ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ಕೊಲೆಯಾಗ್ತಾರೆ ಎಂದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು

|
Google Oneindia Kannada News

ಮಂಗಳೂರು, ಜೂನ್ 11: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿಯ ಪೇಜ್ ಒಂದಕ್ಕೆ ಫೇಸ್ ಬುಕ್ ಗುಂಪೊಂದರಲ್ಲಿ ಕಮೆಂಟ್ಸ್ ಹಾಕಿದ ಮುಂಬೈ ಮೂಲದ ಕ್ರೈಸ್ತ ಮಹಿಳೆ ಮತ್ತೆ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯನ್ನು ಅವಾಚ್ಯವಾಗಿ ನಿಂದಿಸಿ, ಇನ್ನೆರಡು ವರುಷ ನಿಮ್ಮ ಅಧಿಕಾರ ಅಷ್ಟೆ. ಅದರೊಳಗೆ ಯಾರಾದರೂ ಬಾಂಬ್ ಸ್ಪೋಟಿಸಿ ಕೊಲ್ಲುತ್ತಾರೆ ಎಂದು ಕೂಡ ಒಬ್ಬ ಮಹಿಳೆ ಪೋಸ್ಟ್ ಮಾಡಿದ್ದಾರೆ. ಈಕೆ ವಿರುದ್ಧ ಗುಂಪಿನ ಸದಸ್ಯರೊಬ್ಬರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಅದಕ್ಕೆ ಬೆದರಿದ ಮಹಿಳೆ ಕ್ಷಮಾಪಣೆ ಕೋರಿದ್ದಾರೆ.[ಫೇಸ್ ಬುಕ್ಕಿನಲ್ಲಿ ಮೋದಿಯ ಅವಹೇಳನ: ಅಬ್ದುಲ್ ಬಂಧನ]

ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುತ್ತಿದ್ದಂತೆ ಹಿಂದೂಸ್ತಾನ್ ಟೈಮ್ಸ್ ಮಾಡಿದ್ದ ವರದಿಯೊಂದನ್ನು ಹಾಕಿದ್ದರು. 2023ನೇ ಇಸವಿಯಲ್ಲಿ ಹೇಗೆ ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕೆನ್ನುವ ಬಗ್ಗೆ ಹಿಂದೂ ಮುಖಂಡರೊಬ್ಬರ ನೇತೃತ್ವದಲ್ಲಿ ರೂಪುರೇಷೆ ಸಿದ್ಧಗೊಳ್ಳುತ್ತಿದೆ ಎಂದಿತ್ತು.

ಕೈಸ್ತರು ಇಸ್ಕಾನ್ ಗೆ ಸೇರುವ ಮುಖಾಂತರ ಹಿಂದೂ ಧರ್ಮಕ್ಕೆ ಆಕರ್ಷಿತರಾಗುತ್ತಿರುವ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಮಾಡಿದ್ದ ವರದಿಯ ಪುಟವನ್ನು ಫೇಸ್ ಬುಕ್ ನ "ಕೊಂಕಣ್ ತಾರಾ"ಎಂಬ ಗುಂಪಿಗೆ ಮೊದಲಾಗಿ ಜುಡಿತ್ ಲೇವಿಸ್ ಎಂಬವರು ಶುಕ್ರವಾರದಂದು ಶೇರ್ ಮಾಡಿಕೊಂಡಿದ್ದಾರೆ.[ಪೇಜಾವರಶ್ರೀ ಅವಹೇಳನ ಖಂಡಿಸಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ]

ಕೊಂಕಣ್ ತಾರಾ ಫೇಸ್ ಬುಕ್ ಗುಂಪು

ಕೊಂಕಣ್ ತಾರಾ ಫೇಸ್ ಬುಕ್ ಗುಂಪು

ಈ ಪೇಜ್ ನ ಕುರಿತಂತೆ ಗುಂಪಿನ ಸದಸ್ಯೆಯೊಬ್ಬರು ಪ್ರದಾನಿ ಮೋದಿಯವರ ವಿರುದ್ಧ ತುಚ್ಚವಾಗಿ ಕಮೆಂಟ್ಸ್ ಹಾಕಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. "ಕೊಂಕಣ್ ತಾರಾ" ಎಂಬ ಫೇಸ್ ಬುಕ್ ಗುಂಪಲ್ಲಿ ಜುಡಿತ್ ಲೇವಿಸ್ ಅವರು ಶೇರ್ ಮಾಡಿದ ಪೇಜಲ್ಲಿ ಕ್ರೈಸ್ತ ಮಹಿಳೆ ಮೋದಿಯವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.

