ಕರಾವಳಿಯ ಮೂಡಬಿದಿರೆಯಲ್ಲಿ ಹೊತ್ತಿದೆ ಕಂಬಳದ ಕಿಚ್ಚು

Written by: ಐಸಾಕ್ ರಿಚರ್ಡ್/ ಶಂಶೀರ್ ಬುಡೋಳಿ
Subscribe to Oneindia Kannada

ಮೂಡಬಿದ್ರೆ, ಜನವರಿ 28: ಕರಾವಳಿಯಲ್ಲಿ ಕಂಬಳಕ್ಕಾಗಿ ಹೋರಾಟದ ಕಿಚ್ಚು ಹೊತ್ತಿಕೊಂಡಿದ್ದು, ಮೂಡಬಿದ್ರೆಯ ಸ್ವರಾಜ್ ಮೈದಾನ ಬಳಿ ನಿಷೇಧ ನುಡುವೆಯೂ ಕಂಬಳ ಸಮಿತಿ, ಶಾಸಕ ಅಭಯಚಂದ್ರ ನೇತೃತ್ವದಲ್ಲಿ ಸಾವಿರಾರು ಕಂಬಳಾಬಿಮಾನಿಗಳು ಹಕ್ಕೊತ್ತಾಯ ಮೆರವಣಿಗೆ ಮತ್ತು ಕೋಣಗಳನ್ನು ಗದ್ದೆಗಿಳಿಸಲು ಮುಂದಾದರು.

ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕಾಗಿ ನೂರಾರು ಕೋಣಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಾವಿರಾರು ಕಂಬಳಾಭಿಮಾನಿಗಳು ಸ್ವರಾಜ್ ಮೈದಾನದಿಂದ ಪ್ರತಿಭನಾ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟಿಲು, ಶಾಸಕ ವಿನಯ್ ಕುಮಾರ್ ಸೊರಕೆ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಚೆಂಡೆ ವಾದ್ಯಗಳು ಮೆರವಣಿಗೆಯಲ್ಲಿ ಮೊಳಗಿದವು.[ಮೂಡಬಿದ್ರೆಯಲ್ಲಿ ಕೆಸರುಗದ್ದೆ ಕಂಬಳಕ್ಕೆ ಅಖಾಡ ಸಿದ್ಧ!]

ಇನ್ನು ಕನ್ನಡ, ತುಳು ಚಿತ್ರರಂಗದ ಅನೇಕ ಕಲಾವಿದರು, ರಂಗ ಕಲಾವಿದರು ಮೆರವಣಿಗೆಯಲ್ಲಿ ಹಾಜರಿದ್ದರು. ಅಲ್ಲದೆ ಐದು ಸಾವರಿಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿದ್ದು, ಕಂಬಳಪರ ಘೋಷಣೆ ಕೂರಿದರು. ಕಂಬಳದ ಉಳಿವಿಗಾಗಿ ಸುಗ್ರೀವಾಜ್ಞೆ ರೂಪಿಸಬೇಕೆಂದು ಆಗ್ರಹಿಸಿದರು. ಇನ್ನು ಮೆರವಣಿಗೆ ಕಡಲಕೆರೆಯಲ್ಲಿ ಸಮಾಪನವಾಗಲಿದೆ ಅದರ ಸ್ಥಳದಿಂದಲೇ ನಡೆಯುತ್ತಿರುವ ನೇರ ವರದಿಯಿಲ್ಲಿದೆ

ಸ್ವಾರಾಜ್ ಮೈದಾನದಲ್ಲಿ ಬೃಹತ್ ಜಾಥಾ

ಸ್ವರಾಜ್ ಮೈದಾನದಲ್ಲಿ ಕಂಬಳಕ್ಕಾಗಿ ನಡೆಸುತ್ತಿರುವ ಹೋರಾಟಕ್ಕಾಗಿ ಬೃಹತ್ ಜಾಥಾ ನಡೆಯಿತು. ಸಂಸದ ನಳಿನ್ ಕುಮಾರ್ ಕಟಿಲು, ಶಾಸಕ ವಿನಯ್ ಕುಮಾರ್ ಸೊರಕೆ, ಶಾಸಕ ಅಭಯಚಂದ್ರ ಸೇರಿದಂತೆ ಕಂಬಳ ಸಮಿತಿಯ ಅನೇಕರು ಭಾಗವಹಿಸಿದ್ದರು.

 

ನೂರಾರು ಕೋಣಗಳು

ಕಂಬಳದ ಉಳಿವಿಗಾಗಿ ನಡೆಸುತ್ತಿರುವ ಸ್ವಾರಾಜ್ ಮೈದಾನದಲ್ಲಿ ಕಂಬಳ ಕೋಣಗಳು ಹಾಜರಿದ್ದು ಮೆರವಣಿಗೆಗೆ ಸಾತ್ ನೀಡಿದವು. ಇಲ್ಲಿ ಕಂಬಳದ ಕೋಣದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕಾತುರನಾಗಿರುವ ಕಂಬಳ ಪ್ರೇಮಿಯನ್ನು ಕಾಣಬಹುದು.

