ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಗಿಡ ನೆಟ್ಟರೆ 300 ರೂ. ತರಕಾರಿ, ಹಣ್ಣು ಉಚಿತ!

|
Google Oneindia Kannada News

ಮಂಗಳೂರು, ಜೂನ್ 17 : ಒಂದೇ ಒಂದು ಗಿಡ ನೆಟ್ಟು ಫೋಟೋ ಕಳಿಸಿದರೆ 300 ರೂ. ಗಳಷ್ಟು ತರಕಾರಿ, ಹಣ್ಣು ಮಾಂಸವನ್ನು ಉಚಿತವಾಗಿ ಪಡೆಯಬಹುದು. ಹೌದು, ಈ ಕೊಡುಗೆ ಇರುವುದು ಮಂಗಳೂರಿನಲ್ಲಿ. ನಗರದ ಹೋಮ್ ಡೆಲಿವರಿ ಸಂಸ್ಥೆ ಟಾಸ್ಕಿ ವೆಂಚರ್ಸ್ ಇಂಥದ್ದೊಂದು ಪರಿಸರ ಸ್ನೇಹಿ ವಿಶೇಷ ಕೊಡುಗೆ ಆರಂಭಿಸಿದೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ ತಿಂಗಳಾದ್ಯಂತ ಹಸಿರು ಅಭಿಯಾನಕ್ಕೆ ಸಂಸ್ಥೆ ಮುಂದಾಗಿದೆ. ಜೂನ್ 8ರಂದು ಅಭಿಯಾನ ಆರಂಭವಾಗಿದ್ದು, ಎರಡೇ ವಾರದಲ್ಲಿ 90ಕ್ಕೂ ಹೆಚ್ಚು ಮಂದಿ ಗಿಡ ನೆಟ್ಟಿದ್ದಾರೆ. ಇನ್ನೂ 25 ದಿನಗಳ ಅವಕಾಶವನ್ನು ಸಂಸ್ಥೆ ನೀಡಿದೆ. [ಜೀತ್ ಮಿಲನ್ ಅವರ ಸಾರ್ಥಕ ಸೇವೆಗೆ ಸಲಾಂ]

mangaluru

ಗಿಡ ನೆಟ್ಟು ಫೋಟೀ ಕಳಿಸಿ : ಇಂಥದ್ದೇ ಗಿಡ ನೆಡಬೇಕು ಎನ್ನುವ ಯಾವುದೇ ಕಟ್ಟುಪಾಡು ಇಲ್ಲ. ಗಿಡ ನೆಡಬೇಕಾದ ಜಾಗ, ಗಿಡ ನೆಡುತ್ತಿರುವುದು ಹಾಗೂ ಗಿಡ ನೆಟ್ಟ ನಂತರದ ಮೂರು ಚಿತ್ರಗಳನ್ನು ಸಂಸ್ಥೆಯ ವಾಟ್ಸಾಪ್ ನಂಬರ್‌ 8095348444 ಗೆ ಕಳುಹಿಸಬೇಕು. ಕೂಡಲೇ ವೆರಿಫಿಕೇಶನ್ ಸಂದೇಶ ಬರುತ್ತದೆ. [15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?]

ಹೊಸ ಗ್ರಾಹಕರಾಗಿದ್ದಾರೆ ವಿಳಾಸ ನೀಡಬೇಕಾಗುತ್ತದೆ. ನೋಂದಾಯಿತ ಗ್ರಾಹಕರಿದ್ದಾರೆ ಸಂಸ್ಥೆಯು ತನ್ನ ಸಾಫ್ಟ್‌ವೇರ್‌ನಲ್ಲಿ ಉಚಿತ ಕೊಡುಗೆಯನ್ನು ದಾಖಲಿಸುತ್ತದೆ. ಮುಂದೆ ಯಾವುದೇ ಸಾಮಾಗ್ರಿ ಖರೀದಿಸಿದರೂ ನಿಮ್ಮ 300ರೂ. ಗಳಷ್ಟು ಉಚಿತ ಖರೀದಿ ಬಾಕಿ ಇದೆ ಎಂದು ಸಂದೇಶ ಕಳುಹಿಸುತ್ತಾರೆ. [ಗಿಡ ಬೆಳೆಸಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯಿರಿ!]

