ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ನಂತೂರು ಸರ್ಕಲ್‌ಗೆ ಮತ್ತೆ 3 ಬಲಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಫೆ. 28 : ಮಂಗಳೂರಿನ ನಂತೂರು ವೃತ್ತದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಘಾತದ ನಂತರ ಜನರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಘು ಲಾಠಿ ಚಾರ್ಚ್‌ ನಡೆಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಮೃತರನ್ನು ಮಂಜೇಶ್ವರದ ನಿವಾಸಿ ವೀಣಾ (40), ಪುತ್ರ ನಿತೇಶ್ (12) ಮತ್ತು ಉಳ್ಳಾಲ ಮೂಲದ ಪ್ರೀತಂ (21) ಎಂದು ಗುರುತಿಸಲಾಗಿದೆ. ಕೃಷ್ಣ (45) ಮತ್ತು ನಿಕಿತಾ (9) ಹಾಗೂ ಶ್ವೇತಾ ಎಂಬುವವರು ಅಪಘಾತದಲ್ಲಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ನಂತೂರು : ಬಸ್ ಅಪಘಾತ, 2 ಸಾವು]

Nantoor Junction

ಘಟನೆಯ ವಿವರ : ಶುಕ್ರವಾರ ಸಂಜೆ ಟಿಪ್ಪರ್ ಲಾರಿ ಕೆಪಿಟಿ ಮೂಲಕ ನಂತೂರು ವೃತ್ತದ ಕಡೆಗೆ ಸಾಗುತ್ತಿತ್ತು. ಈ ಸಂದರ್ಭ ಬೃಹತ್ ಕ್ರೇನ್ ಒಂದು ವೃತ್ತದಲ್ಲಿ ಟಯರ್ ಪಂಕ್ಚರ್ ಆಗಿ ನಿಂತಿತ್ತು. ಲಾರಿಯ ಬ್ರೇಕ್ ವೈಫಲ್ಯದಿಂದಾಗಿ ಅದು ಮೊದಲು ಕ್ರೇನ್‌ಗೆ ಡಿಕ್ಕಿ ಹೊಡೆದು ನಂತರ ಲೈಟ್‌ಕಂಬಕ್ಕೆ ಗುದ್ದಿತು.[ಮಂಗಳೂರು : ನಂತೂರು ವೃತ್ತದಲ್ಲಿ ಉರುಳಿ ಬಿದ್ದ ಲಾರಿ]

ಚಾಲಕ ಲಾರಿಯನ್ನು ವೃತ್ತದಲ್ಲೇ ಮಲ್ಲಿಕಟ್ಟೆ ರಸ್ತೆ ಕಡೆಗೆ ತಿರುಗಿಸಲು ಪ್ರಯತ್ನ ನಡೆಸಿದಾಗ ನಿಯಂತ್ರಣ ತಪ್ಪಿ, ಕಾರು ಮತ್ತು ಬೈಕ್ ಮೇಲೆ ಉರುಳಿ ಬಿದ್ದಿದೆ. ಟಿಪ್ಪರ್‌ನಲ್ಲಿ ಡಾಂಬರ್ ತುಂಬಿದ್ದರಿಂದ ಕಾರು ಅಪ್ಪಚ್ಚಿಯಾಗಿದೆ. ಬೈಕ್ ಕೂಡಾ ಲಾರಿ ಅಡಿಗೆ ಬಿದ್ದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಲಾರಿ ಅಡಿಗೆ ಸಿಲುಕಿ ಒದ್ದಾಡುತ್ತಿದ್ದರು. ವೀಣಾ ಹಾಗೂ ನಿತೇಶ್ ಸ್ಥಳದಲ್ಲೇ ಮೃತಪಟ್ಟರೆ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಪಘಾತ ನಡೆದ ಬಳಿಕ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲೆತ್ತಿ, ಸಿಲುಕಿದ್ದವರನ್ನು ರಕ್ಷಿಸಲಾಯಿತು.

accident,

ನಂತೂರು ಸರ್ಕಲ್‌ಗೆ ಎಷ್ಟು ಬಲಿ : ನಂತೂರು ಸರ್ಕಲ್‌ನಲ್ಲಿ ಅಪಘಾತ ಇದೇ ಮೊದಲಲ್ಲ. 2014ರ ಮೇ 6ರಂದು ಬೆಳಗ್ಗೆ ಎರಡು ಲಾರಿಗಳು ಡಿಕ್ಕಿ ಹೊಡೆದು ಒಂದರ ಮೇಲೊಂದು ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸಿತ್ತು. 2014ರ ಜೂ.13, 2014ರ ನ.26ರಂದು ವೃತ್ತದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಬಲಿಯಾಗಿದ್ದರು.

mangaluru

ವೃತ್ತದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸಂಚಾರಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಆದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

English summary
Three died and three others injured after a truck carrying tar rammed into vehicles at Nantoor Junction in Mangaluru on Friday, February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X