ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊಳ್ಳೆಗಳಿಗೆ ಯಮಪಾಶ, ಮಂಗಳೂರಿನ ಈ ಮೋಝಿಕ್ವಿಟ್

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ. 08 : ಸೊಳ್ಳೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಾರೆ. ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಸೊಳ್ಳೆಗಳು ಕಾರಣವಾಗಿವೆ. ಸೊಳ್ಳೆಗಳನ್ನು ಸರ್ವನಾಶ ಮಾಡಲು ಮಂಗಳೂರಿನ ವ್ಯಕ್ತಿಯೊಬ್ಬರು ಹೊಸತೊಂದು ಆವಿಷ್ಕಾರ ಮಾಡಿದ್ದಾರೆ. ಈ ಆವಿಷ್ಕಾರ ಫಲವನ್ನು ನೀಡಿದೆ.

ಕಾಯಿಲ್, ಲಿಕ್ವಿಡ್‌ಗಳನ್ನು ಹಾಕಿ ಸೊಳ್ಳೆಗಳನ್ನು ಓಡಿಸುವುದನ್ನು ನೋಡಿದ್ದೀರಿ. ಆದರೆ ಈ ಹೊಸ ಯಂತ್ರ ಸೊಳ್ಳೆಗಳನ್ನು ಕೊಲ್ಲುತ್ತದೆ. ಅಲ್ಲದೇ ಇದಕ್ಕೆ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಿಲ್ಲ. ಕೇವಲ ಕರೆಂಟ್ ಇದ್ದರೆ ಸಾಕು ಈ ಯಂತ್ರ ಸೊಳ್ಳೆಗಳನ್ನು ಸರ್ವನಾಶ ಮಾಡುತ್ತದೆ.

MozziQuit

ಸೊಳ್ಳೆಗಳನ್ನು ಕೊಲ್ಲುವ ಈ ಯಂತ್ರದ ಹೆಸರು 'ಮೋಝಿಕ್ವಿಟ್'. ಮಂಗಳೂರಿನ ಇಗ್ನೇಶಿಯಸ್ ಓರ್ವಿನ್ ನೊರೋನ್ಹಾ ಇದನ್ನು ಆವಿಷ್ಕಾರ ಮಾಡಿದ್ದಾರೆ. 12 ವರ್ಷಗಳ ಸಂಶೋಧನೆ ನಂತರ 'ಮೋಝಿಕ್ವಿಟ್'ಯಂತ್ರ ಸಿದ್ಧಗೊಂಡಿದೆ. [ಸೊಳ್ಳೆಗೆ ಹೆದರಿ ಸಭಾಪತಿಗೆ ಪತ್ರ ಬರೆದ ವಿಮಲಾಗೌಡ]

ಬಿ.ಕಾಂ ಓದಿದ್ದ ಓರ್ವಿನ್ ನೊರೋನ್ಹಾ ಸೌದಿ ಅರೇಬಿಯಾದಲ್ಲಿ ಅಗ್ನಿ ನಿರೋಧಕ ಮತ್ತು ವಿವಿಧ ರಾಸಾಯನಿಕ ಉತ್ಪಾದನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ವಾಪಸ್ ಬಂದ ಬಳಿಕ ಅವರು ಸೊಳ್ಳೆಗಳ ನಿಮೂರ್ಲನೆಗಾಗಿ ಸಂಶೋಧನೆ ನಡೆಸಿ, ಮೋಝಿಕ್ವಿಟ್ ಯಂತ್ರವನ್ನು ಆವಿಷ್ಕರಿಸಿದ್ದಾರೆ.

10 ಕೋಟಿ ಸೊಳ್ಳೆ ಕೊಂದಿದೆ : ಮೋಝಿಕ್ವಿಟ್ ಯಂತ್ರವನ್ನು ಪಶು ಸಂಗೋಪನಾ ಸಚಿವ ಟಿ.ಬಿ ಜಯಚಂದ್ರ ಅವರು ನೋಡಿದ್ದರು. ಪರೀಕ್ಷಾರ್ಥವಾಗಿ ಬೀದರ್‍ ಪಶು ವಿವಿಯ ದನದ ಕೊಟ್ಟಿಗೆಯಲ್ಲಿ ಈ ಯಂತ್ರವನ್ನು ಇಡಲಾಗಿತ್ತು. ಮೂರು ತಿಂಗಳಿನಲ್ಲಿ ಈ ಯಂತ್ರ 10 ಕೋಟಿ ಸೊಳ್ಳೆಗಳನ್ನು ಕೊಂದು ತಿಂದಿದೆ. ಸೊಳ್ಳೆಗಳನ್ನು ಸಾಯಿಸಿದ್ದರಿಂದ ಪಶು ವಿವಿಯ ಹಸುಗಳ ತೂಕ ಹೆಚ್ಚಾಗುವ ಜೊತೆಗೆ ಹಾಲಿನ ಇಳುವರಿಯೂ ಹೆಚ್ಚಾಗಿದೆಯಂತೆ.

dakshina kannada

ಈ ಯಂತ್ರದ ಕೆಲಸ ಹೇಗೆ? : ಮೋಝಿಕ್ವಿಟ್ ಯಂತ್ರದಲ್ಲಿ ಫ್ಯಾನ್ ಆಳವಡಿಸಲಾಗಿದೆ. ಇದರಿಂದ ಸೊಳ್ಳೆಗಳು ಸಾಯುತ್ತದೆ. ಸೊಳ್ಳೆಗಳು ಯಂತ್ರದ ಬಳಿ ಬರುವುದಕ್ಕೆ ರಕ್ತದ ರೀತಿಯ ವಸ್ತುವನ್ನು ಬಳಸಲಾಗಿದೆ. ಈ ಯಂತ್ರದ ಬಳಕೆಗಾಗಿ ಓರ್ವಿನ್ ಪೇಟೆಂಟ್ ಪಡೆದಿದ್ದಾರೆ.

ಈ ಮೋಝಿಕ್ವಿಟ್ ಎರಡೂ ರೂಪದಲ್ಲಿದ್ದು ಲಭ್ಯವಿದೆ ಸಣ್ಣ ಯಂತ್ರದ ಬೆಲೆ 1500 ರೂ., ದೊಡ್ಡ ಯಂತ್ರದ ಬೆಲೆ 2990 ರೂ. ಆಗಿದೆ. ವಿಶೇಷವೆಂದರೆ ಈ ಯಂತ್ರ ಆರೋಗ್ಯ ಸಚಿವ ಯು.ಟಿ. ಖಾದರ್ ಮನೆಯಲ್ಲೂ ಇದೆ. ಹೆಚ್ಚಿನ ಮಾಹಿತಿಗಾಗಿ ಇಗ್ನೇಶಿಯಸ್ ಓರ್ವಿನ್ ನೊರೋನ್ಹಾ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ : 98866 75656

English summary
Karnataka : Ignatius Orwin Noronha (55) a RNRI, resident of Mangaluru has invented a device that can kill insects, Mosquitos without harming the environment. Noronha has spent nearly 15 years improving the device, named MozziQuit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X