ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುರುವಾಯಿತು ಟೋಲ್ ಸಂಗ್ರಹ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ. 01 : ಚತುಷ್ಪಥವಾಗಿ ಮೇಲ್ದರ್ಜೆಗೇರಿರುವ ಕರಾವಳಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ.

ಇನ್ನು ತಲಪಾಡಿ, ಹೆಜಮಾಡಿ ಹಾಗೂ ಗುಂಡ್ಮಿ ಟೋಲ್ ಗೇಟ್‌ ಗಳಲ್ಲಿ ಸಹ ಟೋಲ್ ಸಂಗ್ರಹ ಆರಂಭವಾಗಿದೆ. ಹೊಸದಾಗಿ ಮೂರೂ ಕೇಂದ್ರಗಳಲ್ಲಿ ಟೋಲ್ ಪಾವತಿಸಬೇಕಾಗಿರುವುದರಿಂದ ಕುಂದಾಪುರ ಕಡೆಯಿಂದ ಕಾಸರಗೋಡಿಗೆ ತೆರಳುವವರು ಇನ್ನು ನಾಲ್ಕು ಕೇಂದ್ರಗಳಲ್ಲಿ ಸುಂಕ ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಲಿದ್ದಾರೆ.

ಸದ್ಯ ಸುರತ್ಕಲ್ ಸಮೀಪದ ಎನ್‌ಐಟಿಕೆ ಪರಿಸರದಲ್ಲಿ ಒಂದು ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ. ಇದೀಗ ಮೂರು ಟೋಲ್ ಗೇಟ್ ಕಾರ್ಯಾರಂಭಿಸಿದರೂ ಎನ್‌ಐಟಿಕೆ ಬಳಿಯಿರುವ ಟೋಲ್ ಗೇಟ್ ಅಸ್ತಿತ್ವದಲ್ಲಿರಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಟೋಲ್ ದರಗಳ ವಿವರ:

ಟೋಲ್ ದರಗಳ ವಿವರ:

40, 30, 35 ರೂ. : ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖಿ ಸಂಚಾರಕ್ಕೆ ಕ್ರಮವಾಗಿ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ 40, 30 ಹಾಗೂ 35 ರೂ. ಪಾವತಿಸಬೇಕಾಗುತ್ತದೆ. ದ್ವಿತೀಯ ಸಂಚಾರಕ್ಕೆ ಕ್ರಮವಾಗಿ 60, 45 ಹಾಗೂ 50 ರೂ. ಪಾವತಿಸಬೇಕಾಗುತ್ತದೆ.

ಬಸ್ ಗಳಿಗೆ ಸುಂಕ

ಬಸ್ ಗಳಿಗೆ ಸುಂಕ

ಬಸ್ ಮತ್ತು ಟ್ರಕ್ ಗಳಿಗೆ ಸಮಾನ ರೀತಿಯ ಸುಂಕ ನಿಗದಿಗೊಳಿಸಲಾಗಿದ್ದು, ಗುಂಡ್ಮಿಯಲ್ಲಿ ಏಕಮುಖ ಸಂಚಾರಕ್ಕೆ 130 ಮತ್ತು ದ್ವಿಮುಖ ಸಂಚಾರಕ್ಕೆ 195 ರೂ. ನಿಗದಿಗೊಳಿಸಲಾಗಿದೆ. ಹೆಜಮಾಡಿಯಲ್ಲಿ 105 ರೂ. (ಏಕಮುಖ) ಮತ್ತು 160 ರೂ. (ದ್ವಿಮುಖ) ಹಾಗೂ ತಲಪಾಡಿಯಲ್ಲಿ 110 ರೂ. (ಏಕಮುಖ) ಹಾಗೂ 165 ರೂ. (ದ್ವಿಮುಖ) ಶುಲ್ಕ ನಿಗದಿಪಡಿಸಲಾಗಿದೆ.

ಮಾಸಿಕ ಪಾಸ್

ಮಾಸಿಕ ಪಾಸ್

ಪ್ರತಿನಿತ್ಯ ಸಂಚರಿಸುವ ವಾಣಿಜ್ಯ ಉದ್ದೇಶದ ವಾಹನಗಳಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಮಾಸಿಕ ಪಾಸ್ ಪಡೆದ ವಾಹನಗಳು ತಿಂಗಳಿಗೆ 50 ಬಾರಿ ನಿಗದಿತ ಟೋಲ್ ಮೂಲಕ ಸಂಚರಿಸಬಹುದು.

ಸ್ಥಳೀಯರಿಗೆ ವಿಶೇಷ ಪಾಸ್

ಸ್ಥಳೀಯರಿಗೆ ವಿಶೇಷ ಪಾಸ್

ಟೋಲ್ ಗೇಟ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರು ವಾಣಿಜ್ಯೇತರ ಉದ್ದೇಶಗಳಿಗಾಗಿ ನೋಂದಾಯಿಸಿದ ವಾಹನಗಳಿಗೆ ರಿಯಾಯಿತಿ ದರದ ಪಾಸ್ ನೀಡಲಾಗುತ್ತಿದೆ. ಈ ವಿಶೇಷ ಪಾಸ್‌ಗಳಿಗೆ ಮಾಸಿಕ 235 ರೂ. ಪಾವತಿಸಬೇಕಾಗುತ್ತದೆ.

English summary
Toll collection on NH 66 starts, now pay charges at 4 toll gates. Collection without incomplition of work makes publich go angry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X