ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹೋದರ ಇಫ್ತಿಕರ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ – ಯುಟಿ ಖಾದರ್

ಕೆಲವು ದಿನಗಳಿಂದ ಇಫ್ತಿಕರ್ ಬಿಜೆಪಿ ಸೇರಲಿದ್ದಾರೆ. ಅಂತಿಮ ಹಂತದ ಮಾತುಕತೆಗಳು ಚಾಲ್ತಿಯಲ್ಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಇವೆಲ್ಲಾ ಸುಳ್ಳು ಸುದ್ದಿ ಎಂದು ಇಫ್ತಿಕರ್ ಸಹೋದರ ಸಚಿವ ಖಾದರ್ ಹೇಳಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 25: ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಯುಟಿ ಖಾದರ್ ಸಹೋದರ ಇಫ್ತಿಕರ್ ಆಲಿ ಶೀಘ್ರದಲ್ಲೇ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎನ್ನುವ ಸುದ್ದಿ ಹರಡುತ್ತಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಖಾದರ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವರು ಇಫ್ತಿಕಾರ್ ಆಲಿ ಬಿಜೆಪಿ ಸೇರುತ್ತಿಲ್ಲ ಎಂದು ಹೇಳಿದ್ದಾರೆ. ಕೆಲವು ದಿನಗಳಿಂದ ಇಫ್ತಿಕರ್ ಬಿಜೆಪಿ ಸೇರಲಿದ್ದಾರೆ. ಅಂತಿಮ ಹಂತದ ಮಾತುಕತೆಗಳು ಚಾಲ್ತಿಯಲ್ಲಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.[ಬರಗಾಲದಲ್ಲೂ ಪಾಳು ಬಿದ್ದ ಕ್ವಾರಿಯಲ್ಲಿ ಉಕ್ಕಿತು ಜಲಧಾರೆ]

Our Family is committed to Congress Party and not BJP - Minister Khader

"ಇಫ್ತಿಕರ್ ಆಲಿ ಬಿಜೆಪಿ ಸೇರುವುದಿಲ್ಲ. ಯು ಟಿ ಫರೀದ್ (ಖಾದರ್ ತಂದೆ) ಕುಟುಂಬಕ್ಕೆ ಒಂದು ಗೌರವ, ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಮ್ಮ ಕುಟುಂಬ ಸದಸ್ಯರು ಬಿಜೆಪಿಗೆ ಸೇರುವ ಪ್ರಶ್ನೆ ಇಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ. ಇಂತಹ ಗಾಳಿ ಸುದ್ದಿ ಹರಡುವ ಮೂಲಕ ಜನ ಹೇಗೆ ಲಾಭ ಪಡೆಯುತ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ," ಎಂದು ಖಾದರ್ ಹೇಳಿದ್ದಾರೆ.

ಇಫ್ತಿಕರ್ ಆಪ್ತ ಮೂಲಗಳ ಪ್ರಕಾರ ಅವರಿಗೆ ಈ ಹಿಂದೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಲಾಗಿತ್ತು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು ಎಂದೂ ಅವರಿಗೆ ಭರವಸೆ ನೀಡಲಾಗಿತ್ತು. ಆದರೆ ಅಣ್ಣನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಫ್ತಿಕರ್ ಕಾಂಗ್ರೆಸ್ ನಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.[ಅಂಥಿಂಥ ಉಪ್ಪಿನಕಾಯಿ ನೀನಲ್ಲ, ನಿನ್ನಂಥ ಉಪ್ಪಿನಕಾಯಿ ಇನ್ನಿಲ್ಲ!]

ಸದ್ಯ ಬಿಜೆಪಿಗೆ ಸೇರುವ ಯಾವ ಪ್ರಸ್ತಾಪಗಳೂ ಇಫ್ತಿಕರ್ ಮುಂದಿಲ್ಲ ಎಂದು ಅವರ ಆಪ್ತರೂ ಹೇಳಿದ್ದಾರೆ.

English summary
My brother Iftikhar will not join any other party. Our entire family members are committed to the Congress party. We will not spoil the name earned by our parents since we respect them said Minister UT Khader
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X