ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿಯ ಶೌಚಾಲಯದಲ್ಲಿ ಕ್ಯಾಮೆರಾ: ಆರೋಪಿ ಸಂತೋಷ್ ಗೆ ಜಾಮೀನು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 16 : ಮಂಗಳೂರು ವಿವಿ ಕ್ಯಾಂಪಸ್‌ನ ವಿಜ್ಞಾನ ವಿಭಾಗದ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿಗೆ ಜಾಮೀನು ಸಿಕ್ಕಿದೆ. ಬುಧವಾರ ಕೊಣಾಜೆ ಪೊಲೀಸರು ಆರೋಪಿ ಸಂತೋಷ್‌ನನ್ನು ಬಂಧಿಸಿದ್ದರು.

ಸುಳ್ಯ ತಾಲೂಕಿನ ಎಡಮಂಗಲ ಮುರೋಳಿ ನಿವಾಸಿ ಎಂ.ಸಂತೋಷ್ (22) ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಸಂತೋಷ್ ಸಾಗರ ಪ್ರಾಣಿವಿಜ್ಞಾನ ವಿಭಾಗದ ದ್ವಿತೀಯ ಎಂ.ಎಸ್‌ಸಿ ವಿದ್ಯಾರ್ಥಿ. ತಾನೇ ಈ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದ.[ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ವಿದ್ಯಾರ್ಥಿ ಬಂಧನ]

Santosh who fixed camera in ladies toilet gets bail

ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾದ ಬಗ್ಗೆ ಸೆ.1ರಂದು ವಿವಿ ಕುಲಸಚಿವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬುಧವಾರ ಆರೋಪಿ ಸಂತೋಷ್‌ನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.[ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ]

ಕೊಣಾಜೆ ಪೊಲೀಸರು 82 ಶಂಕಿತರನ್ನು ವಿಚಾರಣೆ ನಡೆಸಿದ್ದರು. ಹಾಸ್ಟೆಲ್‌ನಲ್ಲಿ ನೆಲೆಸಿದ್ದ ಸಂತೋಷ್ ಈತ ಕೃತ್ಯ ಬಯಲಿಗೆ ಬರುತ್ತಿದ್ದಂತೆ ಬೇರೆ ಕಡೆ ತೆರಳಿದ್ದ. ಒಂದು ವಾರದ ಬಳಿಕ ಪುನಃ ವಾಪಸ್ ಬಂದಿದ್ದ.

ಆದರೆ, ಕೇವಲ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ. ವಿವಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಗೆ ಜಾಮೀನು ಸಿಕ್ಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
M.Santosh an accused in the case of fixing the mobile camera in Mangaluru University campus, was granted bail on September 15, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X