ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಫೆ.14 : ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಹೊಸ ಯೋಜನೆ ರೂಪಿಸಲು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದೆ. ಈ ಹಿಂದೆ ರನ್‌ವೇಯನ್ನು 950 ಮೀಟರ್ ವಿಸ್ತರಿಸಲು ಉದ್ದೇಶಿಸಲಾಗಿತ್ತು. ಸದ್ಯ ವಿಸ್ತರಣೆಯನ್ನು 600 ಮೀಟರ್‌ಗೆ ಸೀಮಿತಗೊಳಿಸಿ ವೆಚ್ಚವನ್ನು ಕಡಿತಗೊಳಿಸಲು ಉದ್ದೇಶಿಸಲಾಗಿದೆ.

ಮಂಗಳೂರು ವಿಮಾನ ನಿಲ್ದಾಣ ಸದ್ಯ 2,450 ಮೀಟರ್ ಉದ್ದದ ರನ್‌ವೇಯನ್ನು ಹೊಂದಿದೆ. ಇದಕ್ಕೆ 1000 ಮೀಟರ್‌ನಷ್ಟು ಸೇರಿಸುವ ಉದ್ದೇಶವಿತ್ತು. ಇದಕ್ಕೆ ಸುಮಾರು 1,200ಕೋಟಿ ರೂ.ಗಳ ಹೂಡಿಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು.[ಮಂಗಳೂರು : ವಿಮಾನ ನಿಲ್ದಾಣದಲ್ಲಿ ಹಲವು ಕಾಮಗಾರಿ]

ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಆದ್ದರಿಂದ ಪರ್ಯಾಯ ಯೋಜನೆಯೊಂದನ್ನು ರೂಪಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಾಗಿದ್ದು, ಹೊಸ ಯೋಜನೆಗೆ ಸುಮಾರು 400 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. [ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಕಿರೀಟ]

irport

ಹಿಂದಿನ ಯೋಜನೆಯಂತೆ ರನ್‌ವೇ ವಿಸ್ತರಣೆಗೆ 285ಎಕರೆ ಭೂಮಿ ಅಗತ್ಯವಿತ್ತು. ಆದರೆ, ಹೊಸ ಯೋಜನೆಗೆ 100 ಎಕರೆ ಭೂಮಿ ಸಾಕಾಗುತ್ತದೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಸುಮಾರು 10ಎಕರೆಯಷ್ಟು ಭೂಮಿ ಇದೆ. ಉಳಿದ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನ ಪಡಿಸಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಬೇಕಾಗಿದೆ.

ರನ್‌ವೇ ವಿಸ್ತರಣೆ ಯೋಜನೆಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡವರಿಗೆ ಪರಿಹಾರ ನೀಡಲು ಹೆಚ್ಚು ಹಣ ಖರ್ಚಾಗುತ್ತಿತ್ತು. ಯೋಜನೆಯನ್ನು ಪರಿಷ್ಕರಣೆ ಮಾಡಿರುವುದರಿಂದ ವೆಚ್ಚ ಗಣಣೀಯವಾಗಿ ಕಡಿಮೆಯಾಗಲಿದೆ. ಹಿಂದಿನ ವೆಚ್ಚಕ್ಕಿಂತ ಶೇ.25ರಷ್ಟು ಮಾತ್ರ ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹಿಂದಿನ ಯೋಜನೆ : 2010ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುರಂತ ನಡೆದಾಗ ಅಂದಿನ ವಿಮಾನ ಯಾನ ಸಚಿವ ಪ್ರಫುಲ್ ಪಟೇಲ್ ಇಲ್ಲಿನ ರನ್‌ವೇಯನ್ನು ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು. ಇದಕ್ಕೆ ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಹೇಳಿದ್ದರು.

ಎಷ್ಟು ವಿಮಾನಗಳ ಹಾರಾಟ : ಮಂಗಳೂರು ವಿಮಾನ ನಿಲ್ದಾಣದ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಪ್ರತಿ ದಿನ ಸರಾಸರಿ ಸುಮಾರು 40 ವಿಮಾನಗಳು ಹಾರಾಟ ನಡೆಸುತ್ತವೆ. ಶಾರ್ಜಾ, ದೋಹಾ, ಬೆಹರಿನ್, ಮಸ್ಕತ್, ಅಬುದಾಬಿಗೆ ವಿಮಾನ ಸೌಲಭ್ಯವಿದೆ. ದೇಶೀಯವಾಗಿ ಬೆಂಗಳೂರು, ಮುಂಬೈ, ಹೈದರಾಬಾದ್, ಗೋವಾ, ಚೆನ್ನೈ, ಕಲ್ಲಿಕೋಟೆಗೆ ವಿಮಾನ ಸಂಚರಿಸುತ್ತಿದೆ.

English summary
The Airports Authority of India (AAI) has plans to expand the Mangalore airport runway by 600 meters. It had been estimated that the project requires acquisition of 100 acres of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X