ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿನ್ನೆಸ್ ದಾಖಲೆ ಸೇರಲಿದೆ ಭವಿಷ್ಯತ್ತಿಗಾಗಿ ಯೋಗ ಪ್ರದರ್ಶನ!

By ಜನನಿ ಧರ್ಮಸ್ಥಳ
|
Google Oneindia Kannada News

ಮಂಗಳೂರು, ಡಿ.14 : ಶುಕ್ರವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಯೋಗ ಪ್ರದರ್ಶನವನ್ನು ವಿದ್ಯಾರ್ಥಿಗಳು ನೀಡಿದ್ದು, ಇದು ಗಿನ್ನೆಸ್ ದಾಖಲೆ ಸೇರುವ ಸಾಧ್ಯತೆ ಇದೆ. ಒಟ್ಟು 47 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆದ ಯೋಗಾಭ್ಯಾಸದಲ್ಲಿ 67,598 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರದರ್ಶನದ ವೀಡಿಯೋವನ್ನು ಕಳುಹಿಸಲಾಗುತ್ತಿದ್ದು, ಗಿನ್ನೆಸ್ ದೃಢೀಕರಣ ಮಾತ್ರ ಬಾಕಿಯಿದೆ.

ಈ ಬೃಹತ್ ಯೋಗಾಭ್ಯಾಸ ಶಿಬಿರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ದ.ಕ.ಜಿಲ್ಲೆಯ 10, ಉಡುಪಿ ಜಿಲ್ಲೆಯ 37 ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಯಿತು. ಬೆಳಗ್ಗೆ 10 ಗಂಟೆಗೆ ಆರಂಭವಾದ ಯೋಗ ಪ್ರಾತ್ಯಕ್ಷಿಕೆ, 10.31ಕ್ಕೆ ಮುಕ್ತಾಯವಾಯಿತು.

ಹಿಂದೆ 2003ರಲ್ಲಿ ಜರ್ಮನಿಯಲ್ಲಿ ಏಕಕಾಲದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆದಿತ್ತು, ಅದರಲ್ಲಿ 15 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ, 2005ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ಸಾಮೂಹಿಕ ಯೋಗದಲ್ಲಿ 29 ಸಾವಿರ ಮಂದಿ ಪಾಲ್ಗೊಂಡಿದ್ದರು. ಇವು ಹಿಂದಿನ ಗಿನ್ನೆಸ್ ದಾಖಲೆಗಳಾಗಿತ್ತು. ಶುಕ್ರವಾರ ನಡೆದ ಪ್ರದರ್ಶನದಲ್ಲಿ 67,598 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯೋಗ ಪ್ರದರ್ಶನದ ವಿವರಗಳು

ಭವಿಷ್ಯತ್ತಿಗಾಗಿ ಯೋಗ

ಭವಿಷ್ಯತ್ತಿಗಾಗಿ ಯೋಗ

ಭವಿಷ್ಯತ್ತಿಗಾಗಿ ಯೋಗ ಎಂಬ ಶಿರ್ಷಿಕೆಯಡಿ ಬೃಹತ್ ಯೋಗ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 47 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆದ ಯೋಗಾಭ್ಯಾಸದಲ್ಲಿ 67,598 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಯೋಜಕರು ಯಾರು?

ಆಯೋಜಕರು ಯಾರು?

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಯೋಗ ಪ್ರದರ್ಶನವನ್ನು ಆಯೋಜಿಸಿದ್ದರು. ದ.ಕ.ಜಿಲ್ಲೆಯ 10, ಉಡುಪಿ ಜಿಲ್ಲೆಯ 37 ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಗ ಪ್ರದರ್ಶನ ನಡೆಯಿತು. ಬೆಳಗ್ಗೆ 10 ಗಂಟೆಗೆ ಆರಂಭವಾದ ಯೋಗ ಪ್ರಾತ್ಯಕ್ಷಿಕೆ, 10.31ಕ್ಕೆ ಮುಕ್ತಾಯವಾಯಿತು

ಗಿನ್ನೆಸ್ ದೃಢೀಕರಣ ಬಾಕಿ!

