ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬದುಕಿದ್ದವರನ್ನು ಸಾಯಿಸಿದ ಶೋಭಾ, ರಾಜೀನಾಮೆಗೆ SDPI ಒತ್ತಾಯ

|
Google Oneindia Kannada News

ಮಂಗಳೂರು, ಜುಲೈ 20 : ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರಕ್ಕೆ ದಕ್ಷಿಣ ಕನ್ನಡ ಎಸ್ ಡಿಪಿಐ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಈವರೆಗೆ ರಾಜ್ಯದಲ್ಲಿ 23 ಹಿಂದೂಗಳನ್ನು ಮುಸ್ಲಿಮರು ಕೊಂದಿದ್ದಾರೆ. ಮತ್ತು ಇವರಿಗೆ ಪಿಎಫ್ ಐ ಹಾಹೂ ಎಸ್ ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಸುಳ್ಳು ಆರೋಪ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.

Shobha Should Resign for Sending False Information to HM in killing of 23 Hindus-SDPI

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ, ಬದುಕುಳಿದಿರುವ ಮೂಡಬಿದರೆಯ ಅಶೋಕ್ ಪೂಜಾರಿಯನ್ನು ಕೊಲೆಯಾದವರ ಪಟ್ಟಿಯಲ್ಲಿಸೇರಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ.

ಹಾಗಾಗಿ ಸಂಸದೆ ಶೋಭಾ ವಿರುದ್ಧ ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಶೋಭಾ ಕರಂದ್ಲಾಜೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕಲ್ಲೆದೆ, ಸಂಸದೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಶೋಭಾ ಸಲ್ಲಿಸಿದ 23 ಮಂದಿ ಪಟ್ಟಿಯಲ್ಲಿ ಸುಮಾರು 18 ರಿಂದ 19 ಮಂದಿ ಆತ್ಮಹತ್ಯೆ, ವೈಯಕ್ತಿಕ ಕಲಹಗಳಲ್ಲಿ ಸಾವಿಗೀಡಾಗಿದ್ದಾರೆ.

ಆದರೆ, ಅದನ್ನೆಲ್ಲಾ ಪಿಎಫ್ ಐ ಮತ್ತು ಎಸ್ ಡಿಪಿಐ ವಿರುದ್ಧ ಹೊರಿಸಿರುವುದು ಸಮಂಜಸವಲ್ಲ. ಹಾಗಾಗಿ ಕಾನೂನು ಸಲಹೆ ಪಡೆದು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಇಕ್ಬಾಲ್ ಹೇಳಿದ್ದಾರೆ.

English summary
MP of Udupi/Chikkamagaluru, Shobha karandlaje should resign her post said SDPI D.K district Secretary Iqbal. Shoba in her list to central Union Home Minster has mentioned that all the deaths of Hindus in Mangaluru and udupi were caused by Muslims, therefore the SDPI strongly opposes it said Iqbal to Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X