ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ

ತಾವು ಖರೀದಿಸಿದ ಹೊಸ ಸ್ಕೂಟಿಯಲ್ಲಿ ಶೋರೂಮಿನಿಂದ ಮನೆಗೆ ಹೋಗಲು ಗ್ರಾಹಕ ತಯಾರಾಗುವಾಗ ಅಚಾನಕ್ಕಾಗಿ ವಿಷಾಕಾರಿ ಸಣ್ಣ ಹಾವೊಂದು ಇಂಜಿನಿನ ಒಳಗಡೆಯಿಂದ ತಲೆ ಹೊರಹಾಕಿತ್ತು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 24: ಗ್ರಾಹಕರೊಬ್ಬರು ಖರೀದಿಸಿದ ಹೊಚ್ಚ ಹೊಸ ಸ್ಕೂಟಿಯಲ್ಲಿ ವಿಷಕಾರಿ ಹಾವೊಂದು ನುಸುಳಿ ಸ್ಥಳೀಯರ ಬೆವರಿಳಿಸಿದ ಘಟನೆ ಮಂಗಳೂರಿನ ಮೂಲ್ಕಿಯಲ್ಲಿ ನಡೆದಿದೆ.

ತಾವು ಖರೀದಿಸಿದ ಹೊಸ ಸ್ಕೂಟಿಯಲ್ಲಿ ಶೋರೂಮಿನಿಂದ ಮನೆಗೆ ಹೋಗಲು ಗ್ರಾಹಕ ತಯಾರಾಗುವಾಗ ಅಚಾನಕ್ಕಾಗಿ ವಿಷಾಕಾರಿ ಸಣ್ಣ ಹಾವೊಂದು ಇಂಜಿನಿನ ಒಳಗಡೆಯಿಂದ ತಲೆ ಹೊರಹಾಕಿತ್ತು. ಇದನ್ನು ಕಣ್ಣಾರೆ ಕಂಡ ಗ್ರಾಹಕರು ಅಂಗಡಿ ಮಾಲಿಕರಿಗೆ ತಿಳಿಸಿದ್ದಾರೆ.[ಜನೋಪಯೋಗಿ ಪ್ರಾಡೆಕ್ಟ್ , ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆ]

Poisonous snake found inside Deo scooty in Mangaluru

ಕೂಡಲೇ ಅಂಗಡಿ ಮಾಲಿಕರು ಹೊಸ ಸ್ಕೂಟಿಯ ಎಲ್ಲಾ ವಸ್ತುಗಳನ್ನು ತೆಗೆದರೂ ಹಾವು ತಪ್ಪಿಸಿಕೊಂಡು ಒಳಗೊಳಗೆ ಸೇರಿಕೊಂಡು ಚಾಲಕಿತನ ಮೆರೆಯಿತು.[ಮಂಗಳೂರಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವಂತೆಯೇ ಇಲ್ಲ!]

ಕೊನೆಗೂ ಸ್ಥಳೀಯರೊಬ್ಬರು ಹಾವನ್ನು ಸ್ಕೂಟಿಯಿಂದ ಹೊರಹಾಕಲು ಸಫಲರಾಗಿ ನಿಟ್ಟುಸಿರು ಬಿಟ್ಟರು. ಆದರೆ ಹೊರ ಬಂದ ಹಾವು ಮತ್ತೆ ಅಲ್ಲಿಂದ ಪರಾರಿಯಾಗಿ ಮತ್ತೊಂದು ದ್ವಿಚಕ್ರ ವಾಹನದೊಳಗೆ ಸೇರಿಕೊಂಡಿತು. ಹೇಗೋ ಕಷ್ಟಪಟ್ಟು ವಿಷಾಕಾರಿ ಹಾವನ್ನು ಅಂಗಡಿ ಮಾಲಿಕರು ಬಳಿಕ ಸೆರೆ ಹಿಡಿದ್ದಾರೆ.

English summary
A poisonous snake was found inside a brand new bike here at Mulki in Mangaluru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X