ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರು : ಶಾಲಾ ಶಿಕ್ಷಕರ ವರ್ಗಾವಣೆ, ಸಚಿವರ ಭರವಸೆ ಹುಸಿ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಪುತ್ತೂರು, ಆಗಸ್ಟ್ 04 : ಹಾರಾಡಿ ಶಾಲೆ ಶಿಕ್ಷಕರ ವರ್ಗಾವಣೆ ಸಮಸ್ಯೆ ಮುಗಿಯುವ ಸೂಚನೆ ಕಾಣುತ್ತಿಲ್ಲ. ಶಿಕ್ಷಕರ ವರ್ಗಾವಣೆ ರದ್ದು ಮಾಡಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಖುದ್ದು ಫೋನ್ ಮಾಡಿ ಭರವಸೆ ನೀಡಿ 14 ದಿನಗಳಾಗಿವೆ.

ಪುತ್ತೂರು ತಾಲೂಕಿನ ಹಾರಾಡಿಯ ಸರಕಾರಿ ಶಾಲೆಯ ಸಮಸ್ಯೆ ಬಗೆಹರಿಸುವ ಸಚಿವರ ಭರವಸೆ ಹುಸಿಯಾಗಲಿದೆ ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ. ಕಾರಣ, ಹೊಸದಾಗಿ ರಚನೆಯಾಗಿರುವ ಮಾನದಂಡ ಹಾರಾಡಿ ಶಾಲೆಗೆ ಅನ್ವಯವಾಗುವುದಿಲ್ಲ ಎಂಬ ಸಂಗತಿ ಹೊರಬಿದ್ದಿದೆ.[ಗೃಹ ಸಚಿವರಿಗೆ ಪುತ್ತೂರಿನ ವಿದ್ಯಾರ್ಥಿ SMS ಕಳಿಸಿದ್ದೇಕೆ?]

No action on Haradi school teacher transfer issue

ತಾಲೂಕಿನಲ್ಲೇ ಅತ್ಯಂತ ಹೆಚ್ಚಿನ (432) ಮಕ್ಕಳನ್ನು ಹೊಂದಿರುವ ಮತ್ತು ಇಂಗ್ಲೀಷ್ ಮೀಡಿಯಂ ಕೂಡಾ ಹೊಂದಿರುವ ಹಾರಾಡಿ ಶಾಲೆಯಲ್ಲಿ 15 ಶಿಕ್ಷಕರಿದ್ದು ಅದರಿಂದ ಶುಭಲತಾ, ಯಶೋಧ, ವಿಜಯ ಮತ್ತು ಲಿಲ್ಲಿ ಡಿ ಸೋಜಾ ಅವರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಿ ಜುಲೈ 19ರಂದು ವರ್ಗಾವಣೆ ಕೌನ್ಸೆಲಿಂಗ್ ನಡೆಸಲಾಗಿತ್ತು.[ಮೈಸೂರಿನಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ]

ಅದೇ ದಿನ ರಾತ್ರಿ ಶಾಲೆಯ ವಿದ್ಯಾರ್ಥಿ ಮಂತ್ರಿಮಂಡಲದ ಗೃಹ ಸಚಿವ ದಿವಿತ್ ರೈ, ರಾಜ್ಯದ ಗೃಹಸಚಿವರಿಗೆ ಎಸ್ಎಂಎಸ್ ಮಾಡಿ ಸಮಸ್ಯೆ ಸಮಸ್ಯೆ ತಿಳಿಸಿದ್ದ. ಸಂದೇಶ ನೋಡಿದ್ದ ಸಚಿವರು ಅಂದೇ ರಾತ್ರಿ ದಿವಿತ್‌ಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.[ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ರದ್ದುಪಡಿಸಿ: ಹೊರಟ್ಟಿ]

ಶಾಲೆಯ ಸಮಸ್ಯೆಯ ಬಗ್ಗೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೂ ಮಾಹಿತಿ ನೀಡಿದ್ದರು. ಮರುದಿನದ ಬೆಳವಣಿಗೆಗಳನ್ನು ವಾಟ್ಸಾಪ್ ಮೂಲಕ ದಿವಿತ್‌ಗೆ ಸಚಿವರು ತಿಳಿಸಿದ್ದರು. ವಿದ್ಯಾರ್ಥಿಯೊಬ್ಬನಿಗೆ ಫೋನ್ ಮಾಡಿ ಮಾತನಾಡಿದ ಪರಮೇಶ್ವರ ಅವರ ಜನಪರ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.

