ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದಿನೇಶ್ ಅಮಿನ್ ಮಟ್ಟುವಿನಿಂದಲೇ ಸಿಎಂ ಸಿದ್ದರಾಮಯ್ಯ ಸಮಾಧಿ'

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 8: ಮಾಧ್ಯಮ ಸಲಹೆಗರ ದಿನೇಶ್ ಅಮಿನ್ ಮಟ್ಟುವಿನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಿಯಾಗ್ತಾರೆ. ಬಿಜೆಪಿ ಹೇಳಿದಂತೆ ಮಟ್ಟುವನ್ನು ತಕ್ಷಣ ಬಂಧಿಸಬೇಕು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮಂಗಳವಾರ ಆಗ್ರಹಿಸಿದರು.

ಇಲ್ಲಿ ಮಾತನಾಡಿದ ಅವರು, ದಿನೇಶ್ ಅಮಿನ್ ಮಟ್ಟು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಅವನತಿ ಆಗಬೇಕಿದ್ದರೆ ಇಂಥವರೇ ಬೇಕು ಎಂದರು. ದಿನೇಶ್ ಅಮಿನ್ ಮಟ್ಟು ಅವರು ಪ್ರಧಾನಿ ನರೇಂದ್ರ ಮೋದಿ ಅವರ್ನ್ನು ಟೀಕಿಸಿ, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿಯವರ ಬಗ್ಗೆ ಒಬ್ಬರು ಪ್ರಶ್ನಿಸಿದ್ದರು. ಅವರಿಗೆ ಉತ್ತರ ನೀಡಿದ್ದ ಮಟ್ಟು, ಇಂದಿರಾಗಾಂಧಿ ಅವರಿಗಾದ ಸ್ಥಿತಿಯೇ ಮೋದಿಗೂ ಆಗಬೇಕಾ ಎಂದಿದ್ದರು.[ಹೈಗ್ರೌಂಡ್ಸ್ ನಲ್ಲಿ ಮಟ್ಟು ವಿರುದ್ಧ ಕೇಸ್ ದಾಖಲಿಸಿದ ಬಿಜೆಪಿ]

Siddaramaiah's political career will be finished by Dinesh: Poojary

ಆ ಉತ್ತರಕ್ಕೆ ಜನಾರ್ದನ ಪೂಜಾರಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆ ಮಾತನಾಡಿದ ಅವರು, ಹಿಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ. 17 ಗಂಟೆ ಮೊದಲೇ ಭವಿಷ್ಯ ನುಡಿಯುತ್ತಿದ್ದೇನೆ ಎಂದರು. ಇನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರನ್ನಾಗಿ ರಾಹುಲ್ ಗಾಂಧಿ ಅವರ ನೇಮಕ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಭಯಗೊಂಡು ಟೀಕೆ ಮಾಡುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷ ಉಳಿಯದು ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಲು ಅವರಿಗೆ ಹಕ್ಕಿಲ್ಲ. ರಾಹುಲ್ ಪಕ್ಷ ಹಾಳು ಮಾಡುತ್ತಾರಾದರೆ ಮೋದಿ ಮತ್ತು ಬಿಜೆಪಿಗೆ ಭಯವೇಕೆ ಎಂದು ಪ್ರಶ್ನಿಸಿದರು.[ಪಿಎಂ ಮೋದಿ ಬಗ್ಗೆ ದಿನೇಶ್ ಅಮಿನ್ ಮಟ್ಟು ಕಾಮೆಂಟ್ ಸರಿಯೆ?]

ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿರುವುದೇ ಗಾಂಧಿ ಕುಟುಂಬದಿಂದ. ಎಲ್ಲರನ್ನೂ ಒಗ್ಗೂಡಿಸಿ ಪಕ್ಷ ಕಟ್ಟುವ ಬಗ್ಗೆ ಆ ಕುಟುಂಬದ ಮೇಲೆ ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸವಿದೆ ಎಂದು ಪೂಜಾರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 'ಏಕಶ್ರೇಣಿ ಏಕಪಿಂಚಣಿ' ಮೊದಲ ಬಾರಿ ಪ್ರಸ್ತಾಪಿಸಿದ್ದು ರಾಹುಲ್ ಗಾಂಧಿ. ಸೈನಿಕರಿಗೆ ಮೂರು ಬಾರಿ ಸಂಬಳ ಏರಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುತಿದ್ದಾರೆ, ರಾಹುಲ್ ಗಾಂಧಿಯನ್ನು ದೂಷಿಸುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿಯವರು ಕಾಂಗ್ರೆಸ್‌ಗೆ ವಿಷನ್ ಇಲ್ಲ ಎಂದಿದ್ದರು. ಈಗ ಅವರಿಗೆ ವಿಷನ್ ಇಲ್ಲ. ದೇಶದ ಚುಕ್ಕಾಣಿ ಯುವಜನತೆಗೆ ನೀಡಬೇಕು ಎನ್ನುತ್ತಿದ್ದ ಮೋದಿ ಸಹಿತ ಬಿಜೆಪಿಗರು ಸಾವಿರ ಸಲ ಸುಳ್ಳು ಹೇಳಿ ಗೋಬೆಲ್ಸ್ ಆಗುತ್ತಿದ್ದಾರೆ. ಹಿಂದೆ ಇಂದಿರಾಗಾಂಧಿಯನ್ನು 'ಗುಂಗಿ', ರಾಜೀವ ಗಾಂಧಿಯವರನ್ನ 'ಪೈಲಟ್' ಎಂದು ದೂಷಿಸಿದ್ದ ಅವರು ಬಳಿಕ 'ದುರ್ಗಿ',ಅಭಿವೃದ್ಧಿಯ ಹರಿಕಾರರು ಎಂದು ಹೊಗಳಿದ್ದ ಕುರಿತು ಮೋದಿ ಮತ್ತು ಬಿಜೆಪಿಗರು ಉತ್ತರ ನೀಡಲಿ ಎಂದು ಸವಾಲೆಸೆದರು.

English summary
Chief minister Siddaramaiah's political career will be finished by CM media advisor Dinesh Amin Mattu, said by Congress senior leader Janardhan poojary in Mangaluru on Tuesday. He is refering to Mattu's remark on Indira Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X