ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಮೇಲೆ ಸಿಟ್ಟಾದ ಪತ್ರಿಕಾ ಛಾಯಾಗ್ರಾಹಕರಿಂದ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 15: ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಡೆದ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಪತ್ರಿಕಾ ಛಾಯಾ ಗ್ರಾಹಕರು ಬಹಿಷ್ಕರಿಸಿದ ಘಟನೆ ಸೋಮವಾರ ನಡೆಯಿತು.

ಮಾಧ್ಯಮದವರ ತಪಾಸಣೆ ನಡೆಸಿ, ನಂತರ ಒಳಬಿಡುತ್ತಿದ್ದ ಪೊಲೀಸರು, ಸಾತಂತ್ರ್ಯೋತ್ಸವ ಪಥ ಸಂಚಲನದ ಫೋಟೋಗಳನ್ನು ತೆಗೆಯುವ ವೇಳೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಛಾಯಾ ಗ್ರಾಹಕರು ಕಾರ್ಯಕ್ರಮ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

Press photographers protest in Indepedence day funtion

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ನೆಹರೂ ಮೈದಾನದಲ್ಲಿ ಪಥ ಸಂಚಲನ ಆರಂಭಗೊಂಡಿತು. ಈ ವೇಳೆ ಫೋಟೋ ತೆಗೆಯಲು ಆಗಮಿಸಿದ ಛಾಯಾ ಗ್ರಾಹಕರನ್ನು ಪೊಲೀಸರು ತಡೆದರು. ಇದರಿಂದ ಕೆರಳಿದ ಛಾಯಾ ಗ್ರಾಹಕರು, ಕಾರ್ಯಕ್ರಮವನ್ನು ಬಹಿಷ್ಕರಿಸಿ ಮೈದಾನದಿಂದ ಹೊರಗೆ ನಡೆದರು. ಬಳಿಕ ಮೈದಾನದ ಹೊರಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಎದುರಿನ ರಸ್ತೆಯಲ್ಲಿ ಧರಣಿ ಕುಳಿತರು. ಈ ವೇಳೆ ವಿಷಯ ಅರಿತ ಸಚಿವ ರಮಾನಾಥ ರೈ, ಸ್ಥಳಕ್ಕೆ ತೆರಳಿ ಛಾಯಾ ಗ್ರಾಹಕರನ್ನು ಸಮಾಧಾನಪಡಿಸಿದರು.

English summary
Press photographers protest in Independence day function organised by Dakshina Kannada district administration. Police not allowed to take pictures of function, angry photogrphers boycott function and protested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X