ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ಟಾಪರ್ ಭದ್ರಾವತಿಯ ರಂಜನ್‌ಗೆ ಮಂಗಳೂರಲ್ಲಿ ಸನ್ಮಾನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 01 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಬಿ.ಎಸ್.ರಂಜನ್‌ನನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಅವರು, ಬಿ.ಎಸ್.ರಂಜನ್‌ ಅವರನ್ನು ಸನ್ಮಾಸಿಸಿದರು. [ಎಸ್ಸೆಸ್ಸೆಲ್ಸಿ ಟಾಪರ್ ರಂಜನ್ ಬಗ್ಗೆ ರಂಜನೀಯ ಟ್ರಾಲ್ಸ್]

ranjan

'ಭದ್ರಾವತಿಯ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ರಂಜನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸುವ ಇತಿಹಾಸ ನಿರ್ಮಿಸಿದ್ದಾರೆ. ಅವರ ಉತ್ತರಪತ್ರಿಕೆಯನ್ನು 20 ಅಧ್ಯಾಪಕರು ಮೌಲ್ಯಮಾಪನ ಮಾಡಿದರೂ ಅಂಕಗಳಿಕೆಯಲ್ಲಿ ವ್ಯತ್ಯಾಸವಾಗಿಲ್ಲ' ಎಂದು ಮಂಜುನಾಥ ಭಂಡಾರಿ ಶ್ಲಾಘಿಸಿದರು. [SSLC ಟಾಪರ್ ಶಿರಸಿಯ ಮಹಿಮಾ ಭಟ್ ಸಂದರ್ಶನ]

'ಕೇರಳದ 12ನೇ ತರಗತಿ ಪರೀಕ್ಷೆಯಲ್ಲಿ 640 ಕ್ಕೆ 640 ಅಂಕಗಳಿಸಿದ ಕಾಸರಗೋಡಿನ ಕೀರ್ತನ್ ರಾಜೀವನ್‌ ಅವರನ್ನು ಇಂದು ಸನ್ಮಾನಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರು ಈ ಕಾರ್ಯಕ್ರಮಕ್ಕೆ ಬರಲಾಗಿಲ್ಲ. ಸಹ್ಯಾದ್ರಿ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಲು ಅವರು ಆಸಕ್ತಿ ಹೊಂದಿದ್ದಾರೆ' ಎಂದು ಮಂಜುನಾಥ್ ಭಂಡಾರಿ ಹೇಳಿದರು. [SSLC ರಿಸಲ್ಟ್ : ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್]

ಸಮಾರಂಭದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಮಂಡಳಿಯ ಅಧ್ಯಕ್ಷ ರಮೇಶ್, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ್ ಎಂ.ಭೂಶಿ, ರಂಜನ್‌ ತಂದೆ ಶಂಕರನಾರಾಯಣ ಮುಂತಾದವರು ಉಪಸ್ಥಿತರಿದ್ದರು.

ಸನ್ಮಾನ ಸ್ಮೀಕರಿಸಿ ಮಾತನಾಡಿದ ರಂಜನ್, 'ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದು ಈ ಸಾಧನೆ ಮಾಡಿದ್ದೇನೆ. ತಂದೆ ತಾಯಿಯ ಪೋತ್ಸಾಹ ನನ್ನ ಸಾಧನೆಗೆ ಪ್ರಥಮ ಹೆಜ್ಜೆ. ಐಎಎಸ್ ಅಧಿಕಾರಿಯಾಗಬೇಕು ಅಥವ ವೈದ್ಯ ವೃತ್ತಿ ಮಾಡಬೇಕು ಎನ್ನುವ ಇಚ್ಛೆ ಇದೆ' ಎಂದರು.

English summary
B.S. Ranjan who scored 625 out of 625 in the SSLC examination honored in Sahyadri College of Engineering and Management (SCEM) Mangaluru on May 31, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X