ಗಿನ್ನೆಸ್ ದೃಢೀಕರಣ ಬಾಕಿ!

ಶುಕ್ರವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 47 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆದ ಯೋಗಾಭ್ಯಾಸದಲ್ಲಿ 67,598 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರ ವಿಡಿಯೋ ಚಿತ್ರಣವನ್ನು ಕಳುಹಿಸಿಕೊಡಲಾಗಿದ್ದು, ಗಿನ್ನೆಸ್ ಧೃಡೀಕರಣ ಮಾತ್ರ ಬಾಕಿ ಇದೆ.

ಯಾವ ಯೋಗಗಳು?

ಯಾವ ಯೋಗಗಳು?

ಯೋಗಾಭ್ಯಾಸದಲ್ಲಿ 67,598 ಮಂದಿ ವಿದ್ಯಾರ್ಥಿಗಳು ಶಂಖನಾದ, ಧ್ಯಾನಮುದ್ರೆ, ಓಂಕಾರ, ಲಘು ವ್ಯಾಯಾಮದ ಪ್ರಾತ್ಯಕ್ಷಿಕೆ ನೀಡಿದರು. ದ.ಕ.ಜಿಲ್ಲೆಯ 10, ಉಡುಪಿ ಜಿಲ್ಲೆಯ 37 ಕೇಂದ್ರಗಳಲ್ಲಿ ಏಕಕಾಲದಲ್ಲಿ ಈ ಪ್ರದರ್ಶನ ನಡೆಯಿತು.

ಗಿನ್ನೆಸ್‌ ದಾಖಲೆ ಹೇಗೆ?

ಗಿನ್ನೆಸ್‌ ದಾಖಲೆ ಹೇಗೆ?

ಗಿನ್ನೆಸ್‌ ದಾಖಲೆ ಪ್ರಕ್ರಿಯೆ ಸಾಮಾನ್ಯವಾಗಿ ಎರಡು ರೀತಿಯಲ್ಲಿ ನಡೆಯುತ್ತದೆ. ಗಿನ್ನೆಸ್‌ ದಾಖಲೆ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕವೂ ದಾಖಲೆ ಪ್ರಕ್ರಿಯೆ ನಡೆಸಲಾಗುತ್ತದೆ. ಶುಕ್ರವಾರ ನಡೆದ ಯೋಗ ಪ್ರಾತ್ಯಕ್ಷಿಕೆಗಾಗಿ ಗಿನ್ನೆಸ್‌ ಅಥಾರಿಟಿಯೊಂದಿಗೆ ಕಳೆದ ಎಪ್ರಿಲ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಹಿಂದಿನ ದಾಖಲೆಗಳು

ಹಿಂದಿನ ದಾಖಲೆಗಳು

2003ರಲ್ಲಿ ಜರ್ಮನಿಯಲ್ಲಿ ಏಕಕಾಲದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆದಿತ್ತು, ಅದರಲ್ಲಿ 15 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ, 2005ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ಸಾಮೂಹಿಕ ಯೋಗದಲ್ಲಿ 29 ಸಾವಿರ ಮಂದಿ ಪಾಲ್ಗೊಂಡಿದ್ದರು. ಇವು ಹಿಂದಿನ ಗಿನ್ನೆಸ್ ದಾಖಲೆಗಳಾಗಿತ್ತು. ಶುಕ್ರವಾರ ನಡೆದ ಪ್ರದರ್ಶನದಲ್ಲಿ 67,598 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಉಜಿರೆಯ 2960 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಉಜಿರೆಯ 2960 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬೆಳ್ತಂಗಡಿ ತಾಲ್ಲೂಕಿನ 2960 ಶಾಲಾ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.

ಬೆಳ್ತಂಗಡಿ ಕ್ಷೇತ್ರ ಶಿಕ್ಷಾಣಾಧಿಕಾರಿ ಪಿ. ಸುಮಂಗಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಮತ್ತು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

English summary
It was a marvelous sight as nearly 70,000 students in educational institutions across Dakshina Kannada and Udupi districts simultaneously performed yoga in an attempt to enter the Guinness Book of World Records.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X