ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಯುವ ಜನತೆಗ್ಯಾಕೆ ಯುಪಿಎಸ್ಸಿ, ಕೆಪಿಎಸ್ಸಿ ಮೇಲೆ ನಿರಾಸಕ್ತಿ?

2014 ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ (ಕೆಪಿಎಸ್ಸಿ) ದ.ಕ ಜಿಲ್ಲೆಯ ಇಬ್ಬರು ರ್ಯಾಂಕ್ ಗಳಿಸಿದ್ದು, ಜಿಲ್ಲೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಡವಾಗಿಯಾದರೂ ಗೌರವ ತಂದಿತ್ತಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಮತ್ತು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪರೀಕ್ಷೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳ ಯಶಸ್ವಿನ ಪ್ರಮಾಣ ಹೇಳಿಕೊಳ್ಳುವಂತಿಲ್ಲ. ಇಲ್ಲಿ ಬೆರಳೆಣಿಕೆ ಮಂದಿ ವೈಯಕ್ತಿಕ ಪ್ರಯತ್ನದಿಂದ ಯಶಸ್ಸು ಕಂಡಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವಂತಹ ಪ್ರಯತ್ನಗಳು ಮಾತ್ರ ನಡೆಯುತ್ತಿಲ್ಲ.

ಉಳ್ಳಾಲದ ಯತೀಶ್ ರೈ ಮತ್ತು ಅಜಿತ್ ಎಂ ರೈ ಈ ಬಾರಿಯ ಕೆಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೈಸೂರಿನಲ್ಲಿ ಅಣಿಗೊಳಿಸುವಂತಹ ಪ್ರಯತ್ನಗಳು ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯಬೇಕಿದೆ ಎಂದು ದ.ಕ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಇತ್ತೀಚೆಗೆ ಪತ್ರಿಕೆಗೆ ತಿಳಿಸಿದ್ದರು. ಇಲ್ಲಿನ ಯುವಜನರು ವೃತ್ತಿಪರ ಮತ್ತು ಮ್ಯಾನೇಜ್ಮೆಂಟ್ ಕ್ಷೇತ್ರದ ಮೇಲೆ ಹೆಚ್ಚು ಆಸಕ್ತರಾಗಿದ್ದಾರೆ. ಆದ್ದರಿಂದ ಇಲ್ಲಿ ಬಹುಸಂಖ್ಯೆಯಲ್ಲಿ ವೈದ್ಯರು, ಇಂಜಿನಿಯರುಗಳು ಮತ್ತು ಉದ್ಯಮ ಅಧಿಕಾರಿಗಳು ಸೃಷ್ಟಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದರು.[ಮಂಗಳೂರು ಭಜರಂಗದಳದ ಭದ್ರತಾ ಜಾಲ ಬಿಚ್ಚಿಟ್ಟ 'ಶ್ಯಾಡೋ ಆರ್ಮೀಸ್']

Students of Dakshin Kannada seemed not intrested in kpsc and upsc exams

ಮಾತ್ರವಲ್ಲದೆ ಅವರು ಉಡುಪಿಯಲ್ಲಿ ಯುವ ಜನರಿಗಾಗಿ ಕೆಪಿಎಸ್ಸಿ ಮತ್ತು ಯುಪಿಎಸ್ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಪಡಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಪರೀಕ್ಷೆಗಳ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ನಾನು ವೈಯಕ್ತಿಕವಾಗಿ ಮಾಗದರ್ಶನ ನೀಡುತ್ತಿದ್ದೇನೆ ಎಂದು ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಕುಮಾರ್ ತಿಳಿಸಿದ್ದಾರೆ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಬಯಸಿರುವವರಿಗೆ ತರಬೇತಿ ಅಥವಾ ಮಾರ್ಗದರ್ಶನ ನೀಡುವ ತಕ್ಷಣದ ಯೋಜನೆ ಜಿಲ್ಲಾಡಳಿತದಲ್ಲಿ ಇಲ್ಲ ಎಂದು ದ.ಕ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಆದರೆ ಆಸಕ್ತರಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಸಹಾಯ ಮಾಡುವೆ ಎಂದು ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಜಗದೀಶ್ ಅವರು ಪಾಲ್ಗೊಳ್ಳುವ ಸಮಾರಂಭಗಳಲ್ಲಿ, ಅವಕಾಶ ಸಿಕ್ಕಾಗಲೆಲ್ಲ ತನ್ನ ಪ್ರೊಬೆಷನರಿ/ತರಬೇತಿ ಅವಧಿಯ ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ಎರಡೂ ಕಡೆ ಜಿಲ್ಲಾಧಿಕಾರಿಗಳು ಸ್ವ ಆಸಕ್ತಿಯ ಮೇಲೆ ಯುವಕರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.[ಖುರೇಷಿ ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶ ನೀಡಿದ ಕೋರ್ಟ್]

