ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಗಾರ ಪದಕಕ್ಕೆ ಕೊರಳೊಡ್ಡಿದ ಬಡವರ ಮಕ್ಕಳು..!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 3 : ಮಂಗಳೂರು ವಿಶ್ವವಿದ್ಯಾನಿಲಯದ 35 ನೇ ವಾರ್ಷಿಕ ಘಟಿಕೋತ್ಸವ ಶುಕ್ರವಾರ ನಡೆಯಿತು. ಈ ವೇಳೆ ವಿವೇಕ್ ರೈ ಯವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅಲ್ಲದೇ ಒಟ್ಟು 249 ಮಂದಿ ರ್ಯಾಂಕ್ ವಿಜೇತರನ್ನ ಪುರಸ್ಕರಿಸಲಾಯಿತು.ಇವರಲ್ಲಿ ಬಡವರ ಮಕ್ಕಳು ನಾನಾ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿರುವುದು ವಿಶೇಷವೆನಿಸಿತು.

ಮಂಗಳೂರು ವಿವಿಯ ಸ್ನಾತಕೋತ್ತರ ವಿಭಾಗದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಉಪನ್ಯಾಸಕ ದೀವಿತ್ ಎಸ್ .ಕೋಟ್ಯಾನ್ ಪ್ರಥಮ ರ‍್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಪೆರಾಡಿಯ ಶ್ರೀಧರ ಕೋಟ್ಯಾನ್ ಹಾಗೂ ಲಲಿತಾ ದಂಪತಿಯ ಪುತ್ರ.

Poor students in Magalore University recieves Gold medals

ಯಕ್ಷಗಾನ ಕಲಾವಿದರಾಗಿರುವ ದೀವಿತ್ ಈಗಾಗಲೇ ಸುಮಾರು 300 ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಇವರ ತಂದೆ ಟೈಲರ್. ತಾಯಿ ಬೀಡಿ ಕಟ್ಟುತ್ತಾರೆ. ಆರ್ಥಿಕವಾಗಿ ಹಿನ್ನಡೆ ಇದ್ದರೂ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪಿಯುಸಿ ನಂತರ ಆಳ್ವಾಸ್ ಕಾಲೇಜಿಗೆ ಸೇರಿದ ದೀವಿತ್ ಗೆ ಡಾ. ಮೋಹನ್ ಆಳ್ವಾ ಉಚಿತ ಶಿಕ್ಷಣ ನೀಡಿ ಪ್ರೋತ್ಸಾಹ ನೀಡಿದ್ದಾರೆ.

ಸಮೂಹ ಸಂವಹನ ಹಾಗೂ ಪತ್ರಿಕೋಧ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಜೊತೆಗೆ ಡಾ.ಟಿ.ಎಂ.ಎ.ಪೈ ದತ್ತಿ ಚಿನ್ನದ ಪದಕ ಮತ್ತು
ದಿ.ಶ್ರೀ ರಾಮಕೃಷ್ಣ ಮಲ್ಯ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ‌. ಇದರೊಂದಿಗೆ ದಕ್ಷಿಣ ಕನ್ನಡ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್ ಮತ್ತು ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ ನಗದು ಪುರಸ್ಕಾರವನ್ನು ಗೆದ್ದುಕೊಂಡಿದ್ದಾರೆ.

ಪ್ರಸ್ತುತ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ಆಳ್ವಾಸ್ ದೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿನ್ನ ಗೆದ್ದ ಖುಷಿಯಲ್ಲಿ ಮಾತನಾಡಿದ ಅವರು, ' ನಾವು ಶಿಕ್ಷಣದ ಜೊತೆಗೆ ಇತರ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ' ಅಂದರು.

ಚಿನ್ನ ಗೆದ್ದ ಆಟೋ ಚಾಲಕನ ಮಗ..! : ಮಂಗಳ ಗಂಗೋತ್ರಿಯಲ್ಲಿ ಶುಕ್ರವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ಎಂಎಯಲ್ಲಿ ಮಡಿಕೇರಿಯ ಮುಸ್ತಫಾ ಪ್ರಥಮ ರ‍್ಯಾಂಕ್ ಚಿನ್ನದ ಪದಕ ಹಾಗೂ 5 ನಗದು ಪ್ರಶಸ್ತಿಗೆ ಭಾಜನರಾದರು.

