. ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ. ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಗಳನ್ನು ಕಿತ್ತುಕೊಂಡಿತ್ತು.[ಚಿತ್ರಗಳು: ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿಗೆ ಚಾಲನೆ]

Very good painter girish attract all Alavas nudisiri audience in Very good painter girish attract all Alavas nudisiri audience in Moodabidri

ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಸಹಕರಿಸಲೇ ಇಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ್ಲ ಬಲಗೈಗೆ ಸಾಧ್ಯವಾಗದ್ದನ್ನು ಎಡಗೈಯಲ್ಲಿ ಬರೆಯಲು ಪ್ರಯತ್ನಿಸಿದರು. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು.

ಗಿರೀಶ್ ತಂದೆ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ. ಪ್ರವೃತ್ತಿಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರುವ ಇವರು ಬಿ.ವಿ.ಎ ಪದವೀಧರರು. ಸದ್ಯ ಕುಂದಾಪುರದ ಬಸೂರಿನ ಶಾರದಾ ಆಂಗ್ಲಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ತಾನು ಕಲಿತ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎನ್ನುವ ಉತ್ಕಟ ಬಯಕೆ ಈತನದು. ಪೆನ್ನು ಮತ್ತು ಬಿಳಿಹಾಳೆಯಲ್ಲಿ ಮೂಡುವ ಇವರ ಚಿತ್ರಗಳು ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿನ ಆರ್ಟ್‍ ಗ್ಯಾಲರಿಯ ಪ್ರಮುಖ ಆಕರ್ಷಣೆ.[ಡಾ. ಮೋಹನ್ ಆಳ್ವ ಸಂದರ್ಶನ]

Very good painter girish attract all Alavas nudisiri audience in Moodabidri

ಹಿಂದೆ ವಾಟರ್ ಪೈಂಟ್ ನಲ್ಲಿ ಚಿತ್ರ ರಚಿಸುತ್ತಿದ್ದ ಗಿರೀಶ್ ಸದ್ಯ ಎಕ್ರಲೇಕ್ ಮೂಲಕ ಚಿತ್ರ ಬಿಡಿಸುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟು ಇವರ ಕಲಾರಚನೆಗಳ ನಿರ್ವಹಣೆಗೆ ತೊಡಕಾಗಿದೆ. "ಚಿತ್ರಕಲಾ ಕ್ಷೇತ್ರ ಉತ್ತಮವಾದರೂ ಅಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ ಯಾವುದೇ ಸರಕಾರಿ ಶಾಲೆಗಳಲ್ಲಿ ಇತ್ತೀಚಿನ ಹತ್ತು ವರ್ಷದಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ನೇಮಕವಾಗಿಲ್ಲ. ಇದು ಕಲಾಕಾರರ ಬದುಕಿನ ಕುರಿತು ಸರಕಾರದ ನಿಲುವನ್ನು ತೋರಿಸುತ್ತದೆ" ಎನ್ನುತ್ತಾರೆ ಗಿರೀಶ್.

ಗಿರೀಶ್ ಹಲವು ವಸ್ತು ಪ್ರದರ್ಶನಗಳಲ್ಲಿ ಈಗಾಗಲೇ ತಮ್ಮ ಕಲಾರಚನೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಜನರ ಮಾನ್ಯತೆ ಪಡೆದಿದೆ. ಈಗ ನುಡಿಸಿರಿ ಅಂಗಳದಲ್ಲಿ ಗಿರೀಶ್ ರಚಿಸಿದ ಚಿತ್ರಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ಆಳ್ವಾಸ್ ನುಡಿಸಿರಿ ಆರ್ಟ್‍ ಗ್ಯಾಲರಿಯಲ್ಲಿನ ಇವರ ಚಿತ್ರಗಳು ಜನಾಕರ್ಷಣೆಗೆ ಪಾತ್ರವಾಗಿದೆ. ಈ ಬಾರಿ ಇವರು ರಚಿಸಿರುವ 40 ಪ್ರಮುಖ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

English summary
Girish is one of best painter in Alavas nudisiri at Moodabidri. He done above 40 paints in Alvas Nudisiri gallery art.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X