2014 ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ (ಕೆಪಿಎಸ್ಸಿ) ದ.ಕ ಜಿಲ್ಲೆಯ ಇಬ್ಬರು ರ್ಯಾಂಕ್ ಗಳಿಸಿದ್ದು, ಜಿಲ್ಲೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಡವಾಗಿಯಾದರೂ ಗೌರವ ತಂದಿತ್ತಿದ್ದಾರೆ.

ಯತೀಶ್ ಉಳ್ಳಾಲ್ ಕೆಪಿಎಸ್ಸಿ ಪರೀಕ್ಷೆ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಯಶಸ್ವಿಯಾಗಿದ್ದಾರೆ. ರ್ಯಾಂಕಿನೊಂದಿಗೆ ಕೆಪಿಎಸ್ಸಿ ಪರೀಕ್ಷೆ ಮುಗಿಸಿರುವ ಇನ್ನೊಬ್ಬರು ಅಜಿತ್ ರೈ. ಅಜಿತ್ ಸುಳ್ಯ ತಾಲೂಕಿನ ಯಡೆಮಂಗಲ ಗ್ರಾಮದ ಮಲಂಗೇರಿಯವರಾಗಿದ್ದರೆ, ಯತೀಶ್ ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮದ ನಿವಾಸಿಯಾಗಿದ್ದಾರೆ. ಮಾರಾಟ ತೆರಿಗೆ ನಿರೀಕ್ಷಕ ಕಿಟ್ಟ ಹಾಗೂ ಶಿಕ್ಷಕಿ ಸುಂದರಿಯ ಪುತ್ರನಾಗಿರುವ ಯತೀಶ್ ಕೆಪಿಎಸ್ಸಿ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಗಳಿಸಿದ್ದಾರೆ.

ಅಜಿತ್ 28ನೇ ರ್ಯಾಂಕ್ ಗಳಿಸಿದ್ದಾರೆ. ಇವರು ಆರ್ವಿಸಿಇ (ಬೆಂಗಳೂರು) ಹಳೆ ವಿದ್ಯಾರ್ಥಿಯಾಗಿದ್ದಾರೆ. ಇವರು ಕಳೆದ ವರ್ಷದಿಂದ ಐಎಎಸ್ ಪರೀಕ್ಷೆಗೂ ಪ್ರಯತ್ನ ಮುಂದುವರಿಸಿದ್ದಾರೆ. ಪ್ರಸಕ್ತ ಮೂಡಬಿದ್ರಿಯ ಎಂಐಟಿಇಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿದ್ದಾರೆ.

ಹೀಗೆ ನಿಧಾನವಾಗಿಯಾದರೂ ಕರಾವಳಿ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಆರಂಭವಾಗಿದೆ.

