ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರೋನ್ ದಾಳಿಗೆ ಕಾಸರಗೋಡಿನ ಇಬ್ಬರು ಐಸಿಸ್ ಉಗ್ರರು ಬಲಿ

ಮನೆ ಬಿಟ್ಟು ಐಸಿಸ್ ಸಂಘಟನೆ ಸೇರಿದ್ದ ಕಾಸರಗೋಡು ಮೂಲದ ಇಬ್ಬರು ಯುವಕರು ಅಫ್ಘಾನಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

By Sachhidananda Acharya
|
Google Oneindia Kannada News

ಮಂಗಳೂರು, ಫೆಬ್ರವರಿ 27: ಮನೆ ಬಿಟ್ಟು ಐಸಿಸ್ ಸಂಘಟನೆ ಸೇರಿದ್ದ ಕಾಸರಗೋಡು ಮೂಲದ ಇಬ್ಬರು ಯುವಕರು ಅಫ್ಘಾನಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತರಲ್ಲಿ ಒಬ್ಬ ಕಾಸರಗೋಡು ಪಡನ್ನದ ಹಫೀಸುದ್ದೀನ ಎಂದು ಗುರುತಿಸಲಾಗಿದೆ. ಈ ಕುರಿತು ಹಫೀಸ್ ಮನೆಯವರಿಗೆ ಟೆಲಿಗ್ರಾಂ ಮೊಬೈಲ್ ಆ್ಯಪ್ ಮೂಲಕ ಅಶ್ಫಕ್‌ ಮಜೀದ್‌ ಎಂಬ ಮತ್ತೊಬ್ಬ ಉಗ್ರನಿಂದ ಮಾಹಿತಿ ಬಂದಿದೆ ಎಂದು ಎನ್ಐಎ ಮೂಲಗಳು ಹೇಳಿವೆ.[ಐಸಿಸ್ ನ ಲೈಂಗಿಕ ಕ್ರೌರ್ಯಕ್ಕೆ ನಲುಗಿದವಳ ಕರುಳು ಹಿಂಡುವ ಕಥೆ]

Two Kerala origin ISIS terrorists killed in a drone attack

ಒಟ್ಟಾರೆ ಇಲ್ಲಿವರೆಗೆ ಕೇರಳದಿಂದ 21 ಜನ ಐಸಿಸ್ ಸಂಘಟನೆ ಸೇರಿದ್ದಾರೆ ಎನ್ನಲಾಗಿದೆ. ಇದರಲ್ಲಿ 2016ರಲ್ಲೇ 17 ಜನ ಐಸಿಸ್ ಸಂಘಟನೆ ಸೇರಿದ್ದರೆ, ಇದರಲ್ಲಿ 11 ಜನ ಕಾಸರಗೋಡಿನ ಪಡನ್ನಾ ನಿವಾಸಿಗಳಾಗಿದ್ದಾರೆ. ಇವರಲ್ಲಿ ಈಗ ಇಬ್ಬರು ಸಾವನ್ನಪ್ಪಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಐಸಿಸ್ ನೆಲೆಗಳ ಮೇಲೆ ನಿರಂತರ ಬಾಂಬ್ ದಾಳಿ ನಡೆಯುತ್ತಿದ್ದು, ಶನಿವಾರ ನಡೆದ ಡ್ರೋನ್ ದಾಳಿಯಲ್ಲಿ ಒಟ್ಟು 7 ಜನ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ಮಾಧ್ಯಮಗಳು ಹೇಳಿವೆ. ಇದರಲ್ಲಿ ಇಬ್ಬರು ಕರ್ನಾಟಕದ ಕಾಸರಗೋಡಿನವರಾಗಿದ್ದಾರೆ.[ಐಸಿಸ್ ನಂಟು, ಕಾಸರಗೋಡಿನ ವ್ಯಕ್ತಿ ದೆಹಲಿಯಲ್ಲಿ ಬಂಧನ]

ಹಫೀಸುದ್ದೀನ್ ಮೊದಲು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದ. ಉತ್ತಮ ಸಂಬಳವನ್ನೂ ಪಡೆಯುತ್ತಿದ್ದ ಎನ್ನಲಾಗಿದೆ. ಆದರೆ ರಜೆಗೆಂದು ಊರಿಗೆ ಬಂದಿದ್ದವ ಅಬ್ದುಲ್ ರಶೀದ್ ಎಂಬಾತನ ಸಂಪರ್ಕಕ್ಕೆ ಬಂದು ಐಸಿದ್ ಉಗ್ರ ಸಂಘಟನೆ ಸೇರಿದ್ದ.

English summary
Two Indian origin ISIS terrorists killed in a drone attack at Afghanistan on Saturday. Both of them belongings to the place called Padnna in Kasaragod district of Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X