ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಬಂದ್ ಬಿಸಿ ಹೆಚ್ಚಳ : ಮದ್ಯ ಮಾರಾಟ ನಿಷೇಧ

|
Google Oneindia Kannada News

ಮಂಗಳೂರು, ಫೆಬ್ರವರಿ 23: ಇದೇ ತಿಂಗಳ 25 ರಂದು ಸಿಪಿಎಂನ ಸೌಹಾರ್ದ ರಾಲಿಯಲ್ಲಿ ಭಾಗವಹಿಸಲು ಕೇರಳ ಸಿಎಂ ಪಿಣರಾಯಿ ವಿಜಯಂ ಮಂಗಳೂರಿಗೆ ಆಗಮಿಸುತ್ತಿರುವುದನ್ನ ವಿರೋಧಿಸಿ ಹಿಂದೂ ಸಂಘಟನೆಗಳು ಫೆ. 24ರಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿವೆ.

ಕೇರಳದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಹಾಗೂ ಇನ್ನಿತರ ದಬ್ಬಾಳಿಕೆಗಳನ್ನು ವಿರೋಧಿಸಿರುವ ಜಿಲ್ಲಾ ಹಿಂದೂ ಬಲಪಂಥೀಯ ಸಂಘಟನೆಗಳೂ ಈ ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿದೆ.

Sale of liquor banned for 48 hours from Feb. 24th to 25th

ಮಧ್ಯ ಮಾರಾಟ ನಿಷೇಧ: ಈ ಹಿನ್ನೆಲೆಯಲ್ಲಿ, ಫೆ. 24 ಮತ್ತು 25 ರಂದು ಜಿಲ್ಲೆಯಾದ್ಯಂತ ಎಲ್ಲ ರೀತಿಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಫೆ. 24 ರಂದು ಪಿಣರಾಯಿ ಆಗಮನ ವಿರೋಧಿಸಿ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಸಿದ್ದತೆ ನಡೆಸಿವೆ.

ಅಲ್ಲದೆ 25 ರಂದು ಜಿಲ್ಲಾ ಬಂದ್ ಗೂ ಕರೆ ನೀಡಲಾಗಿದ್ದು, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

English summary
Dakshina Kannada Bandh on Feb. 24 in the district in the wake of Kerala CM Pinaray's participation in CPM Rally on Feb. 25, became more sensational. Meanwhile, in a precautionary measure, District administration has ordered to close the liquor outlets in the district on 24, 25th of this month
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X