ದಿವಿತ್‌ ರೈಗೆ ಜಿಲ್ಲಾಮಟ್ಟದ ಹೊಯ್ಸಳ ಪ್ರಶಸ್ತಿ

ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಶಿಕ್ಷಕರ ವರ್ಗಾವಣೆ ಬಗ್ಗೆ ರಾಜ್ಯದ ಗೃಹ ಸಚಿವರಿಗೆ ಎಸ್ಎಂಎಸ್ ಮಾಡಿ ಸಮಸ್ಯೆ ತಿಳಿಸಿದ್ದ, ಈ ಮೂಲಕ ಅವರನ್ನು ಶಾಲೆಯಲ್ಲೇ ಉಳಿಸಿಕೊಂಡಿದ್ದ ಎಂಟನೇ ತರಗತಿ ವಿದ್ಯಾರ್ಥಿ ದಿವಿತ್‌ ರೈಗೆ ದ.ಕ. ಜಿಲ್ಲಾ ಮಟ್ಟದ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Students of Dakshin Kannada seemed not intrested in kpsc and upsc exams

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಪೈಕಿ 2016-17ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಿವಿತ್‌ ರೈಯನ್ನು ಆಯ್ಕೆ ಮಾಡಲಾಗಿತ್ತು. ಸಮಾಜ ಕಾರ್ಯ ಎಂಬ ವಿಭಾಗದ ಅಡಿಯಲ್ಲಿ ದಿವಿತ್‌ಗೆ ಹೊಯ್ಸಳ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಯಾರು ಈ ದಿವಿತ್ ರೈ?
2016ರ ಜುಲೈ ತಿಂಗಳಲ್ಲಿ ಹಾರಾಡಿ ಶಾಲೆಯ ನಾಲ್ವರು ಶಿಕ್ಷಕಿಯರನ್ನು ಹೆಚ್ಚುವರಿ ಶಿಕ್ಷಕಿಯರನ್ನಾಗಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆಯಿಂದ ಪಟ್ಟಿ ಮಾಡಲಾಗಿತ್ತು. ಆದರೆ ಶಿಕ್ಷಕರ ಪೈಕಿ ನಾಲ್ವರು ಶಿಕ್ಷಕರಿಗೆ ಏಕಕಾಲದಲ್ಲಿ ವರ್ಗಾವಣೆಯಾಗುವುದನ್ನು ತಡೆಯಲು ಶಾಲೆಯ ವಿದ್ಯಾರ್ಥಿ ದಿವಿತ್ ರೈ ರಾಜ್ಯ ಗೃಹ ಸಚಿವರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿದ್ದ.

ಈ ಮೆಸೇಜ್‌ಗೆ ಸ್ಪಂದಿಸಿದ ಸಚಿವರು ರಾತ್ರೋ ರಾತ್ರಿ ಬಾಲಕನಿಗೆ ಫೋನ್‌ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ನಂತರ ನಿರಂತವಾಗಿ ಸಚಿವರ ಬೆನ್ನು ಹತ್ತಿದ್ದ ದಿವಿತ್‌ ರೈ, ಕೊನೆಗೂ ತನ್ನ ಶಾಲೆಯ ಶಿಕ್ಷಕರ ವರ್ಗಾವಣೆಗೆ ತಡೆಯುವಲ್ಲಿ ಯಶಸ್ವಿಯಾಗಿದ್ದ. ದಿವಿತ್‌ ಸಾಧನೆ ಬಗ್ಗೆ ಖುಷಿಗೊಂಡಿದ್ದ ಗೃಹ ಸಚಿವ ಜಿ. ಪರಮೇಶ್ವರ್‌, ಇತ್ತೀಚೆಗೆ ನಡೆದ ಹಾರಾಡಿ ಶಾಲೆಯ ವಾರ್ಷಿಕೋತ್ಸವಕ್ಕೆ ಖುದ್ದು ಆಗಮಿಸಿದ್ದರಲ್ಲದೆ, ತನ್ನ ನಿಧಿಯಿಂದ ಶಾಲೆಗೆ ಅನುದಾನವನ್ನೂ ಘೋಷಿಸಿದ್ದರು.

English summary
Students of Dakshin Kannada seemed not interested in KPSC and UPSC exams. A report says that the students here are much interested in Doctor and Engineering courses and commerce students tend to study CA and Hotel management courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X