ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.11ರಿಂದ ಮಂಗ್ಳೂರಿನಲ್ಲಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ.10 : ನಗರದ ದೇಶದಲ್ಲೇ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ 11 ಮತ್ತು 12ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಖ್ಯಾತ ವಾಗ್ಮಿ
ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ನಗದರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಮ್ಮೇಳನಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದೆ. ಅಲ್ಲಲ್ಲಿ ಅರಳಿರುವ ವರ್ಲಿ ಚಿತ್ತಾರಗಳು , ಗೋಡೆ ಬರಹಗಳು ಆಸಕ್ತರನ್ನು ಸ್ವಾಗತಿಸುತ್ತಿದೆ. ಯುವ ಬ್ರಿಗೇಡ್ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನ ಈ ಸಮ್ಮೇಳನದ ನೇತೃತ್ವ ವಹಿಸಿದೆ ಎಂದರು.

Swami Vivekananda Akka Niveditha Sahitya Sammelan to be held in mangaluru on Feb 11 to 12

ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾರ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಪ್ರಯತ್ನವಿದು. ಈಗಾಗಲೇ ನೆಹರು ಮೈದಾನ ರಾಷ್ಟ್ರ ಜಾಗರಣದ ಸಾಹಿತ್ಯ ಜಾತ್ರೆಗೆ ಸಿದ್ದಗೊಳ್ಳುತ್ತಿದೆ.

ಭಿತ್ತಿಪಾತ್ರಗಳಿಂದ ಕಳೆಗುಂದಿದ್ದ ನಗರದ ಗೋಡೆಗಳಿಗೆ ವರ್ಲಿ ಚಿತ್ತಾರಗಳು ಮೆರಗು ನೀಡಿವೆ. ಈ ಸಮ್ಮೇಳನದಲ್ಲಿ ವಿವಿಧ ಸಾಧು-ಸಂತರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ಒಟ್ಟು ಏಳು ಗೋಷ್ಟಿಗಳಿದ್ದು, ಸ್ವಾಮಿ ವಿವೇಕಾನಂದರ ಪ್ರೇರಣೆ ಪಡೆದು ಸಮಾಜಕ್ಕೆ ದಾರಿ ದೀಪವಾದ 40 ಸಂಘಟನೆಗಳ ಸ್ಟಾಲ್ ಗಳನ್ನು ಅಳವಡಿಸಲಾಗುತ್ತದೆ.

ವಿಶೇಷ ವಸ್ತು ಪ್ರದರ್ಶನ, ಸಾಧಕರ ಸವಿಗತೆಗಳು , ಸಾರ್ವಜನಿಕರಿಗಾಗಿಯೇ ಪ್ರೇರಣಾದಾಯಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

English summary
Nation's First Ever Swami Vivekananda Akka Niveditha Sahitya Sammelan to be held on February 11th and 12th, 2017 at Nehru ground Mangaluru said chakravarthy sulibele in a press meet held here on 9th feb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X