ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ.10ರಿಂದ ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ಮುಕ್ತ

|
Google Oneindia Kannada News

ಮಂಗಳೂರು, ಆಗಸ್ಟ್ 4 : ಶಿರಾಡಿ ಘಾಟ್ ರಸ್ತೆಯ ಕ್ರಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು ಆ.10ರಿಂದ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಮತ್ತು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು, ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ತಡೆಗೋಡೆ ನಿರ್ಮಾಣ, ಫಲಕ ಅಳವಡಿಕೆ ಮುಂತಾದ ಕಾರ್ಯಗಳು ನಡೆಯುತ್ತಿವೆ ಎಂದರು.[ಶಿರಾಡಿ ಘಾಟ್ ಶೀಘ್ರ ಸಂಚಾರಕ್ಕೆ ಮುಕ್ತ]

shiradi ghat

ಆ.9ರಂದು ಪರಿಶೀಲನೆ : ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮುಂತಾದವರು ಆ.9ರಂದು ಶಿರಾಡಿ ಘಾಟ್ ರಸ್ತೆಯ ಪರಿಶೀಲನೆ ನಡೆಸಲಿದ್ದಾರೆ. ಆ.10ರಿಂದ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು. [ಶಿರಾಡಿ ಘಾಟ್ : ಜನಪ್ರತಿನಿಧಿಗಳಿದ್ದರೂ ಏನು ಪ್ರಯೋಜನ?]

ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ : ಶಿರಾಡಿ ಘಾಟ್ 2ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಎರಡನೇ ಹಂತದಲ್ಲಿ 21 ಕಿ.ಮೀ. ಉದ್ದದ ಡಾಂಬರು ಮತ್ತು 12.38 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ramanath rai

ಈ ಕಾಮಗಾರಿ ನಡೆಯುವಾಗ ರಸ್ತೆಯನ್ನು ಬಂದ್ ಮಾಡಬೇಕೆ? ಬೇಡವೆ ಎಂಬುದನ್ನು ಕಾಮಗಾರಿ ಸಂದರ್ಭದಲ್ಲಿ ತೀರ್ಮಾನಿಸಲಾಗುತ್ತದೆ. ರಸ್ತೆ ಬಂದ್ ಮಾಡಿದರೆ, ಪರ್ಯಾಯ ಮಾರ್ಗವಾಗಿ ಶಿಶಿಲ-ಬೈರಾಪುರ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

English summary
Mangaluru district in-charge minister Ramanath Rai on Monday announced that, 13 km stretch of Shiradi Ghat connecting Mangaluru and Bengaluru will open on August 10 for all vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X