ಮಲೆನಾಡು ಜಿಲ್ಲಾ ಯೋಜನೆ : ಇದರ ಬೆನ್ನಲ್ಲೇ ಹೊಸದೊಂದು ಯೋಜನೆ ರೂಪಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಮಲೆನಾಡು ಪ್ರದೇಶದ ಜಿಲ್ಲೆಗಳಿಗೆ ರಿಯಾಯಿತಿ ಘೋಷಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳನ್ನು ಇದಕ್ಕೆ ಸೇರಿಸಲಾಗಿತ್ತು. ಈ ಮಾನದಂಡದಂತೆ ಹೊಸ ಪಟ್ಟಿ ತಯಾರಿಸಲಾಗಿದ್ದು ಅದು ಹಾರಾಡಿ ಶಾಲೆಗೆ ಅನ್ವಯವಾಗುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಈಗಾಗಲೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿರುವ ಶಾಲೆಗಳ ಪೈಕಿ 61 ರಿಂದ 120ರ ವರೆಗೆ ಮಕ್ಕಳಿರುವ ಶಾಲೆಗಳಿಂದ ಕೌನ್ಸೆಲಿಂಗ್ ಆದವರಲ್ಲಿ ಒಬ್ಬರನ್ನು ಅಲ್ಲಿಯೇ ಉಳಿಸಿಕೊಳ್ಳಲು ಈ ಯೋಜನೆ ಅವಕಾಶ ನೀಡಿದೆ. ಆದರೆ, ಹಾರಾಡಿ ಶಾಲೆಯಲ್ಲಿ 432 ಮಕ್ಕಳಿರುವ ಕಾರಣ ಅಲ್ಲಿಗೆ ಈ ನಿಯಮ ಅನ್ವಯವಾಗಿಲ್ಲ.

ಪ್ರಸ್ತುತ ಸಿದ್ದವಾಗಿರುವ ಹೊಸ ಪಟ್ಟಿಯಲ್ಲಿ ಹಾರಾಡಿ ಶಾಲೆಯ ಎಲ್ಲಾ ನಾಲ್ಕು ಶಿಕ್ಷಕರನ್ನು ಕೌನ್ಸೆಲಿಂಗ್ ಆದವರೆಂದೇ ಗುರುತಿಸಲಾಗಿದೆ. ಸದ್ಯಕ್ಕೆ ಇವರಿಗೆ ರಿಲೀವ್ ಆಗಿಲ್ಲದಿದ್ದರೂ ಮಲೆನಾಡು ಯೋಜನೆ ಕಾಯಂ ಆದರೆ ಇವರು ರಿಲೀವ್ ಆಗುವುದು ಖಚಿತ. ಹೊಸ ಯೋಜನೆ ಪ್ರಕಟಿಸಿರುವ ಸರಕಾರ ಅದರ ಅಡಿಯಲ್ಲಿ ಹೊಸದಾಗಿ ಹೆಚ್ಚುವರಿ ಪಟ್ಟಿ ಸಿದ್ದಪಡಿಸಿ ಮರು ಕೌನ್ಸೆಲಿಂಗ್ ನಡೆಸಿದರೆ ಸಮಸ್ಯೆ ಪರಿಹಾರ ಆಗಬಹುದೆಂಬ ನಿರೀಕ್ಷೆ ಇದೆ.

English summary
No action on teacher transfer issue of the government model upper primary school in Haradi, Puttur taluk. Home minister has assured the student Divit Rai to stop the transfer of teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X