ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೇಜಾವರ ಶ್ರೀಗಳು ಹಿಂದೂಗಳ ಕ್ಷಮೆಯಾಚಿಸಬೇಕು - ಪ್ರವೀಣ್ ವಾಲ್ಕೆ

|
Google Oneindia Kannada News

ಮಂಗಳೂರು , ಜೂನ್ 29: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಕಾರಣ ಮಠದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಪೇಜಾವರ ಶ್ರೀಗಳು ಹಿಂದೂ ಸಮಾಜದೆದುರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲ್ಕೆ, "ಇಫ್ತಾರ್ ಕೂಟ ಆಯೋಜನೆ ವಿರೋಧಿಸಿ ಜುಲೈ 2 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು," ಎಂದು ಹೇಳಿದರು.

Pejavara Sri has to ask apology with Hindu community – Sri Ram Sena
"ಹಿಂದೂ ಹಾಗೂ ಮುಸ್ಲಿಂರ ನಡುವೆ ಸೌಹಾರ್ದ ನೆಲೆಸಬೇಕೆಂದಿದ್ದರೆ ಪೇಜಾವರ ಸ್ವಾಮಿಗಳು ಅಯೋಧ್ಯೆ ಸಂಘರ್ಷ ಸಂದರ್ಭದಲ್ಲೇ ಕರೆ ನೀಡಬಹುದಾಗಿತ್ತು. ವಿಶ್ವ ಹಿಂದೂ ಪರಿಷತ್ ನ ಮಾರ್ಗದರ್ಶಕರಲ್ಲಿ ಒಬ್ಬರಾಗಿರುವ ಪೇಜಾವರ ಶ್ರೀಗಳು ಈಗ ಸೌಹಾರ್ದಕ್ಕೆ ಮುಂದಾಗಿರುವುದೇಕೆ? ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಚುನಾವಣಾ ರಾಜಕೀಯ ನಡೆಸಲಾಗುತ್ತಿದೆ," ಎಂದು ಆರೋಪಿಸಿದರು.
English summary
Iftar Party: “Vishwesha Teertha Swamiji of Pejawar Mutt has to ask apology with Hindu community for organising Iftar party at Krishna Matt,” said Paravin Valke of Sri Ram Sena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X