ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ತರಕಾರಿ ಬೆಲೆ ಕುಸಿತ, ಮಾಂಸಕ್ಕೆ ಬೇಡಿಕೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ. 24 : ಮಂಗಳೂರಿನ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಕುಸಿತಗೊಂಡಿದ್ದು ವ್ಯಾಪಾರಸ್ಥರಿಗೆ ಚಿಂತೆ ಉಂಟು ಮಾಡಿದೆ. ಸಂಕ್ರಾಂತಿ ಬಳಿಕ ತರಕಾರಿ ದರಗಳು ಕಡಿಮೆಯಾದರೆ, ಮೀನು ಮತ್ತು ಕೋಳಿಗಳ ಬೆಲೆಗಳು ಹೆಚ್ಚಾಗಿವೆ.

ಕಳೆದ ವಾರ ದುಬಾರಿಯಾಗಿದ್ದ ತರಕಾರಿಗಳು ಈ ವಾರ ಅಗ್ಗವಾಗಿವೆ. ಕೆಜಿಗೆ 20 ರೂ. ಇದ್ದ ಟೊಮೆಟೋ 16 ರೂ.ಗೆ ಇಳಿದಿದೆ. ನೂರರ ಮಟ್ಟಕ್ಕೆ ಏರಿದ್ದ ಮಟ್ಟು ಗುಳ್ಳ 45 ರೂ.ಗೆ ಇಳಿದಿದೆ. ಬೀನ್ಸ್ 20 ರೂ., ಆಲೂಗಡ್ಡೆ 26, ಬೆಂಡೆ 28, ಹೀರೆಕಾಯಿ 20 ರೂ.ಗೆ ಬಂದು ನಿಂತಿದೆ.

Mangaluru

ಅಯ್ಯಪ್ಪ ಮಾಲೆಧಾರಿಗಳು ಶಬರಿಮಲೆಗೆ ಭೇಟಿ ನೀಡಿ ವಾಪಸ್ ಬಂದಿದ್ದು ವೃತಾಚರಣೆ ಮುಕ್ತಾಯವಾಗಿದೆ. ಆದ್ದರಿಂದ, ಮೀನು ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ತರಕಾರಿ ಮಾರುಕಟ್ಟೆ ಖಾಲಿಯಾಗಿದೆ. ಶನಿವಾರ ಮತ್ತು ಭಾನುವಾರ ಕಾರ್ಯಕ್ರಮಗಳಿದ್ದರೆ ಮಾತ್ರ ಜನರು ಮಾರುಕಟ್ಟೆಗಳಿಗೆ ಆಗಮಿಸುತ್ತಿದ್ದಾರೆ.[ಮಂಗಳೂರು ಪಾಲಿಕೆ ವಿರುದ್ಧ ವಿನೂತನ ಪ್ರತಿಭಟನೆ]

ಹಣ್ಣು ಹಂಪಲು, ತರಕಾರಿಗೆ ಬೇಡಿಕೆ ಕಡಿಮೆಯಾಗಿದೆ ಸಮಾರಂಭಗಳು ಇಲ್ಲದಿರುವುದರಿಂದ ತರಕಾರಿ ಬಳಕೆ ಕಡಿಮೆಯಾಗಿರಬಹುದು ಎನ್ನುತ್ತಾರೆ ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲ್ಯಾನ್. [ತರಕಾರಿ ವ್ಯಾಪಾರಿಗಳಿಗೆ ನಷ್ಟ ಉಂಟುಮಾಡಿದ ಮಳೆ]

Vegetable

ಹಣ್ಣಿನ ಬೆಲೆ ಹೀಗಿದೆ : ಹಣ್ಣುಗಳ ಬೆಲೆಗಳಲ್ಲೂ ಇಳಿಕೆಯಾಗಿದೆ. ಕದಳಿ ಬಾಳೆಹಣ್ಣು ಕೆಜಿಗೆ 35 ರಿಂದ 40, ದಾಳಿಂಬೆ 90, ಸೇಬು 90 ರಿಂದ 120, ದ್ರಾಕ್ಷಿ 60 ರೂ.ಗಳಿಗೆ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಮೀನು, ಕೋಳಿಗೆ ಬೇಡಿಕೆ : ಮೀನು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದರೂ ಬೇಡಿಕೆಯೂ ಹೆಚ್ಚಾಗುತ್ತಿದೆ. ಕೋಳಿ ಮಾಂಸದ ದರ ಇಳಿದಿದೆ. ಬ್ರಾಯ್ಲರ್ ಕೆಜಿಗೆ 88 ರೂ. ದರವಿದೆ. ಸಿದ್ಧಪಡಿಸಿದ ಚರ್ಮ ರಹಿತ ಮಾಂಸದ ದರ 140 ರೂ. ಆಗಿದೆ. ಟೈಸನ್ ಕೋಳಿಗೆ 107 ರೂ.ದರವಿದೆ.

Mangaluru market
English summary
Prices of most of the vegetables decreased in the Mangaluru market. But demand creates for chicken and fish in market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X