ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌ಡಿಪಿಐ ಅಶ್ರಫ್ ಕೊಲೆ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ

|
Google Oneindia Kannada News

ಮಂಗಳೂರು, ಜೂನ್ 27: ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಎಸ್‌ಡಿಪಿಐ ಸಂಘಟನೆ ಮುಖಂಡ ಅಶ್ರಫ್ ಕೊಲೆ ಆರೋಪಿಗಳಿಗೆ ಕ್ರಿಮಿನಲ್ ಹಿನ್ನಲೆ ಇರುವುದು ಬಹಿರಂಗವಾಗಿದೆ.

ಜೂನ್ 21ರಂದು ಬುಧವಾರ ದುಷ್ಕರ್ಮಿಗಳು ಆಟೋ ತಡೆದು ಅಶ್ರಫ್ ರನ್ನು ತಲವಾರ್‌ನಿಂದ ದಾಳಿ ನಡೆಸಿ, ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆಗೈದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಿವಾಸಿಗಳಾದ ಪವನ್‍ಕುಮಾರ್(24), ರಂಜಿತ್(28), ತುಂಬೆಯ ಸಂತೋಷ್(23), ಶಿವಪ್ರಸಾದ್(24), ಅಭಿನ್ ರೈ(23), ದಿವ್ಯರಾಜ್ ಶೆಟ್ಟಿ ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭರತ್ ಕುಮ್ಡೇಲು ಮತ್ತು ದಿವ್ಯರಾಜ್ ಶೆಟ್ಟಿ ಪ್ರಮುಖ ಆರೋಪಿಗಳಾಗಿದ್ದು, ಭರತ್ ಸದ್ಯ ತಲೆಮರೆಸಿಕೊಂಡಿದ್ದಾನೆ.

ಎಸ್‌ಡಿಪಿಐ ಅಶ್ರಫ್ ಕೊಲೆ: ಪ್ರಮುಖ ಆರೋಪಿ ದಿವ್ಯರಾಜ್ ಬಂಧನಎಸ್‌ಡಿಪಿಐ ಅಶ್ರಫ್ ಕೊಲೆ: ಪ್ರಮುಖ ಆರೋಪಿ ದಿವ್ಯರಾಜ್ ಬಂಧನ

Sketch to murder SDPI Ashraff had planned a month ago

ಆರೋಪಿಗಳೆಲ್ಲರೂ ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಭರತ್ ಭಜರಂಗದಳದ ಜಿಲ್ಲಾ ಮುಖಂಡನಾಗಿದ್ದಾನೆ.

ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರು

ಬಂಧಿತ ಆರೋಪಿಗಳ ಪೈಕಿ ಸಂತೋಷ್ ಎಂಬಾತನನ್ನು ಹೊರತುಪಡಿಸಿದರೆ ಉಳಿದವರೆಲ್ಲರ ಮೇಲೆ ಈ ಹಿಂದೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಅಭಿನ್ ರೈ ಎಂಬುವವನ ಮೇಲೆ 2015ರಲ್ಲಿ ಟಿಪ್ಪು ಜಯಂತಿ ವೇಳೆ ನಡೆದ ಗಲಾಟೆಯಲ್ಲಿ ಭಾಗಿಯಾದ ಪ್ರಕರಣ ದಾಖಲಾಗಿದೆ. 2 ವರ್ಷದ ಹಿಂದೆ ತುಂಬೆಯಲ್ಲಿ ನಡೆದ ಗಲಭೆ ಪ್ರಕರಣ ಸೇರಿ ಎರಡು ಪ್ರಕರಣದಲ್ಲಿ ಶಿವಪ್ರಸಾದ್ ಮೇಲೆ ಕೇಸ್ ದಾಖಲಾಗಿದೆ.

SDPI ಮುಖಂಡನ ಹತ್ಯೆ: ಐವರು ಆರೋಪಿಗಳ ಬಂಧನSDPI ಮುಖಂಡನ ಹತ್ಯೆ: ಐವರು ಆರೋಪಿಗಳ ಬಂಧನ

2012ರಲ್ಲಿ ಮಸೀದಿಯೊಂದರಲ್ಲಿ ಹಂದಿ ತಲೆ ಇಟ್ಟ ಪ್ರಕರಣದಲ್ಲಿ ಪವನ್ ಮೇಲೆ ಕೇಸ್ ದಾಖಲಾಗಿದೆ. ಉಳಿದಂತೆ ರಂಜಿತ್ ಎಂಬುವವನ ಮೇಲೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Sketch to murder SDPI Ashraff had planned a month ago

ಕಳೆದ 20ರಂದು ಇದೇ ಆರೋಪಿಗಳು ಬೈಕ್‍ನಲ್ಲಿ ತೆರಳುತ್ತಿದ್ದ ಉನೈದ್ ಎಂಬಾತನ ಮೇಲೆ ತಲವಾರು ಬೀಸಿದ್ದರು. ಆದರೆ ಉನೈದ್ ಸ್ವಲ್ಪದರಲ್ಲೇ ಬಚಾವಾಗಿದ್ದ.