ಇನ್ನೆರಡು ವರ್ಷದಲ್ಲಿ ಪ್ರಧಾನಿ ಕೊಲೆ

ಇನ್ನೆರಡು ವರ್ಷದಲ್ಲಿ ಪ್ರಧಾನಿ ಕೊಲೆ

ಇನ್ನೆರಡು ವರ್ಷ ಅಷ್ಟೆ, ಅಷ್ಟರೊಳಗೆ ಮೋದಿಯನ್ನು ಯಾರಾದರೂ ಬಾಂಬ್ ಸ್ಫೋಟಿಸಿ ಕೊಲ್ಲಲಿ ಎಂದು ಆಶಿಸುತ್ತೇನೆಂದು ಕಮೆಂಟ್ಸ್ ಹಾಕಿದ್ದಾರೆ. ಈ ಹೇಳಿಕೆಗೆ ಗುಂಪಿನಲ್ಲಿರುವ ಕ್ರೈಸ್ತ ಧರ್ಮೀಯ ಸದಸ್ಯರು ಸೇರಿದಂತೆ ಅನೇಕರು ಟೀಕೆ ವ್ಯಕ್ತ ಪಡಿಸಿದ್ದು, ಆಕೆಯ ಮನಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ.

ಮುಂಬೈ ಪೊಲೀಸರಿಗೆ ದೂರು

ಮುಂಬೈ ಪೊಲೀಸರಿಗೆ ದೂರು

ಶುಕ್ರವಾರ ಸಂಜೆ ವೇಳೆ "ಕೊಂಕಣ್ ತಾರಾ" ಫೇಸ್ ಬುಕ್ ಗುಂಪಲ್ಲಿ ಆರಂಭವಾದ ಈ ಚರ್ಚೆಯಲ್ಲಿ ದೇಶದ ಪ್ರದಾನಿ ನರೇಂದ್ರ ಮೋದಿಯವರ ಹತ್ಯೆ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಮಹಿಳೆ, ಅವರ ಕಮೆಂಟ್ಸ್ ಗಳ ಪೋಸ್ಟ್ ನ ನಕಲನ್ನು ಗುಂಪಿನ ಸದಸ್ಯ ಮಂಗಳೂರಿನ ತೊಕ್ಕೊಟ್ಟು ನಿವಾಸಿ ಅಜಿತ್ ಕುಮಾರ್ ಅವರು ಮುಂಬೈ ಪೊಲೀಸರ ಫೇಸ್ ಬುಕ್ ಪೇಜೆ ಗೆ ಟ್ಯಾಗ್ ಮಾಡಿ ದೂರು ಕೊಟ್ಟಿದ್ದಾರೆ.

ಕ್ಷಮಾಪಣೆ ಕೋರಿದ ಮಹಿಳೆ

ಕ್ಷಮಾಪಣೆ ಕೋರಿದ ಮಹಿಳೆ

ತಕ್ಷಣವೇ ಮುಂಬೈ ಪೊಲೀಸರಿಂದ ಪ್ರತಿಕ್ರಿಯೆ ಬಂದಿದ್ದು, ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ತನ್ನ ವಿರುದ್ಧ ಪೊಲೀಸ್ ದೂರು ದಾಖಲಾಗುವ ಬಗ್ಗೆ ತಿಳಿದು ಎಚ್ಚೆತ್ತುಕೊಂಡ ಅವರು ಅಜಿತ್ ಕುಮಾರ್ ಅವರ ಫೇಸ್ ಬುಕ್ ಇನ್ ಬಾಕ್ಸ್ ಗೆ ಸಂದೇಶ ರವಾನಿಸಿದ್ದು, ಕೋಪದಿಂದ ಮೋದಿಯವರಿಗೆ ಹಾಗೆಂದೆ. ದಯವಿಟ್ಟು ನನ್ನನ್ನು ನಿಮ್ಮ ತಂಗಿ ಎಂದು ಪರಿಗಣಿಸಿ ಸಹಾಯ ಮಾಡಿ ಎಂದು ಕ್ಷಮಾಪಣೆ ಕೋರಿದ್ದಾರೆ.

ಮೋದಿ ಭಕ್ತರಿಂದ ದೂರು ದಾಖಲು

ಮೋದಿ ಭಕ್ತರಿಂದ ದೂರು ದಾಖಲು

ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಕ್ಷಮೆ ಕೋರಿದ್ದರೂ ಸಹ ಪೇಜ್ ಅನ್ನು ಶೇರ್ ಮಾಡಿರುವ ಜುಡಿತ್ ಲೇವಿಸ್ ಮಾತ್ರ ಮೋದಿ ವಿರುದ್ಧ ಮಾತಾಡಿದರೆ ಮೋದಿ ಭಕ್ತರು ದೂರು ದಾಖಲಿಸುತ್ತಿದ್ದು, ನಮಗೆ ಮಾತನಾಡಲು ಹಕ್ಕಿಲ್ಲವೇ ಎಂದು ಮತ್ತೆ ಕ್ಯಾತೆ ತೆಗೆದಿದ್ದಾರೆ.

English summary
Objectionable content against prime minister Narendra Modi posted by a woman in a Facebook and complaint registered against her with Mumbai police. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X