ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವ ಶಿವಾ.. ದಕ್ಷಿಣ ಕನ್ನಡದಲ್ಲಿ ಬಿಸಿಲ ಬೇಗೆ ತಡೆಯಲಾಗುತ್ತಿಲ್ಲ

ಸಾಮಾನ್ಯವಾಗಿ ಕಡಲತಡಿಯ ನಗರ ಮಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ಬಾರಿ ತಾಪಮಾನ ಎಂದಿಗಿಂತ ಹೆಚ್ಚಾಗಿದ್ದು 38.7 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ 7 ಡಿಗ್ರಿ ಹೆಚ್ಚಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲ ಕಾವು ಹೆಚ್ಚಾಗುತ್ತಿದೆ. ಇದರಿಂದ ಜನರು ಮನೆಯಿಂದ ಹೊರಗಡೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಂತಲ್ಲಿ, ಕೂತಲ್ಲಿ, ನಡೆದಾಡಿದಲ್ಲಿ ಬೆವರು ನೀರಿನಂತೆ ಮೈಯಿಂದ ಇಳಿಯುತ್ತಿದೆ.

ಸಾಮಾನ್ಯವಾಗಿ ಕಡಲತಡಿಯ ನಗರ ಮಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿಯೇ ಇರುತ್ತದೆ. ಆದರೆ ಈ ಬಾರಿ ತಾಪಮಾನ ಎಂದಿಗಿಂತ ಹೆಚ್ಚಾಗಿದ್ದು 38.7 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ 7 ಡಿಗ್ರಿ ಹೆಚ್ಚು ಎಂದು ಪಣಂಬೂರು ತಾಪಮಾನ ವೀಕ್ಷಣಾಲಯ ಹೇಳಿದೆ.[ಮರದಿಂದ ಕೆಳಗೆ ಬಿದ್ದಿದ್ದ ದೈವ ಕೋಲಾಧಿಕಾರಿ ಸಾವು]

Summer: Record highest temperature in Mangaluru and Karavara in February

ಭಾರತೀಯ ಹವಾಮಾನ ಇಲಾಖೆ ಮಂಗಳೂರು ನಗರ ಪ್ರದೇಶದ ತಾಪಮಾನ ದಾಖಲಾತಿ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಫೆಬ್ರುವರಿ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯ ತಾಪಮಾನ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಗರಿಷ್ಟ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಈ ಬಾರಿ 38.7 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಇನ್ನು ಕಳೆದ ವರ್ಷ ಫೆಬ್ರುವರಿ ತಿಂಗಳ ಗರಿಷ್ಠ ತಾಪಮಾನ ಫೆ. 19ರಂದು ದಾಖಲಾಗಿತ್ತು. ಅವತ್ತು ಗರಿಷ್ಟ 38.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಸವಿತ್ತು. ಆದರೆ ಈ ಬಾರಿ ಆ ದಾಖಲೆ ಮುರಿದಿದೆ.

ಮಂಗಳೂರಿನಲ್ಲಿ ಮಾತ್ರವಲ್ಲ ಸಮುದ್ರದ ಬದಿಯಲ್ಲಿರುವ ಹೊನ್ನಾವರ ಮತ್ತು ಕಾರವಾರಗಳಲ್ಲೂ ಇದೇ ರೀತಿಯ ತಾಪಮಾನ ಕಂಡುಬಂದಿದೆ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]

ಕಾರವಾರದಲ್ಲಿ ಬುಧವಾರ 38.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಸಾಮಾನ್ಯ ಗರಿಷ್ಟ ತಾಪಮಾನಕ್ಕಿಂತ 6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಾರವಾರದಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 39.1 ಡಿಗ್ರಿ ಸೆಲ್ಸಿಯಸ್ 2009 ರ ಫೆಬ್ರುವರಿ 21 ರಂದು ದಾಖಲಾಗಿತ್ತು.

ಹೊನ್ನಾವರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಸಾಮಾನ್ಯ ಗರಿಷ್ಟ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ.

ಒಟ್ಟಿನಲ್ಲಿ ಮಧ್ಯಾಹ್ನ ಯಾತಕ್ಕಾಗಿ ಬಂತು ಅಂತಾ ಜನರು ಮಾತಾಡಿಕೊಂಡರೆ ಬೀದಿ ಬದಿ ಹಾಗೂ ಪಾನೀಯಗಳನ್ನ ಮಾರುವ ವ್ಯಾಪಾರಿಗಳಿಗೆ ಮಾತ್ರ ಭರ್ಜರಿ ವ್ಯಾಪಾರವಾಗುತ್ತಿದೆ.

English summary
Highest temperature was recorded in coastal cities of Karnataka, Mangalore, Karavar and Honnavara in the month of February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X