ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೂ ಬಂತು ಕನ್ನಡ ಏಕೀಕರಣ ರಥ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 10: ಕರ್ನಾಟಕ ಏಕೀಕರಣದ ಕನ್ನಡ ರಥ ವಿಶೇಷ ಪ್ರಚಾರಾಂದೋಲನ ಯಾತ್ರೆಯು ಇಂದು ನಗರಕ್ಕೆ ಆಗಮಿಸಿದೆ.

ಏಕೀಕರಣದ ವಜ್ರ ಮಹೋತ್ಸವದ ಪ್ರಯುಕ್ತ ನವೆಂಬರ್ 1ರಿಂದ 15 ದಿನಗಳ ಕಾಲ ರಾಜ್ಯಾದ್ಯಂತ ನಡೆಯುತ್ತಿರುವ ಕನ್ನಡ ಪ್ರಚಾರಕ್ಕೆ ಬಂದಿರುವ ರಥವನ್ನು ಮೇಯರ್ ಹರಿನಾಥ್ ಸ್ವಾಗತಿಸಿದರು.

ನಗರದ ಪುರಭವನದ ಆವರಣದಲ್ಲಿ ಮೇಯರ್ ಹರಿನಾಥ್ ಕರ್ನಾಟಕ ರಥದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಹಲವು ಮಹನೀಯರು ಮಾಡಿದ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರು.['ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ರಥ ನಿಮ್ಮ ಜಿಲ್ಲೆಗೆ]

the Ekeekarana Tableaux came to Mangluru

ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಆಂಗ್ಲ ವ್ಯಾಮೋಹ ಹೆಚ್ಚಿರುವ ಇಂದಿನ ಪರಿಸ್ಥಿತಿಯಲ್ಲಿ ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿ ಉಳಿಸೋಣ ಎಂದರು. ತುಳುವರಾಗಿ ಬದುಕೋಣ ಆದರೆ, ಕರ್ನಾಟಕ ರಾಜ್ಯದಿಂದ ಪ್ರತ್ಯೇಕವಾಗುವ ಚಿಂತನೆ ಬೇಡ ಎಂದರು.[ಕರ್ನಾಟಕ ಏಕೀಕರಣಕ್ಕೆ 60ರ ಸಂಭ್ರಮ, ರಾಜ್ಯದ ಎಲ್ಲೆಡೆ ಕನ್ನಡ ರಥ]

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ, ಯಕ್ಷಗಾನ ಕಲಾವಿದ ಗಿರೀಶ್ ನಾವಡ, ಪಾಲಿಕೆ ಸಚೇತಕ ಶಶಿಧರ ಹೆಗ್ಡೆ, ವಾರ್ತಾಧಿಕಾರಿ ಖಾದರ್ ಶಾ ಮೊದಲಾದವರಿದ್ದರು.

ಬಳಿಕ ಪುರಭವನದಲ್ಲಿ ಕನ್ನಡ ಚಿತ್ರಗೀತೆಗಳ ಸುಮಧುರ ಗೀತೆಗಳ 'ಗಾನಯಾನ' ನಡೆಯಿತು. ವಾರ್ತಾ ಇಲಾಖೆಯಿಂದ ಕಾರ್ಯಕ್ರಮ ಜರುಗಿತು.

English summary
Tableaux celebrating the 60 years of the unification of Karnataka state. The "Ekeekarana Tableaux" came to Mangluru. welcomed Meyar Harinath and Inaugurate the programe in manglore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X