ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿಗೆ 'ಸ್ಟಾರ್ ಕಾಲೇಜು' ಪಟ್ಟ

|
Google Oneindia Kannada News

ಮಂಗಳೂರು, ಜುಲೈ 6: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಯೋಟೆಕ್ನಾಲಜಿ ವಿಭಾಗದಿಂದ ನಗರದ ಸಂತ ಆಗ್ನೇಸ್ ಕಾಲೇಜಿಗೆ "ಸ್ಟಾರ್ ಕಾಲೇಜ್ ಸ್ಟೇಟಸ್" ಸಿಕ್ಕಿದೆ.

ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಡಾ. ಜೆಸ್ವಿನಾ "ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ವಿಭಾಗದ ಸಂಯೋಜಕರು ಹಾಗೂ ಉಪನ್ಯಾಸಕರು ಪಟ್ಟ ಶ್ರಮಕ್ಕೆ ಸಾರ್ಥಕತೆ ದೊರಕಿದೆ. ಕರ್ನಾಟಕದಲ್ಲಿ ಈ ಮಾನ್ಯತೆ ಪಡೆದ ಎರಡನೇ ಮಹಿಳಾ ಕಾಲೇಜು ಇದಾಗಿದ್ದು, ನ್ಯಾಕ್ ನಿಂದಲೂ 'ಎ ಪ್ಲಸ್' ಶ್ರೇಣಿ ಪಡೆದಿದ್ದೇವೆ. ಕೇವಲ ತಿಂಗಳ ಅವಧಿಯಲ್ಲಿ ಮೂರು ಸಾಧನೆಗಳನ್ನು ಮಾಡಿದ ಕೀರ್ತಿಗೆ ಭಾಜನರಾಗಿದ್ದೇವೆ," ಎಂದು ಸಂತಸ ಹಂಚಿಕೊಂಡರು.

St. Agnes college of Mangaluru awarded 'Star College Status' by Govt of India

"ಕಳೆದ 96 ವರ್ಷಗಳಿಂದ ಶಿಕ್ಷಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಈ ಹಂತಕ್ಕೆ ನಾವು ಬಂದಿದ್ದೇವೆ," ಎಂದು ಜೆಸ್ಟಿನಾ ಹೆಮ್ಮೆ ವ್ಯಕ್ತಪಡಿಸಿದರು.

2011ರ ಸ್ಟಾರ್ ಕಾಲೇಜು ಯೋಜನೆಯಡಿಯಲ್ಲಿ ವಿಜ್ಞಾನ ವಿಭಾಗದಿಂದ ಅರ್ಜಿ ಸಲ್ಲಿಸಿದ್ದೆವು. ಇದರಲ್ಲಿ 2015ರಲ್ಲಿ ರಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಹಾಗೂ ಸೂಕ್ಷ್ಮಶಾಸ್ತ್ರ ವಿಭಾಗಗಳಿಗೆ ಧನಸಹಾಯ ದೊರಕಿದೆ ಎಂದು ಅವರು ಮಾಹಿತಿ ನೀಡಿದರು.

:2017ರ ಎಪ್ರಿಲ್‍ನಲ್ಲಿ ಸ್ಟಾರ್ ಕಾಲೇಜು ತಜ್ಞರ ಸಮಿತಿಯು ಜಲಂಧರ್‍ನಲ್ಲಿ ಸಭೆ ನಡೆಸಿತ್ತು. ಇದರಲ್ಲಿ ಕಾಲೇಜಿನ ಅತ್ಯುತ್ತಮ ಪ್ರಗತಿಗೆ ಮೆಚ್ಚುಗೆಯನ್ನು ಸೂಚಿಸಿ 1 ಕೋಟಿ ಬಿಡುಗಡೆ ಮಾಡಿದೆ," ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

English summary
St. Agnes college of Mangaluru awarded 'Star College Status' by government of India. The Star College Status was awarded to St. Agnes College by the department of biotechnology under ministry of Science and Technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X