ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಬ್ಯಾಡ್ಮಿಂಟನ್ ಪಂದ್ಯಾವಳಿ ಲೂರ್ಡ್ಸ್ ಸೆಂಟ್ರಲ್ ಶಾಲೆ ಪ್ರಥಮ

|
Google Oneindia Kannada News

ಮಂಗಳೂರು, ಅ.22 : ನಗರದ ಲೂರ್ಡ್ಸ್ ಸೆಂಟ್ರಲ್ ಶಾಲಾ ಬಾಲಕಿಯರ ತಂಡ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ 14ರ ವಯೋಮಿತಿಯ ಪಂದ್ಯಾವಳಿಯಲ್ಲಿ ಶಾಲಾ ತಂಡ ಈ ಸಾಧನೆ ಮಾಡಿದೆ. ಅದೇ ರೀತಿ ಎಸ್.ಎಂ.ಎಸ್. ಶಾಲೆ ಬ್ರಹ್ಮಾವರ ಇವರು ಅಯೋಜಿಸಿದ್ದ 17ರ ವಯೋಮಿತಿಯ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಶಾಲಾ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದಿದೆ

St.Lourdes high school bags 1st palce in Badminton Tournament

ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥ್ ದೇವಾಡಿಗ ಇವರ ಮಾರ್ಗದರ್ಶನದಲ್ಲಿ ಎರಡು ವಿಭಾಗದ ತಂಡಗಳು ಈ ಸಾಧನೆ ಮಾಡಿರುತ್ತಾರೆ. ವಿಜೇತ ತಂಡದ ಸದಸ್ಯರಿಗೆ ಶಾಲಾ ಸಂಚಾಲಕ ಫಾ. ವಿಲ್ಸನ್ ವೈಟಸ್ ಡಿಸೋಜ ಹಾಗೂ ಪ್ರಾಂಶುಪಾಲರಾದ ಫಾ. ರೋಬರ್ಟ್ ಡಿಸೋಜ ಅಭಿನಂದನೆ ಸಲ್ಲಿಸಿದ್ದಾರೆ.

ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಪ್ರಾಂಶುಪಾಲರಾದ ಫಾದರ್ ರಾಬರ್ಟ್ ಡಿಸೋಜಾ, 'ಮಕ್ಕಳ ಶ್ರಮ ಹಾಗೂ ಸಾಧನೆಗೆ ಅವರನ್ನು ನಾನು ಅಭಿನಂದಿಸುತ್ತೇನೆ. ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕ ವಿಶ್ವನಾಥ್ ದೇವಡಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಹೇಳಿದರು.

'ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರವಲ್ಲದೇ ಕ್ರೀಡೆಗಳಲ್ಲೂ ಹೆಚ್ಚಿನ ಆಸಕ್ತಿ ತೋರಿಸಿದಲ್ಲಿ ನಮ್ಮ ದೇಶಕ್ಕೆ ಒಳ್ಳೆಯ ಕ್ರೀಡಾಪಟು ಸಿಗುವುದಲ್ಲ ಸಂದೇಹವೇ ಇಲ್ಲ' ಎಂದು ಫಾದರ್ ರಾಬರ್ಟ್ ಡಿಸೋಜಾ ತಿಳಿಸಿದರು.

English summary
St.Lourdes high school of Manguru girls team bags 1st palce in Intermediate Inter-District Badminton Tournament which was held at U.S.Mallya stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X