ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆಯಲ್ಲಿ ಮೀನು ಬೇಟೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 24 : ಕಂಕನಾಡಿ ರೈಲ್ವೆ ನಿಲ್ದಾಣದ ಬಳಿ ಇರುವ ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆಯಲ್ಲಿ ಇಂದು ಮೀನು ಹಿಡಿಯಲಾಯಿತು. ಡಿವೈಎಫ್‌ಐ ನೇತೃತ್ವದಲ್ಲಿ ಜನರು ಮೀನು ಹಿಡಿಯುವ ಮೂಲಕ ಕಾಮಗಾರಿಯನ್ನು ವ್ಯಂಗ್ಯಮಾಡಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು, 'ಸೇತುವೆ ನಿರ್ಮಾಣದ ಅತ್ಯಾಧುನಿಕ ವ್ಯವಸ್ಥೆಗಳಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳ ಸಮನ್ವಯದ ಕೊರತೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ದೂರಿದರು. [ಮಳೆ ನೀರಿಗಾಗಿ ಕಟ್ಟಿದ್ರಾ ಪಡೀಲ್-ಬಜಾಲ್ ಸೇತುವೆ]

Padil

ನಿಖರವಾದ ಯೋಜನೆ ರೂಪಿಸದೇ ಕೆಳಸೇತುವೆ ನಿರ್ಮಾಣ ಮಾಡಿರುವ ಇಂಜಿನಿಯರ್ ಧರ್ಮರಾಜ್ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾನಿರತರು, ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದರೆ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು. [ಪಡೀಲ್ ಅಂಡರ್ ಪಾಸ್ ಕುಸಿತ, ಕಾರ್ಮಿಕ ಬಲಿ]

road

ಹಲವು ವರ್ಷಗಳ ನಿರಂತರ ಹೋರಾಟಗಳ ನಂತರ ಕೆಳ ಸೇತುವೆ ನಿರ್ಮಾಣವಾಗುತ್ತಿದೆ. ಆದರೆ, ಸೇತುವ ನಿರ್ಮಾಣದ ಬಳಿಕ ಫೈಸಲ್‌ನಗರ, ವೀರನಗರ, ವಿಜಯನಗರದ ಜನರಿಗೆ ಸಮಸ್ಯೆಯಾಗಿದೆ. ಈ ಭಾಗದ ಜನರು ಪಡೀಲ್ ಮುಖ್ಯ ರಸ್ತೆಯವರೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.

ಮಳೆ ಬಂದರೆ ಪಡೀಲ್-ಬಜಾಲ್ ರೈಲ್ವೆ ಕೆಲ ಸೇತುವೆ ತುಂಬಾ ನೀರು ತುಂಬಿಕೊಳ್ಳುತ್ತದೆ. ನೀರು ಹೊರ ಹೋಗಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಿಲ್ಲ. ನೀರು ತುಂಬಿಕೊಳ್ಳುವುದರಿಂದ ಬಜಲ್, ಜಲ್ಲಿಗುಡ್ಡೆ, ವೀರನಗರ, ಕರ್ಮಾರ್ ಪ್ರದೇಶಗಳ ಸಾವಿರಾರು ಜನರು ನಗರದ ಕಡೆಗೆ ಸಂಚರಿಸಲು ಪರದಾಡ ಬೇಕಾಗುತ್ತದೆ.

ಕಾಮಗಾರಿ ಮುಗಿಯುತ್ತಿಲ್ಲ : ಪಡೀಲ್-ಬಜಾಲ್ ರೈಲ್ವೇ ಕೆಳ ಸೇತುವೆಯು ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರು 2014ರ ಆಗಸ್ಟ್‌ನಲ್ಲಿ ಶಂಕುಸ್ಥಾಪನೆ ಮಾಡಿದ್ದರು. 5.61 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

English summary
Democratic Youth Federation of India (DYFI) staged a unique protest of fishing in the stagnant water at the Padil-Bajal railway underpass in Mangaluru, on June 24, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X