ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಬಂದರಿನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಫೆ. 26 : ಮಂಗಳೂರಿನ ಜನರಿಗೊಂದು ಸಿಹಿ ಸುದ್ದಿ. ಮಂಗಳೂರಿನಲ್ಲಿ ಶೀಘ್ರವೇ ಸ್ಮಾರ್ಟ್ ಸಿಟಿ ನಿರ್ಮಾಣಗೊಳ್ಳಲಿದೆ. ನವಮಂಗಳೂರು ಬಂದರಿನಲ್ಲಿ ಸ್ಮಾರ್ಟ್‍ಸಿಟಿ ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ಈ ಯೋಜನೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮಂಗಳೂರಿನ ನವ ಮಂಗಳೂರು ಬಂದರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರುವ 12 ಬಂದರುಗಳಲ್ಲಿ ಸ್ಮಾರ್ಟ್‍ಸಿಟಿ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. [ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ 11 ನಗರ?]

gadkari

ಒಟ್ಟು 50 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಪ್ರತಿ ಸ್ಮಾರ್ಟ್ ಸಿಟಿನಿರ್ಮಾಣಕ್ಕೆ 3 ರಿಂದ 4 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನವಮಂಗಳೂರು ಬಂದರು ಸೇರಿದಂತೆ ಕಾಂಡ್ಲಾ, ಮುಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಕೋಲ್ಕತಾ ಸಹಿತ 12 ಬಂದರು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಆಯ್ಕೆಯಾಗಿದೆ.

ಯಾವ ಸೌಲಭ್ಯಗಳು : ಸ್ಮಾರ್ಟ್ ಸಿಟಿ ನಿರ್ಮಾಣಗೊಂಡ ಬಂದರುಗಳಲ್ಲಿ ಅಗಲವಾದ ರಸ್ತೆ, ಹಸಿರು ವಲಯ, ಅಂತರಾಷ್ಟ್ರೀಯ ದರ್ಜೆಯ ಸೌಲಭ್ಯಗಳು, ವಿಶೇಷ ಆರ್ಥಿಕ ವಲಯ, ಹಡಗು ನಿರ್ಮಾಣ ಕೇಂದ್ರದಂತಹ ಸೌಲಭ್ಯಗಳು ದೊರೆಯಲಿವೆ. [ನೂರು ಸ್ಮಾರ್ಟ್ ಸಿಟಿಗಳ ನಿರ್ಮಾಣ ನಾಯ್ಡು ಗುರಿ]

ನೀರನ್ನು ಮರು ಶುದ್ಧೀಕರಣ ಮಾಡಿ ಬಳಸುವ ತಂತ್ರಜ್ಞಾನ, ಬಂದರಿನ ತ್ಯಾಜ್ಯವನ್ನು ಮರುಸಂಸ್ಕರಣೆ ಮಾಡುವ ಘಟಕ ತಲೆ ಎತ್ತಲಿವೆ. ಬಂದರು ವಲಯದಲ್ಲಿ ಶಾಲೆ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇತರ ಸೌಲಭ್ಯಗಳು ದೊರೆಯಲಿವೆ.

5 ವರ್ಷದಲ್ಲಿ ಪೂರ್ಣ : ಮುಂದಿನ 6 ತಿಂಗಳಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭಗೊಳ್ಳಲಿದ್ದು, 5 ವರ್ಷಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಯೋಜನೆಗಳ ನಿರ್ಮಾಣ ಕಾಮಗಾರಿಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡದೆ, ಸರ್ಕಾರವೇ ನಡೆಸಲಿದೆ.

English summary
The central government working on an ambitious plan to build one smart city each at the country's 12 major ports. New Mangalore Port also selected for smart city project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X