ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋನ್‌ ಕರೆ ನಂಬಿ 18 ಸಾವಿರ ಕಳೆದುಕೊಂಡ್ರು!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜುಲೈ 04 : ನಿಮ್ಮ ಎಟಿಎಂ ಖಾತೆ ಬ್ಲಾಕ್ ಆಗಿದೆ. ಹೊಸ ಕೋಡ್ ನಂಬರ್ ಕೊಡುತ್ತೇವೆ ನಿಮ್ಮ ಹಳೆ ಕೋಡ್ ಹೇಳಿ ಎಂದು ಬಂದ ಕರೆ ನಂಬಿದ ಮಂಗಳೂರಿನ ವ್ಯಕ್ತಿಯೊಬ್ಬರು 18 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್‌ನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಉದ್ಯೋಗಿ ಹೀಗೆ ಎಟಿಎಂ ಪಿನ್ ನಂಬರ್ ಕೊಟ್ಟು ಹಣ ಕಳೆದುಕೊಂಡಿದ್ದಾರೆ. ಘಟನೆ ನಡೆದು 15 ದಿನಗಳು ಕಳೆದಿದ್ದು, ಬ್ಯಾಂಕ್ ಖಾತೆ ಪರಿಶೀಲನೆ ಮಾಡಿದಾಗ ಅದರಲ್ಲಿ 18 ಸಾವಿರ ರೂ. ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. [10 ಸಾವಿರ ಕಳೆದುಕೊಂಡ ಪೊಲೀಸ್ ಮಹಾ ನಿರ್ದೇಶಕರು]

cyber crime

ಮಂಗಳೂರಿನ ಎಮರೋಳಿ ನಿವಾಸಿಯಾಗಿರುವ ಉದ್ಯೋಗಿ ನಗರದ ಖಾಸಗಿ ಬ್ಯಾಂಕ್‌ನ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. 15 ದಿನಗಳ ಹಿಂದೆ ಕರೆ ಮಾಡಿದ್ದ ವ್ಯಕ್ತಿ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಪರಿಚಯ ಮಾಡಿಕೊಂಡು ಎಟಿಎಂ ಪಿನ್ ನಂಬರ್ ಪಡೆದಿದ್ದ. ನಂತರ ಬ್ಯಾಂಕ್ ಖಾತೆಯಿಂದ ಹಣ ತೆಗೆದು ವಂಚನೆ ಮಾಡಿದ್ದಾನೆ. [ಬ್ಯಾಂಕ್ ಖಾತೆಗೆ ಕನ್ನ, ಒಂದೂವರೆ ಕೋಟಿ ಲೂಟಿ]

ಎಟಿಎಂ ಕಾರ್ಡ್ ನಂಬರ್ ಹೇಳಿದ್ದ : ತಾನು ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ. ಹಿಂದಿಯಲ್ಲಿ ಮಾತನಾಡಿದ್ದ. ನಿಮ್ಮ ಎಟಿಎಂ ಖಾತೆ ಬ್ಲಾಕ್ ಆಗಿದೆ. ಹೊಸ ಕೋಡ್ ನಂಬರ್ ನೀಡುವುದಕ್ಕಾಗಿ ನಿಮ್ಮ ಹಳೆ ಕೋಡ್ ನೀಡಿ ಎಂದು ಹೇಳಿದ್ದ.[ಸೈಬರ್ ಕ್ರೈಂ : 2 ವರ್ಷದ ಜೈಲು ಶಿಕ್ಷೆ]

ಅಲ್ಲದೆ ಎಟಿಎಂ ಕಾರ್ಡ್‌ನ ಅರ್ಧ ಭಾಗದ ನಂಬರ್ ಸರಿಯಾಗಿದ್ದ ಹೇಳಿದ್ದ. ಇದರಿಂದ ಬ್ಯಾಂಕ್‌ನವರು ಎಂದು ನಂಬಿ ಎಟಿಎಂ ಕಾರ್ಡ್ ಕೋಡ್ ಕೊಟ್ಟಿದ್ದರು. ಕೆಲವು ದಿನಗಳ ಬಳಿಕ ಖಾತೆಯನ್ನು ಪರಿಶೀಲಿಸಿದಾಗ ರೂ. 18 ಸಾವಿರ ಡ್ರಾ ಮಾಡಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ನೀಡಿದಾಗ ಅವರು ಪೊಲೀಸರಿಗೆ ದೂರು ನೀಡುವಂತೆ ಸೂಚನೆ ನೀಡಿದ್ದರು. ಬ್ಯಾಂಕ್‌ನವರ ಸಲಹೆಯಂತೆ ಸುರತ್ಕಲ್ ಪೊಲೀಸ್ ಠಾಣೆಗೆ ಹಣ ಕಳೆದುಕೊಂಡವರು ದೂರು ನೀಡಿದ್ದಾರೆ.

English summary
A man introduced himself as an bank employee and get details about ATM card along with the secret number and withdrawn Rs 18,000 from The National Institute of Technology Karnataka (NITK) employee Surathkal, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X