ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ಭಾಗಕ್ಕೆ ಹಲವು ಕೊಡುಗೆ ನೀಡಿದ ನಿತಿನ್ ಗಡ್ಕರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 29 : ಬೈಕಂಪಾಡಿಯ ಮೇಲ್ಸೇತುವೆಯನ್ನು ಸೋಮವಾರ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸಾಂಕೇತಿಕವಾಗಿ ಉದ್ಘಾಟನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕರ್ನಾಟಕದ ಯಾವುದೇ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದಲ್ಲಿ ಅವುಗಳನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.

ಸೋಮವಾರ ಮಂಗಳೂರಿನ ಪಣಂಬೂರು ಬಳಿಯ ಎನ್‌ಎಂಪಿಟಿಯ ಜವಾಹರ್‌ಲಾಲ್ ನೆಹರು ಸೆಂಟಿನರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಬೈಕಂಪಾಡಿಯಲ್ಲಿನ ಮೇಲ್ಸೇತುವೆ, ರಾಷ್ಟ್ರೀಯ ಹೆದ್ದಾರಿ 75 ರಲ್ಲಿನ ಬಂಟ್ವಾಳ ಬಳಿಯಿರುವ ಮೇಲ್ಸೇತುವೆ, ಹಾಗೂ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ಪೂರ್ಣಗೊಂಡ ಕಾಮಗಾರಿಯನ್ನು ರಿಮೋಟ್ ಮೂಲಕ ಗಡ್ಕರಿ ಉದ್ಘಾಟಿಸಿದರು.

nitin gadkari

ಕರಾವಳಿಗೆ ಕೊಡುಗೆ : ಸಮಾರಂಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, ಕರಾವಳಿಯ ಜನರಿಗೆ ಬಂಪರ್ ಕೊಡುಗೆ ನೀಡಿದರು. 'ತೊಕ್ಕೋಟು ಮುಡಿಪು ಮೆಲ್ಕಾರ್ ರಸ್ತೆಯ ಚತುಷ್ಪತ, ಕಾರ್ಕಳ ಮೂಡಬಿದ್ರೆ ಬಿಸಿರೋಡ್ ರಸ್ತೆ ಹಾಗೂ ಬಿಸಿರೋಡು ಕೈಕಂಬ ಕಟೀಲು ಮುಲ್ಕಿ ರಸ್ತೆಯನ್ನು ಮುಂದಿನ ದಿನಗಳಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲಾಗುವುದು' ಎಂದರು.

'ಕೃಷಿ ಮತ್ತು ಕೈಗಾರಿಕೆ ಉದ್ಯಮದಲ್ಲಿ, ನೀರು, ವಿದ್ಯುತ್ ಮತ್ತು ಸಾರಿಗೆ ಬಹಳ ಪ್ರಮುಖವಾಗಿದ್ದು, ಮತ್ತು ಕೈಗಾರಿಕಾ ವಲಯದಲ್ಲಿ ಉದ್ಯೋಗ ಸೃಷ್ಟಿ ಮಾಡಿ ಬಡತನವನ್ನು ನಿರ್ಮೂಲನ ಮಾಡಬಹುದು ಎಂದರು. ಪ್ರತಿ ವರ್ಷ 5 ಲಕ್ಷಕ್ಕಿಂತ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ನಿಯಂತ್ರಿಸಲು. ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.

mangaluru

ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಡಿ.ವಿ. ಸದಾನಂದ ಗೌಡ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯಿದಿನ್ ಬಾವಾ, ಮಾಜಿ ಸಚಿವ ನಾಗರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

English summary
Union minister for road transport and highways Nitin Gadkari on Monday, March 28 symbolically inaugurated the Baikampady over bridge in Panambur, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X