ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕದ್ರಿಯ ಜಿಂಕೆ ಪಾರ್ಕ್ ನಲ್ಲಿ ಸಂಗೀತ ಕಾರಂಜಿ ನೋಡಲು ಬಲು ಚೆಂದ

|
Google Oneindia Kannada News

ಮಂಗಳೂರು, ಏಪ್ರಿಲ್ 21 : ನಾಡಿನ, ದೇಶದ ಅಭಿಮಾನ ಸಾರುವ ಹಾಡುಗಳು, ಅದಕ್ಕೆ ತಕ್ಕಂತೆ ಭೋರ್ಗರೆಯುವ ಸಂಗೀತ, ಸಂಗೀತದ ತಾಳ ಲಯಗಳಿಗೆ ಅನುಗುಣವಾಗಿ ನೀರಿನ ನರ್ತನ. ನೀರಿನ ನರ್ತನಕ್ಕೆ ತಕ್ಕಂತೆ ಜಗಮಗಿಸುವ ಬಣ್ಣ-ಬಣ್ಣದ ಬೆಳಕಿನ ಚಿತ್ತಾರ ಇದು ಮಂಗಳೂರಿನ ಕದ್ರಿಯ ಜಿಂಕೆ ಪಾರ್ಕ್ ನಲ್ಲಿ ನಿರ್ಮಿಸಲಾದ ನೀರಿನ ಕಾರಂಜಿಯ ಆಟ.

ಈ ತರಹದ ಅಪರೂಪದ ಸಂಗೀತ ಕಾರಂಜಿಯನ್ನು ಸುಮಾರು 5ಕೋಟಿ ವೆಚ್ಚದಲ್ಲಿ ಕದ್ರಿಯ ಜಿಂಕೆ ಪಾರ್ಕ್ ನಲ್ಲಿ ನಿರ್ಮಿಸಲಾಗಿದೆ. ಕಾರಂಜಿಯಲ್ಲಿ ನೀರಿನ ನರ್ತನದ ಜೊತೆಗೆ ಲೇಸರ್ ಪ್ರದರ್ಶನದ ಮೂಲಕ ಜಿಲ್ಲೆಯ ಇತಿಹಾಸವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ.

Now visit Manglauru kadri park to see the musical fountain glory till April end

ಈಗಾಗಲೇ ಈ ಕಾರಂಜಿಯ ಪ್ರಾಯೋಗಿಕ ಪ್ರದರ್ಶನ ಯಶಸ್ವಿಯಾಗಿದೆ. ಏಪ್ರಿಲ್ ಅಂತ್ಯದ ವರೆಗೆ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಹಾಗಿದ್ದರೇ ಇನ್ನೇಕೆ ತಡ ನೀವೂ ಒಮ್ಮೆ ಕದ್ರಿ ಪಾರ್ಕ್ ಗೆ ಭೇಟಿ ನೀಡಿ ಸಂಗೀತ ಕಾರಂಜಿಯ ನರ್ತನವನ್ನು ಕಣ್ತುಂಬಿಸಿಕೊಳ್ಳಿ

Now visit Manglauru kadri park to see the musical fountain glory till April end

ಸುಮಾರು 30 ನಿಮಿಷಗಳ ಪ್ರಾಯೋಗಿಕ ಪ್ರದರ್ಶನವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಶಾಸಕ ಲೋಬೋ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸಂಗೀತ ಕಾರಂಜಿ ನಿರ್ಮಾಣದ ರೂಪುರೇಷೆ ಸಿದ್ಧಗೊಂಡಿತ್ತು.

ಈಗ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 5 ಕೋಟಿ ರು. ವೆಚ್ಚದಲ್ಲಿ ಹಳೆ ಜಿಂಕೆ ಪಾರ್ಕ್ ನ್ನು ಅಭಿವೃದ್ಧಿಪಡಿಸಿ ಸಂಗೀತ ಕಾರಂಜಿ, ಲೇಸರ್ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ.

Now visit Manglauru kadri park to see the musical fountain glory till April end

ಯಕ್ಷಗಾನ, ಭೂತಾರಾಧನೆ ಹಾಗೂ ಜಿಲ್ಲೆಯ ಇತರ ಸಂಸ್ಕೃತಿಗೆ ಪೂರಕವಾದ ಅಂಶಗಳನ್ನು ಈ ಸಂಗೀತ ಕಾರಂಜಿ ಪಾರ್ಕ್ ಪ್ರತಿಬಿಂಬಿಸಲಿದೆ.

ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಗೀತ ಪಾರ್ಕ್ ಇರುವಂತೆಯೇ, ಮಂಗಳೂರಿನ ಈ ಪಾರ್ಕಿಗೆ ರಾಜೀವ ಗಾಂಧಿ ಸಂಗೀತ ಪಾರ್ಕ್ ಹೆಸರನ್ನು ಅಂತಿಮಗೊಳಿಸಲಾಗಿದೆ.

English summary
The Rs. 5-crore project musical fountain with laser show at Kadri Park Mangaluru, the largest lung space in the city, Musical fountain will be there till April end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X