ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜ್ಞಾನ ಕಾಲೇಜುಗಳಲ್ಲಿ ಮಂಗಳೂರಿನ ಅಲೋಶಿಯಸ್ ಗೆ 23ನೇ ರ‍್ಯಾಂಕ್

|
Google Oneindia Kannada News

ಮಂಗಳೂರು, ಜೂನ್ 10: ಮಂಗಳೂರಿನ ಹೃದಯ ಭಾಗದಲ್ಲಿರುವ ಸೇಂಟ್ ಅಲೋಶಿಯಸ್ ಕಾಲೇಜು 'ವೀಕ್ - ಹನ್ಸಾ' ಪತ್ರಿಕೆ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ದೇಶದ ಅತ್ಯುತ್ತಮ ವಿಜ್ಞಾನ ಕಾಲೇಜುಗಳ ಪೈಕಿ 23ನೇ ರ‍್ಯಾಂಕ್ ಗಳಿಸಿದೆ.

ಇತ್ತೀಚೆಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ದೇಶದ ಅತ್ಯುತ್ತಮ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ 44ನೇ ರ‍್ಯಾಂಕ್ ನೀಡಿತ್ತು ಮತ್ತು ರಾಜ್ಯಮಟ್ಟದಲ್ಲಿ ಕಾಲೇಜು 4ನೇ ಸ್ಥಾನದಲ್ಲಿದೆ. ಇದೀಗ ವಿಜ್ಞಾನ ಕಾಲೇಜುಗಳ ಪೈಕಿ ದೇಶದ ಟಾಪ್ 23ನೇ ಕಾಲೇಜು ಎಂಬ ಹಿರಿಮೆಗೆ ಸಂತ ಅಲೋಶಿಯಸ್ ಪಾತ್ರವಾಗಿದೆ.

St Aloysius college, Mangaluru is the 23rd best science college in the country

ಸತತವಾಗಿ 'ವೀಕ್ ಹನ್ಸಾ' ಪತ್ರಿಕೆ ಕಳೆದ 5 ವರ್ಷಗಳಿಂದ ದೇಶದ ಉತ್ತಮ ಕಾಲೇಜುಗಳನ್ನು ಗುರುತಿಸುತ್ತಾ ಬಂದಿದೆ. ಕಳೆದ ಸಾಲಿನಲ್ಲಿ ಅಲೋಶಿಯಸ್ ಕಾಲೇಜಿಗೆ 24ನೆ ರ‍್ಯಾಂಕ್ ಗಳಿಸಿದ್ದು ಈ ಬಾರಿ 23ನೇ ರ್ಯಾಂಕ್ ಗಳಿಸುವ ಮೂಲಕ ತನ್ನ ಸ್ಥಾನವನ್ನು ಮೇಲ್ದರ್ಜೆಗೇರಿಸಿಕೊಂಡಿದೆ.

ಪ್ರಮುಖವಾಗಿ ಶಿಕ್ಷಕರ ಸಾಧನೆಗಳು, ವಿದ್ಯಾರ್ಥಿಗಳ ಸಾಧನೆಗಳು, ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಪ್ರಗತಿ, ವಿದ್ಯಾರ್ಥಿಗಳ ಉದ್ಯೋಗ ಪ್ರವೇಶಾತಿ, ಗ್ರಂಥಾಲಯ ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಶಿಕ್ಷಕ-ವಿದ್ಯಾರ್ಥಿ ಅನುಪಾತ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಗಮನಿಸಿ ರ‍್ಯಾಂಕ್ ನೀಡಲಾಗಿದೆ.

"ಪ್ರತಿ ವರ್ಷ ನಾವು ಪಠ್ಯಕ್ರಮದ ಜೊತೆಗೆ ಹೊಸ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತೇವೆ. ನಾವು ಸಂಸ್ಥೆಯನ್ನು ಮತ್ತಷ್ಟು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಶ್ರಮ ವಹಿಸುತ್ತೇವೆ," ಎಂದು ಸಂತಸದ ಮಾತುಗಳನ್ನಾಡುತ್ತಾರೆ ಪ್ರಾಂಶುಪಾಲ ಫಾ. ಸ್ವೀಬರ್ಟ್.

English summary
Week hansa survey 2017 has ranked St Aloysius college, Mangaluru as the 23rd best college in the country's top science colleges list. Recently College was ranked 44th among Indian colleges in the National Institutional Ranking Framework.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X