ಒಂದು ತಿಂಗಳ ಕಾಲಾವಕಾಶ ಗಿಡ ನೆಡಲು ಅವಕಾಶವಿದೆ. ಆದರೆ, 300 ರೂ. ಕೊಡುಗೆಯನ್ನು ವರ್ಷವಿಡೀ ಯಾವಾಗ ಬೇಕಾದರೂ ಪಡೆಯಬಹುದು. ಎಷ್ಟು ಮಂದಿ ಬೇಕಾದರೂ ಈ ಸೌಲಭ್ಯ ಪಡೆದುಕೊಳ್ಳಬಹುದು. [ಒಂದು ಮರ ಕಡಿದಲ್ಲಿ ಹತ್ತು ಗಿಡ ನೆಡುತ್ತೇವೆ]

ವಾಟ್ಸಾಪ್ ವಹಿವಾಟು : ಟಾಸ್ಕಿ ವೆಂಚರ್ಸ್ ಸಂಸ್ಥೆಯ ಇನ್ನೊಂದು ವಿಶೇಷವೆಂದರೆ ಇವರ ಇಡೀ ವ್ಯಾಪಾರ ನಡೆಯುತ್ತಿರುವುದು ವಾಟ್ಸಾಪ್ ಸಂದೇಶಗಳ ಮೂಲಕ ಮಾತ್ರ. ಯಾವುದೇ ಕರೆ ಅನಗತ್ಯ ಕಿರೀ ಕಿರಿ ಇಲ್ಲ . ಸಂಸ್ಥೆಯ ವಾಟ್ಸಾಪ್ ಸಂಖ್ಯೆಗೆ ಹೆಸರು, ವಿಳಾಸ ಕಳುಹಿಸಿ ಉಚಿತವಾಗಿ ನೋಂದಣಿ ಮಾಡಿದರೆ ಮುಗಿಯಿತು.

ಮುಂದೆ ಯಾವಾಗ ಬೇಕಾದರೂ ಸಾಮಗ್ರಿಗಳ ಪಟ್ಟಿ ಕಳುಹಿಸಿದರೆ ಒಂದೂವರೆ ಗಂಟೆಯೊಳಗೆ ಆ ವಸ್ತು ಮನೆ ಬಾಗಿಲಿಗೆ ಬರುತ್ತದೆ. ಈ ಸಂಸ್ಥೆ ಆರಂಭವಾಗಿ 3-4 ತಿಂಗಳಷ್ಟೇ ಆಗಿದೆ. 8 ಸಾವಿರ ಮಂದಿ ಸಕ್ರಿಯ ಗ್ರಾಹಕರಿದ್ದಾರೆ.

ವ್ಯಾಪಾರದ ದೃಷ್ಟಿಕೋನದಿಂದ ಈ ಅಭಿಯಾನವನ್ನು ನಡೆಸುತ್ತಿಲ್ಲ. ಇದರಿಂದ ನಷ್ಟವಾದರೂ ಹಸಿರೀಕರಣದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎನ್ನುವ ತೃಪ್ತಿ ಇದೆ. ತಿಂಗಳ ಹಿಂದೆ ಮಂಗಳೂರಿನಲ್ಲಿ ನೀರಿನ ಕೊರತೆ ಉಂಟಾದಾಗ ಹಸಿರೀಕರಣ ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕೆಂದು ಉದ್ದೇಶಿಸಿದ್ದೆವು ಎನ್ನುತ್ತಾರೆ ಸಂಸ್ಥೆಯವರು.

English summary
Plant a tree and get fish and vegetables worth Rs 300. Mangaluru based Tacskey Ventures launched plant a tree special campaign in the month of June 2016. Tacskey Ventures replaces the traditional way of buying with an app-based home-delivery service. An order placed through WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X