ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಯ್ದೆ ಸರಿಯಾಗಿ ತಿಳಿದುಕೊಂಡು ರಾಹುಲ್ ಮಾತನಾಡಲಿ'

|
Google Oneindia Kannada News

ಮಂಗಳೂರು, ಮೇ.4: ಸದಾ ನುಗುಮುಖದಿಂದ ಇರುವ ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಭೂ ಸ್ವಾಧೀನ ಕಾಯ್ದೆಯನ್ನು ಟೀಕೆ ಮಾಡುವ ರಾಹುಲ್ ಮೊದಲು ತಮ್ಮದೇ ಪಕ್ಷದಲ್ಲಿ ಯಾವ ಸ್ಥಾನ ಹೊಂದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಕಟುಕಿದ್ದಾರೆ. ಭೂಸ್ವಾಧೀನ ಕಾಯ್ದೆಯ ಆಳ-ಅರಿವನ್ನು ತಿಳಿದುಕೊಂಡು ಮಾತನಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.[ರಾಹುಲ್ ಪಾದಯಾತ್ರೆಗೆ ವಿಭಿನ್ನ ಪ್ರತಿಕ್ರಿಯೆ]

Sadananda Gowda

ಎನ್ ಡಿಎ ಸರ್ಕಾರ ಬಿಲ್ ಮೂಲಕ ರೈತರಿಗೆ ಮೋಸ ಮಾಡಲು ಹೊರಟಿದೆ. ವಾಮಮಾರ್ಗದ ಮೂಲಕ ಸಂಸತ್ತಿನ ಅನುಮೋದನೆ ಪಡೆಯಲು ಬಿಜೆಪಿ ಮುಂದಾಗಿದೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಯಾವುದೇ ವಿಷಯದ ಕುರಿತು ಅಧ್ಯಯನ ಮಾಡದೇ ಮಾತನಾಡಬಾರದು. ಆದರೆ ರಾಹುಲ್ ಗಾಂಧಿ ಇದಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಭೂ ಸ್ವಾಧೀನ ಕಾಯ್ದೆ ಬಗ್ಗೆ ಏನನ್ನೂ ತಿಳಿದುಕೊಳ್ಳದೇ ಸಂಸತ್ ನಲ್ಲಿ ಮಾತನಾಡುತ್ತಿದ್ದಾರೆ ಎಂದು ಗೌಡ ಆರೋಪ ಮಾಡಿದ್ದಾರೆ.

English summary
Union Law and Justice Minister D V Sadananda Gowda on Sunday lambasted Congress Vice President Rahul Gandhi for criticising Prime Minister Narendra Modi over the Real Estate Regulatory Authority Bill. Talking to reporters here this evening, Gowda said instead of criticising Modi, Gandhi should first know his position in his own party and also try to understand the contents of the bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X