ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಜೈಲಿಗೆ ನೂತನ ಜೈಲರ್, ಅಧೀಕ್ಷಕರ ನೇಮಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 09 : ಮಂಗಳೂರು ಜೈಲಿನ ಜೈಲರ್ ಅಗಿ ರಘುಪತಿ ಮತ್ತು ಅಧೀಕ್ಷಕರಾಗಿ ವಿ.ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಜೈಲಿನಲ್ಲಿ ನಡೆದ ಕೈದಿಗಳ ಹತ್ಯೆ ಪ್ರಕರಣದ ನಂತರ ಜೈಲು ಅಧೀಕ್ಷಕ ಓಬಲೇಶಪ್ಪ ಸೇರಿದಂತೆ ಐದು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು.

ನವೆಂಬರ್ 2ರಂದು ಮಂಗಳೂರಿನ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿತ್ತು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47) ಅವರನ್ನು ಹತ್ಯೆ ಮಾಡಲಾಗಿತ್ತು. [ಮಂಗಳೂರು ಜೈಲೊಳಗೆ ಆಯುಧಗಳು ಬಂದಿದ್ದು ಹೇಗೆ?]

jail

ಈ ಘಟನೆ ನಡೆದ ಬಳಿಕ ಕರ್ತವ್ಯಲೋಪದ ಆರೋಪದ ಮೇಲೆ ಜೈಲು ಅಧೀಕ್ಷಕ ಓಬಲೇಶಪ್ಪ ಸಹಿತ ಐವರು ಸಿಬ್ಬಂದಿಗಳನ್ನು ಬಂಧಿಖಾನೆ ಇಲಾಖೆ ಎಡಿಜಿಪಿ ಕಮಲ್‍ಪಂತ್ ಅಮಾನತು ಮಾಡಿದ್ದರು. ವಿಚಾರಣಾಧೀನ ಕೈದಿ ಫೈಝಲ್ ಎಂಬಾತ ಜೈಲು ಸಿಬ್ಬಂದಿಯ ಸಹಕಾರದಿಂದಲೇ ಈ ಹತ್ಯೆ ನಡೆದಿದೆ ಎಂದು ಆರೋಪಿಸಿದ್ದ. [ಜೈಲಿನಲ್ಲಿ ಹತ್ಯೆಯಾದವರು ಯಾರು?]

ಸದ್ಯ, ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿ. ಕೃಷ್ಣಮೂರ್ತಿ ಅವರನ್ನು ಅಧೀಕ್ಷಕರಾಗಿ ಮತ್ತು ರಘುಪತಿ ಅವರನ್ನು ಜೈಲರ್‌ ಆಗಿ ನೇಮಕ ಮಾಡಲಾಗಿದೆ. ಅಲ್ಲದೇ ಆರು ಹೊಸ ಸಿಬ್ಬಂದಿಯನ್ನು ಜೈಲಿನ ಉಸ್ತುವಾರಿ ನೋಡಿಕೊಳ್ಳಲು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. [ಮಂಗಳೂರು ಜೈಲಿನಲ್ಲಿ ಕೊಲೆ ಮಾಡಿಸಿದ್ದು ವಿಕ್ಕಿ ಶೆಟ್ಟಿ]

ಮಂಗಳೂರಿನ ಜೈಲಿನಲ್ಲಿ ಹತ್ಯೆ ನಡೆದ ಬಳಿಕ ಪೊಲೀಸ್ ಅಧಿಕಾರಿಗಳ ತಂಡ ಜೈಲಿನಲ್ಲಿ ಶೋಧ ನಡೆಸಿತ್ತು. 6 ಚೂರಿಗಳು, 16 ಮೊಬೈಲ್, 7 ಸಿಮ್‍, 7 ಮೆಮೊರಿ ಕಾರ್ಡ್‍, ಮೊಬೈಲ್ ಚಾರ್ಜರ್ ಮುಂತಾದ ವಸ್ತುಗಳು ಜೈಲಿನಲ್ಲಿ ಪತ್ತೆಯಾಗಿದ್ದವು.

ಇಬ್ಬರ ಹತ್ಯೆ ನಡೆದಿತ್ತು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 2ರ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47)ಯನ್ನು ಹತ್ಯೆ ಮಾಡಲಾಗಿತ್ತು. ಮಂಗಳೂರು ಜೈಲಿನಲ್ಲಿ ನಡೆದ ಹತ್ಯೆಗೆ ನಾನೇ ಕಾರಣ. ನಮ್ಮ ತಂಟೆಗೆ ಬಂದರೆ ಯಾರನ್ನೂ ಬಿಡುವುದಿಲ್ಲ. ಯೂಸುಫ್ ಕೊಲೆಗೆ ನಾನು ಹೊಣೆ. ನನ್ನ ಸಹಚರರು ಆತನನ್ನು ಮುಗಿಸಿದ್ದಾರೆ ಎಂದು ಭೂಗತ ವಿಕ್ಕಿ ಶೆಟ್ಟಿ ಹೇಳಿಕೊಂಡಿದ್ದಾನೆ.

English summary
New jailer and jail superintendent appointed to the Mangaluru jail. Jail superintendent Obaleshappa and five other officers suspended after two jail inmates were killed in a fight at jail on November 2, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X