ಸಿದ್ದಗೊಂಡಿದೆ ಕಂಬಳಫಥ

ಕಂಬಳ ಆಚರಣೆಗಾಗಿ ಕೆಸರು ಗದ್ದೆ, ಕಂಬಳ ಫಥ ಸಿದ್ದಗೊಂಡಿದ್ದು ಮೆರವಣಿಗೆ ನಂತರ ಕಂಬಳದ ಗದ್ದೆಯಲ್ಲಿ ಸಾಂಪ್ರದಾಯಿಕ ಕ್ರೀಡೆಯನ್ನು ಆಚರಿಸಲು ಕಂಬಳಾಭಿಮಾನಿಗಳು ಸಿದ್ಧಗೊಂಡಿದ್ದಾರೆ. 

ಕಂಬಳ ಕ್ರೀಡೆ ಆಡಿಯೇ ತೀರುತ್ತೇವೆ

ಸ್ವರಾಜ್ ಮೈದಾನದಲ್ಲಿ ಕಂಬಳ ಆಚರಣೆಗಾಗಿ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಜಮಾವಣೆಗೊಂಡಿದ್ದು ಯಾವುದೇ ಕಾರಣಕ್ಕು ಕಂಬಳ ಕ್ರೀಡೆಯನ್ನು ಬಿಡುವುದಿಲ್ಲ ಆಚರಿಸಿಯೇ ತೀರುತ್ತೇವೆ ಎಂಬ ವಿಶ್ವಾಸದಲ್ಲಿರುವುದು.

ಕಂಬಳಕ್ಕಾಗಿ ಹೋರಾಟ ಅನಿವಾರ್ಯ

ಕಂಬಳಕ್ಕಾಗಿ ಬೃಹತ್ ಜಾಥಾ ಹಮ್ಮಿಕೊಂಡಿದ್ದು ಜಾಥಾ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಭಯ ಚಂದ್ರ ಅವರು ಮಾತನಾಡಿ, ಕಂಬಳಕ್ಕಾಗಿ ಹೋರಾಟ ಅನಿವಾರ್ಯ, ಕಂಬಳಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲೇ ಬೇಕು ಎಂದರು. ಈ ವೇಲೆ ಶಾಸಕ ವಿನಯ್ ಕುಮಾರ್ ಸೊರಕೆ, ಸಂಸದ ನಳಿನ್ ಕುಮಾರ್ ಕಟಿಲು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಪೊಲೀಸರ ಬಿಗಿ ಭದ್ರತೆ

3 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇರುವ ಜನಸ್ತೋಮದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲು ಹಾಗೂ ಕಂಬಳ ಕಿಚ್ಚು ಉದ್ವಿಗ್ನಗೊಳ್ಳದಿರಲು 300ಕ್ಕೂ ಹೆಚ್ಚು ಪೊಲೀಸರನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ.

ಕಂಬಳವನ್ನು ಉಳಿಸಿ

ವಿಶ್ವದ ಅತಿ ದೊಡ್ಡ ಪ್ರಾಣಿ ಹಕ್ಕುಗಳ ಸಂಘಟನೆಯಾದ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ (PETA) ನ ವಿರುದ್ಧ ಜನರು ಸಿಡಿದೆದ್ದಿದ್ದು, ಕರಾವಳಿಯ ಭಾವನಾತ್ಮಕ ಕ್ರೀಡೆಯನ್ನು ನ್ಯಾಯ ಸಂಹಿತೆ ಮೂಲಕ ಅಡಗಿಸಲು ಬಿಡುವುದಿಲ್ಲ ಎಂದು ಸೆಟೆದೆದ್ದು ಜನರು ಪೆಟಾವನ್ನು ಬ್ಯಾನ್ ಮಾಡಿ, ಕಂಬಳವನ್ನು ಉಳಿಸಿ ಎಂದಿದ್ದಾರೆ.

ಸಿಂಗಾರಗೊಂಡ ಕೋಣಗಳು

ಕರಾವಳಿಯ ಕಂಬಳಾಭಿಮಾನಿಯೊಬ್ಬರು ತಮ್ಮ ಜೋಡಿಕೋಣಗಳಿಗೆ ಮೂಗುದಾರ ಸೇರಿದಂತೆ ಹಣೆ ಮತ್ತು ಗದ್ದಕ್ಕೆ ಹೊಂದಿಕೊಂಡಂತೆ ಮಾಡಿರುವ ಸಿಂಗಾರ, ಮತ್ತು ಕೊಂಬಿನ ಮಧ್ಯದಲ್ಲಿ ಬರುವ ತುರಾಯಿ ಕೋಣಗಳಿಗೂ ಸೌಂದರ್ಯವನ್ನು ಹೆಚ್ಚಿಸಿದೆ. ಇನ್ನು ಕೋಣಗಳು ನಾವು ಕಂಬಳಕ್ಕೆ ರೆಡೆ ನೀವು ರೆಡಿನಾ? ಎಂದು ಕೇಳುವಂತಿದೆ.

English summary
Today (Jan.28) Organizations ready to celebrate symbolic kambala and parade in Dhakshin Kannada, moodbidri, swaraj mydan to Jodikere. What happen there.
Please Wait while comments are loading...