ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಪಿಣರಾಯಿ ಕಾರ್ಯಕ್ರಮಕ್ಕೆ 6 ಡ್ರೋನ್ ಗಳಿಂದ ಬಿಗಿ ಭದ್ರತೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವುದರ ವಿರುದ್ಧ ಸಂಘ ಪರಿವಾರ ಬಂದ್ ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ 'ಸೌಹಾರ್ದ ರ್ಯಾಲಿ ಮತ್ತು ಬಹಿರಂಗ ಸಭೆ'ಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

By Sachhidananda Acharya
|
Google Oneindia Kannada News

ಮಂಗಳೂರು, ಫೆಬ್ರವರಿ 24: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುವುದರ ವಿರುದ್ಧ ಸಂಘ ಪರಿವಾರ ಬಂದ್ ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ 'ಸೌಹಾರ್ದ ರ್ಯಾಲಿ ಮತ್ತು ಬಹಿರಂಗ ಸಭೆ'ಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈ ಕುರಿತು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಸೇಖರ್ ಹೇಳಿಕೆ ನೀಡಿದ್ದು, "ಬಂದ್ ವಿರುದ್ದ ಸುಪ್ರೀಂ ಕೋರ್ಟ್ ತೀರ್ಪಿದೆ. ಹೀಗಾಗಿ ಬಂದಿಗೆ ಅವಕಾಶ ನೀಡಿಲ್ಲ. ನಮ್ಮ ವ್ಯಾಪ್ತಿಯಲ್ಲಿ ನಾವು ಶಾಂತಿ ಕಾಪಾಡಲು ಬದ್ದರಿದ್ದೇವೆ. ಜನರು ವದಂತಿಗಳನ್ನು ನಂಬಬಾರದು," ಎಂದು ಹೇಳಿದ್ದಾರೆ.

ಭದ್ರತೆಗೆ 6 ಎಸ್ಪಿ, 10 ಡಿಎಸ್ ಪಿ , 20 ಪಿಐಎಸ್, 2000 ಹೊರರಾಜ್ಯದ ಪೊಲೀಸರು, 20 ಕೆಎಸ್ಆರ್ಪಿ ಪ್ಲಟೂನ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 600 ಸಿಸಿ ಕ್ಯಾಮರಾ, 6 ದ್ರೋಣ್ ಕ್ಯಾಮರಾಗಳ ಭದ್ರತಾ ಮೆಲುಸ್ತುವಾರಿ ನಡೆಸಲಿವೆ.['ಪಿಣರಾಯಿ ಬಂದರೆ ತೊಂದರೆ ಗ್ಯಾರಂಟಿ' ಜಗದೀಶ್ ಶೇಣವ ಎಚ್ಚರಿಕೆ]

Pinarayi Visit: 6 Drone, 600 CCTV cameras for tight security

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಿಪಿಎಂನವರಿಗೂ ಕೆಲವು ನಿಬಂಧನೆ ವಿಧಿಸಲಾಗಿದ್ದು, ನಿಬಂಧನೆ ಮೀರದಂತೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಿರಲು ಸುಗಮ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಸೇಖರ್ ಹೇಳಿದ್ದಾರೆ.[ಪಿಣರಾಯಿ ಕಾರ್ಯಕ್ರಮಕ್ಕೆ 3,400 ಪೊಲೀಸರಿಂದ ಭದ್ರತೆ]

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ, ಸೋಶಿಯಲ್ ಮೀಡಿಯಾ ಅಪಪ್ರಚಾರ ಮಾಡುವವರ ಮೇಲೆ ಹಾಗೂ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಾಂತ ರೀತಿಯಲ್ಲಿ ಹರತಾಳ

ಇದೇ ವೇಳೆ ಶಾಂತ ರೀತಿಯಲ್ಲಿ ಹರತಾಳ ನಡೆಸಲು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ನಮ್ಮ ವಿರೋಧ ಕೇರಳ ಸಿ ಎಂ ಪಿಣರಾಯಿ ವಿಜಯನ್ ವಿರುದ್ಧ ಮಾತ್ರ. ಸಿಪಿಎಂ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಯಾವುದೇ ವದಂತಿಗಳಿಗೆ ‌ಕಿವಿ ಕೊಡಬೇಡಿ. ಕಾನೂನು ಬಾಹಿರ ಚಟುವಟಿಕೆ ಗೆ ಆಸ್ಪದ ಕೊಡಬೇಡಿ," ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

English summary
After the massive protests by pro-Hindu organisations against the visit of Kerala Chief minister Pinarayi Vijayan's visit to Mangaluru, huge police force deployed in the city for tight security. 6 drone cameras and 600 CCTV cameras also arranged for the special security, Commissioner Chandrasekhar told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X