ಮಡಿಕೇರಿ ಮೂಲದ ಹಸೈನಾರ್ ಹಾಗೂ ಜುಬೈದಾ ದಂಪತಿಯ ಪುತ್ರರಾಗಿರುವ ಮುಸ್ತಾಫಾ ಪದವಿಯವರೆಗೆ ಮಡಿಕೇರಿಯಲ್ಲಿಯೇ ವ್ಯಾಸಾಂಗ ಮುಗಿಸಿ ಬಳಿಕ ಸ್ನಾತಕೋತ್ತರ ಪದವಿಗಾಗಿ ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದ್ದರು. ತಂದೆ ವೃತ್ತಿಯಲ್ಲಿ ಆಟೊ ಚಾಲನೆ ಮಾಡಿ ಸಂಸಾರವನ್ನು ನೋಡಿಕೊಳ್ಳುತ್ತಿದ್ದರು. ವಿವಿಧ ಸ್ಕಾಲರ್‌ಶಿಪ್‌ಗಳನ್ನ ಪಡೆದುಕೊಂಡು ಉನ್ನತ ಶಿಕ್ಷಣಕ್ಕೆ ಕಾಲಿಟ್ಟ ಮುಸ್ತಾಫಾರಿಗೆ ಎರಡು ವರ್ಷ ಉಳಿದುಕೊಳ್ಳಲು ಬಿಸಿಎಂ ಹಾಸ್ಟೆಲ್ ಕೂಡಾ ಸಿಕ್ಕಿದ್ದು ವಿದ್ಯಾಭ್ಯಾಸಕ್ಕೆ ಬಹಳಷ್ಟು ಅನುಕೂಲವಾಯಿತು.

Poor students in Magalore University recieves Gold medals

ಶಿಕ್ಷಣದೊಂದಿಗೆ ಇನ್ನಿತರ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿವಿಧ ಅಧ್ಯಾಪಕರುಗಳ ಮಾರ್ಗದರ್ಶನದೊಂದಿಗೆ ಕನ್ನಡ ಎಂಎಯಲ್ಲಿ ರ‍್ಯಾಂಕ್ ಗಳಿಸಿ ಗೋಲ್ಡ್‌ಮೆಡಲ್ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.

ಜೊತೆಗೆ ಚಿನ್ನದ ಪದಕದೊಂದಿಗೆ ಶ್ರೀ ಕೆರೋಡಿ, ಸುಬ್ಬರಾವ್ ಸ್ಮಾರಕ ನಗದು ಪುರಸ್ಕಾರ, ದಿ.ಬಿ.ಎನ್.ಗುಪ್ತ ಟ್ರಸ್ಟಿ ಜನ್ಮಭೂಮಿ ಪ್ರೆಸ್ ಟ್ರಸ್ಟ್ ಮೆಮೋರಿಯಲ್ ನಗದು ಪುರಸ್ಕಾರ, ಡಾ.ಬಿ.ಆರ್.ದಾಮೋದರ್ ರಾವ್ ನಗದು ಪುರಸ್ಕಾರ, ಗೋಲ್ಡನ್ ಜುಬ್ಲಿ ಕನ್ನಡ ಫಿಲ್ಮ್ ಫೆಸ್ಟಿವಲ್ ಮೆಮೋರಿಯಲ್ ನಗದು ಪ್ರಶಸ್ತಿ ಮತ್ತು ಶ್ರೀಮತಿ ವಸಂತ ಎಸ್ ಅನಂತನಾರಾಯಣ ಮತ್ತು ಪ್ರೊ.ಎಸ್.ಅನಂತ ನಾರಾಯಣ ನಗದು ಪ್ರಶಸ್ತಿಯನ್ನು ಕೂಡಾ ಮುಸ್ತಫಾ ಪಡೆದುಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿದ ಮುಸ್ತಫಾ, ' ತಂದೆ ಆಟೋ ಚಾಲಕರಾಗಿದ್ದರೂ ಕೂಡಾ ನನ್ನ ಶಿಕ್ಷಣಕ್ಕೆ ಯಾವುದೇ ಅಡ್ಡಿಪಡಿಸದೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ನನಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣವನ್ನು ಉತ್ತಮ ಉದ್ಯೋಗವನ್ನು ಪಡೆಯಬೇಕೆಂಬ ಕನಸು ಇತ್ತು. ಇದೀಗ ಕನ್ನಡ ಎಂಎಯಲ್ಲಿ ರ‍್ಯಾಂಕ್ ಬಂದು ನಗದು ಪುರಸ್ಕಾರದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ನನ್ನ ಸಾಧನೆಗೆ ಪ್ರೇರಣೆಯಾದ ತಂದೆ ತಾಯಿ, ಅಧ್ಯಾಪಕ ವೃಂದಕ್ಕೆ ನಾನು ಚಿರಋಣಿಯಾಗಿದ್ದೇನೆ' ಅಂದರು.

ಕನ್ನಡ ಎಂ.ಎ. ಮುಗಿಸಿ ಇದೀಗ ಕನ್ನಡ ಅಧ್ಯಯನ ವಿಭಾಗದಲ್ಲಿ ಪಿಎಚ್‌ಡಿಗಾಗಿ ಸೇರ್ಪಡೆಗೊಂಡಿರುವ ಮುಸ್ತಫಾ ಈಗಾಗಲೇ ಹಲವಾರು ಸಂಶೋಧನಾ ಬರಹಗಳ ಜೊತೆಗೆ 'ಕಂಡದ್ದು ಕಾಡಿದ್ದು' ಎಂಬ ಕೃತಿಯನ್ನು ಹೊರತಂದಿದ್ದಾರೆ.

English summary
Two poor and rural students who were studying Master degree in Magaluru University achieved gold medal in their respective courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X