ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್ ನಿಂದ ದ.ಕ ಜಿಲ್ಲಾದ್ಯಾಂತ ಹಳ್ಳಿಗೊಬ್ಬ ಪೊಲೀಸ್!

|
Google Oneindia Kannada News

ಮಂಗಳೂರು, ಮಾರ್ಚ್. 29 : ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ 'ಬೀಟ್ ಸಿಸ್ಟಮ್' ನ್ನು ಪರಿಣಾಮಕಾರಿಯಾಗಿ ಅಳವಡಿಸುವ ದೃಷ್ಟಿಯಿಂದ ಹಳ್ಳಿಗೊಂದು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಬೊರಸೆಯವರು, ಈ ಹಳ್ಳಿಗೊಬ್ಬ ಪೊಲೀಸ್ ಮಾದರಿಯ ವಿನೂತನ ಗಸ್ತು ವ್ಯವಸ್ಥೆ ಏಪ್ರಿಲ್ 01ರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ. ಈಗಾಗಲೇ ಎಲ್ಲ ಹಳ್ಳಿಗಳಲ್ಲಿಯೂ ಸಮಿತಿಯ ಸದಸ್ಯರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.[ಏ,1ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸರ್ವೀಸ್]

New beat system of DK police will empower policemen wholistically: SP

ಆಯಾ ಹಳ್ಳಿಯ ಉಸ್ತುವಾರಿ ವಹಿಸಿಕೊಂಡ ಪೊಲೀಸ್ ಹಳ್ಳಿಯ ಎಲ್ಲ ವಿಚಾರಗಳ ಕಡೆ ಗಮನಹರಿಸಬೇಕು. ಅವರ ವಸತಿ ಕೂಡ ಹಳ್ಳಿಯಲ್ಲೇ. ಈಗ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದ್ದು ಅನಂತರ ಎಲ್ಲ ಠಾಣೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಏನಿದು ಹಳ್ಳಿಗೊಬ್ಬ ಪೊಲೀಸ್?
ಹಳ್ಳಿಗೊಬ್ಬ ಪೊಲೀಸ್ ವ್ಯವಸ್ಥೆಯಲ್ಲಿ ಪ್ರತಿ ಹಳ್ಳಿಗಳಲ್ಲಿ ನಾನಾ ವರ್ಗ, ಜಾತಿಯ ಸ್ಥಳೀಯ 50 ಮಂದಿಯ ತಂಡ ನೇಮಿಸಲಾಗುತ್ತದೆ. ಈ ತಂಡಕ್ಕೆ ಮುಖ್ಯಸ್ಥನಾಗಿ ಒಬ್ಬ ಒಬ್ಬ ಪೇದೆಯನ್ನು ನಿಯೋಜಿಸಲಾಗುತ್ತದೆ.

ನಿಯೋಜನೆಗೊಂಡಿರು ಪೇದೆ ತಂಡದ ಜತೆ ನಿಕಟ ಸಂಪರ್ಕ ಹೊಂದಿರಬೇಕು. ಈತನಿಗೆ ಆ ಗಸ್ತಿನ ಎಲ್ಲ ಪೊಲೀಸ್ ಕರ್ತವ್ಯಗಳ ಸಂಪೂರ್ಣ ಜವಾಬ್ದಾರಿ ನೀಡುವುದು.

ಮಾತ್ರವಲ್ಲದೆ ಒಬ್ಬ ಸಬ್ ಇನ್ಸ್ ಪೆಕ್ಟರ್ ನಂತೆ ಈತನಿಗೆ ಹಳ್ಳಿಗಳಲ್ಲಿ ಆಗುವ ಎಲ್ಲಾ ಆಗು ಹೋಗುಗಳ ಮಾಹಿತಿ ಇರಬೇಕು. ಈ ರೀತಿಯಾಗಿ ಸ್ಥಳೀಯ ವಿದ್ಯಮಾನಗಳ ಮಾಹಿತಿ ಸಂಗ್ರಹಿಸಿ, ಅಪರಾಧ ಹಾಗೂ ಅಪರಾಧಿಗಳ ಕುರಿತು ಮಾಹಿತಿ ಕಲೆ ಹಾಕುವುದು.

ರೌಡಿ ಚಟುವಟಿಕೆಗಳ ಮೇಲೆ ನಿಗಾ, ರೌಡಿ ಶೀಟರ್ ತೆರೆಯುವುದು, ಪಾಸ್ ಪೋರ್ಟ್ ಅರ್ಜಿ, ಉದ್ಯೋಗ ನೇಮಕಾತಿ, ಪರಿಶೀಲನೆ ಸೇರಿದಂತೆ ಪೊಲೀಸ್ ಇಲಾಖೆಯ ಕೆಲಸಗಳನ್ನು ಕಾನ್ಸ್ ಟೇಬಲ್ ಗಳು ಸಮಿತಿಯ ಸದಸ್ಯರ ನೆರವಿನಲ್ಲಿ ಮಾಡಲಿದ್ದಾರೆ ಎಂದು ಎಸ್ಪಿ ಹೇಳಿದರು.

English summary
The village beat system – a new way to make the police interact with the public – will be put in place in Dakshina Kannada from April 1, said Bhushan Gulabrao Borase, Superintendent of Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X