ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ, ವ್ಯಕ್ತಿ ಬಂಧನ

By ಕಿರಣ್ ಸಿರ್ಸೀಕರ್
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 19: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ದುಬೈ ಮೂಲದ ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲನೆ ವೇಳೆ ದೊರೆತ ಪವರ್ ಬ್ಯಾಂಕ್ ವೊಂದು ಅನುಮಾನಕ್ಕೆ ಕಾರಣವಾಯಿತು. ಇಂಡಿಗೋ ವಿಮಾನವು ಮಂಗಳೂರಿನಿಂದ ದುಬೈಗೆ ತೆರಳಬೇಕಿತ್ತು. ಆ ವೇಳೆ ಬಾಂಬ್ ರೀತಿಯ ವಸ್ತು ಪತ್ತೆಯಾದ್ದರಿಂದ ಗೊಂದಲವುಂಟಾಯಿತು.

"ಇಂಡಿಗೋ ವಿಮಾನದ ಭದ್ರತೆ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಸೆಲ್ ಫೋನ್ ಬಾಂಬ್ ನಂಥದು ಪತ್ತೆಯಾಗಿದೆ. ಆ ಕೂಡಲೇ ವಿಚಾರವನ್ನು ಸ್ಥಳೀಯ ಪೊಲೀಸರಿಗೆ ಮುಟ್ಟಿಸಲಾಯಿತು. ಇದು ಸೂಕ್ಷ್ಮವಾದ ವಿಚಾರವಾದ್ದರಿಂದ ಇದಕ್ಕಿಂತ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಇಂಡಿಗೋ ವಿಮಾನ ಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ಯಾವಾಗಲೂ ಉತ್ತಮ ಸೇವೆ ಒದಗಿಸಲಾಗುತ್ತಿದೆ" ಎಂದು ವಿಮಾನ ಯಾನ ಕಂಪೆನಿಯು ಟ್ವೀಟ್ ಗಳಲ್ಲಿ ತಿಳಿಸಿದೆ.

ಕದ್ದ ಚಿನ್ನವನ್ನು ಮನೆಯ ಮುಂದೆ ಎಸೆದು ಹೋದ ಕಳ್ಳರು!ಕದ್ದ ಚಿನ್ನವನ್ನು ಮನೆಯ ಮುಂದೆ ಎಸೆದು ಹೋದ ಕಳ್ಳರು!

ಶ್ವಾನ ದಳವು ಕೂಡ ಮಿಶ್ರವಾದ ಸನ್ನೆಗಳನ್ನು ನೀಡಿದೆ. ಅದರರ್ಥ ಅದು ಸ್ಫೋಟಕವಾದರೂ ಆಗಿರಬಹುದು ಅಥವಾ ರಾಸಾಯನಿಕ ಕೂಡ ಇರಬಹುದು. ಆದರೆ ಅದು ಸ್ಫೋಟಕದಂತಿಲ್ಲ ಎಂದು ತಿಳಿದುಬಂದಿದೆ. ಆದರೆ ನಾಗರಿಕ ವಿಮಾನ ಯಾನ ಭದ್ರತಾ ದಳದ ಮುಖ್ಯಸ್ಥ ರಾಜೇಶ್ ಕುಮಾರ್ ಚಂದ್ರ ಸೂಚನೆ ನೀಡಿದ್ದು, ಆ ವಸ್ತುವನ್ನು ಒಯ್ಯುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

Power Bank

ಆ ವಸ್ತುವನ್ನು ವಿಮಾನದೊಳಕ್ಕೆ ಏಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಯಿತು ಎಂಬ ಬಗ್ಗೆ ತನಿಖೆ ನಡೆಯಲಿದೆ.

ಬೆಳ್ಳಂಬೆಳಿಗ್ಗೆ ಮಂಗಳೂರು ಜೈಲ್ ಮೇಲೆ ಪೊಲೀಸರ ದಾಳಿಬೆಳ್ಳಂಬೆಳಿಗ್ಗೆ ಮಂಗಳೂರು ಜೈಲ್ ಮೇಲೆ ಪೊಲೀಸರ ದಾಳಿ

ಈ ಸಂಬಂಧ ಎಂ.ಮೊಹಮ್ಮದ್ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಆತ ಮಂಗಳೂರಿನಿಂದ ಬೆಂಗಳೂರಿಗೆ, ಆ ನಂತರ ಬೆಂಗಳೂರಿನಿಂದ ದುಬೈಗೆ ತೆರಳಬೇಕಿತ್ತು. ಮೊಹಮ್ಮದ್ ಬ್ಯಾಗ್ ಪರಿಶೀಲಿಸುವ ವೇಳೆಯಲ್ಲಿ ಅನುಮಾನಾಸ್ಪದ ಮಾದರಿಯಲ್ಲಿ ಪವರ್ ಬ್ಯಾಂಕ್ ಸಿಕ್ಕಿದೆ. ಅದರೊಳಗೆ ಪತ್ತೆಯಾದ ವಸ್ತುವಿನ ಬಗ್ಗೆ ತನಿಖೆ ನಡೆಯಬೇಕಿದೆ.

ಭಯೋತ್ಪಾದಕರು ರಾಸಾಯನಿಕ ದಾಳಿ ನಡೆಸಬಹುದು ಎಂಬ ಮಾಹಿತಿ ಇದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡಲಾಗಿದೆ.

English summary
In a major scare at Mangalore Airport on Tuesday, a Dubai-bound passenger's power bank was found to have a suspicious clay-like object in his check-in baggage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X