ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಲಡ್ಕ ಶಾಲೆಗೆ ಅನುದಾನ ಕಟ್, ಬಟ್ಟಲು ಹಿಡಿದು ಬೀದಿಗಿಳಿದ ವಿದ್ಯಾರ್ಥಿಗಳು

|
Google Oneindia Kannada News

ಮಂಗಳೂರು, ಆಗಸ್ಟ್ 11: 'ಅನ್ನ ಕಸಿದ ಸಿದ್ದರಾಮಯ್ಯ' ಎನ್ನುವ ಘೋಷಣೆ ಇಂದು ಕಲ್ಲಡ್ಕದ ಸೇರಿದಂತೆ ಬಂಟ್ವಾಳದ ಬಿಸಿ ರೋಡ್ ನಲ್ಲಿ ಕೇಳಿ ಬಂತು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಅನುದಾನ ಕಡಿತಗೊಳಿಸಿದ್ದನ್ನು ವಿರೋಧಿಸಿ ಬೀದಿಗಿಳಿದ ಪುಟಾಣಿ ಮಕ್ಕಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ಲೇಟು ತೊಳ್ಯೋಕೂ ನೀರಿಲ್ಲ, ವಡ್ಡನಹೊಸಹಳ್ಳಿ ಶಾಲೇಲಿ ಇದೆಂಥ ದುಸ್ಥಿತಿ!ಪ್ಲೇಟು ತೊಳ್ಯೋಕೂ ನೀರಿಲ್ಲ, ವಡ್ಡನಹೊಸಹಳ್ಳಿ ಶಾಲೇಲಿ ಇದೆಂಥ ದುಸ್ಥಿತಿ!

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಕೊಲ್ಲೂರು ದೇವಸ್ಥಾನದಿಂದ ಲಭಿಸುತ್ತಿದ್ದ ಅನುದಾನವನ್ನು ಕೆಲವು ದಿನಗಳ ಹಿಂದೆ ಕಡಿತಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಬಿ.ಸಿ.ರೋಡಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಎರಡೂ ಶಾಲೆಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ಪಾಲ್ಗೊಂಡಿದ್ದರು.

Students hold mass protest for stopping funds for Dr Kalladka’s schools

ಊಟದ ಬಟ್ಟಲು ಹಿಡಿದು ರಸ್ತೆಗಿಳಿದ ಎರಡೂ ಶಾಲೆಯ ನಾಲ್ಕು ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳು

'ಅನ್ನ ಕಸಿದ ಸಿದ್ದರಾಮಯ್ಯ', 'ರಾಜ್ಯ ಸರಕಾರಕ್ಕೆ ಧಿಕ್ಕಾರ', ಅನ್ನೋ ಘೋಷಣೆಯನ್ನು ಮಕ್ಕಳು ಕೂಗಿದರು. ಚಿಕ್ಕ ಚಿಕ್ಕ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವಿರುದ್ಧವೂ ಧಿಕ್ಕಾರ ಹಾಕಿದರು.

ಮಂಗಳೂರು ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟಮಂಗಳೂರು ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ

ಕಳೆದ ಹತ್ತು ವರ್ಷಗಳಲ್ಲಿ ಕಲ್ಲಡ್ಕ ಮತ್ತು ಪುಣಚದಲ್ಲಿರುವ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ನೇತೃತ್ವದ ಎರಡು ಶಾಲೆಗಳಿಗೆ ಅನುದಾನ ಲಭಿಸುತ್ತಿತ್ತು. ಇದೀಗ ಹಠಾತ್ತಾಗಿ ರಾಜ್ಯ ಸರಕಾರ ಮುಜರಾಯಿ ದೇವಸ್ಥಾನದಿಂದ ಲಭಿಸುತ್ತಿದ್ದ ಅನುದಾನಕ್ಕೆ ಬ್ರೇಕ್ ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

Students hold mass protest for stopping funds for Dr Kalladka’s schools

ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ .

English summary
Students hold massive protest against CM Siddaramaya for stopping funds for Dr Kalladka Prabhakar Bhat’s adopted schools here at Bantwal on Aug 11. Large number of students and their parents joined the massive protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X