ಕೊಲೆಗೆ ಒಂದು ತಿಂಗಳ ಹಿಂದೆ ಸ್ಕೆಚ್!

ಅಶ್ರಫ್ ಕಲಾಯಿಯನ್ನು ಕೊಲೆ ಮಾಡಲು ಪ್ರಮುಖ ಆರೋಪಿಗಳಾದ ಭರತ್ ಹಾಗೂ ದಿವ್ಯರಾಜ್ ನೇತೃತ್ವದಲ್ಲಿ ಒಂದು ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು. ಈ ಬಗ್ಗೆ ತಿಂಗಳ ಹಿಂದೆಯೇ ಮಾಹಿತಿ ಕಲೆ ಹಾಕಿ ಆಶ್ರಫ್ ಚಲನವಲನದ ಮೇಲೆ ನಿಗಾವಹಿಸಲಾಗಿತ್ತು.

ಆಶ್ರಫ್ ಎಂದಿನಂತೆ ಬೀಡಿ ವ್ಯಾಪಾರಿಯೊಬ್ಬರನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿರುವ ವಿಷಯ ಆರೋಪಿಗಳಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಜೂ.21ರಂದು ರಿಕ್ಷಾವನ್ನು ಹಿಂಬಾಲಿಸಿ ಬೆಂಜನಪದವು ಎಂಬಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಈ ಮಧ್ಯೆ ಕೊಲೆಯ ಮುನ್ನಾದಿನ ಬಂಟ್ವಾಳದ ಬೋಳಿಯಾರ್ ಎಂಬಲ್ಲಿ ಆರ್‍ಎಸ್‍ಎಸ್ ಮುಖಂಡನ ಮನೆಯಲ್ಲಿ ಗುಪ್ತ ಸಭೆ ನಡೆದಿತ್ತು ಎನ್ನುವ ಆರೋಪ ಕೇಳಿ ಬಂದಿದೆ.

Sketch to murder SDPI Ashraff had planned a month ago

ಕೈಕೊಟ್ಟ ಬೈಕ್ ಕ್ಲಚ್

ಮೂರು ಬೈಕುಗಳಲ್ಲಿ ಒಟ್ಟು ಆರು ಮಂದಿ ಕೊಲೆ ನಡೆಸಲು ತಲವಾರು ಹಿಡಿದು ಬಂದಿದ್ದರು. ಈ ವೇಳೆ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಕೊಲೆ ನಂತರ ಪರಾರಿಯಾಗುವ ವೇಳೆ ಬೈಕೊಂದರ ಕ್ಲಚ್ ಮುರಿದಿದ್ದರಿಂದ ಸ್ವಲ್ಪ ದೂರದವರೆಗೆ ಬೈಕನ್ನು ತಳ್ಳಿಕೊಂಡು ಹೋಗಿದ್ದರು. ನಂತರ ಬೈಕ್ ಹಾಗೂ ತಲವಾರು ಬಿಸಾಡಿ ಎರಡು ಗುಂಪುಗಳಾಗಿ ತಲೆಮರೆಸಿಕೊಂಡಿದ್ದರು.

ಪ್ರಮುಖ ಆರೋಪಿಯ ಜತೆ ಪ್ರಭಾಕರ್ ಭಟ್ ಸುದ್ದಿಗೋಷ್ಠಿ

ಪ್ರಕರಣದ ಪ್ರಮುಖ ಆರೋಪಿ ಭರತ್ ಆರ್‍ಎಸ್‍ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಜತೆ ನಿಕಟ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. ಕಲ್ಲಡ್ಕ ಗಲಾಟೆಗೆ ಸಂಬಂಧಿಸಿದಂತೆ ಮೇ.28ರಂದು ಪ್ರಭಾಕರ್ ಭಟ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭರತ್ ಭಾಗಿಯಾಗಿದ್ದ. ಈತ ಬಂಟ್ವಾಳ ತಾಲೂಕು ಆರ್‍ಎಸ್‍ಎಸ್ ಗೋ ಪ್ರಮುಖ್ ಆಗಿದ್ದ, ಜತೆಗೆ ಭಜರಂಗದಳದಲ್ಲಿ ಗುರುತಿಸಿಕೊಂಡಿದ್ದ.

ಕೊಲೆಗೆ ಒಂದು ತಿಂಗಳ ಹಿಂದೆ ಸಂಚು ರೂಪಿಸಿದ್ದ ಎಂದ ಮೇಲೆ ಕೊಲೆ ಬಗ್ಗೆ ಪ್ರಭಾಕರ್ ಭಟ್‍ಗೆ ತಿಳಿದಿತ್ತು ಎನ್ನುವ ಗುಮಾನಿ ಜನಸಾಮಾನ್ಯರಲ್ಲಿದೆ. ಈತ ಪ್ರಸ್ತುತ ಭಜರಂಗದಳದ ಮುಖಂಡನ ಮಾಲಕತ್ವದ ಸೆಕ್ಯುರಿಟಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

English summary
Sketch to murders SDPI Ashraff of Benjanapaduv had planned a month ago. SDPI Ashraff was brutally stabbed to death in broad daylight at Benjanapaduv on June 21. Now six out of seven accused are arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X