ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ನಗರದಲ್ಲಿ ಮತ್ತಷ್ಟು ಸಿಗ್ನಲ್ ವ್ಯವಸ್ಥೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ.28 : ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದರೂ ರಸ್ತೆಗಳು ಅಗಲಗೊಳ್ಳದೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಸಂಚಾರ ಪೊಲೀಸರು 4 ಹೊಸ ಸಿಗ್ನಲ್ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ 10 ಜಂಕ್ಷನ್‌ಗಳಲ್ಲಿ ಸಿಗ್ನಲ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದ್ದಾರೆ.

ಸಂಚಾರ ವಿಭಾಗದ ಎಸಿಪಿ ಉದಯ ನಾಯಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಲ್ಮಠದ ವಾಸ್ ಬೇಕರಿ ಬಳಿ, ಬೆಂದೂರ್‌ವೆಲ್ ವೃತ್ತ, ಬೆಂದೂರ್‌ನ ತೋಟಗಾರಿಕೆ ಇಲಾಖೆ ಕಚೇರಿ ಬಳಿ ಮತ್ತು ಕೆಎಸ್‌ಆರ್‌ಟಿ ವೃತ್ತದಲ್ಲಿ ಹೊಸ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತಿದೆ ಎಂದರು. [ವಾಹನಕ್ಕೆ ಸುಲಭವಾಗಿ ಫ್ಯಾನ್ಸಿ ನಂಬರ್ ಪಡೆಯಿರಿ]

Traffic Police

ಒಂದು ವಾರದೊಳಗೆ ಎಲ್ಲಾ 4 ಸಿಗ್ನಲ್ ಅಳವಡಿಸುವ ಕಾಮಗಾರಿಯನ್ನು ಮುಗಿಸಲಾಗುತ್ತದೆ. ಬಂಟ್ಸ್ ಹಾಸ್ಟೆಲ್- ಜ್ಯೋತಿ ವೃತ್ತ ಕಾಂಕ್ರಿಟ್ ಕಾಮಗಾರಿ ಮುಗಿದು ಸಂಚಾರ ಆರಂಭಗೊಳ್ಳುತ್ತಿದ್ದಂತೆ, ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್‌ನಲ್ಲಿ ನಿರ್ಮಿಸಿರುವ ಹೊಸ ಡಿಜಿಟಲ್ ಸಿಗ್ನಲ್ ಕಾರ್ಯಾರಂಭ ಮಾಡಿ, ಸಂಚಾರ ನಿಯಂತ್ರಿಸಲಿದೆ. ಸಿಗ್ನಲ್‌ಗಳನ್ನು ಮೂರು ವರ್ಷ ಕಾಲ ಭಾರತ್ ಎಲೆಕ್ಟ್ರಾನಿಕ್ ನಿರ್ವಹಣೆ ಮಾಡಲಿದೆ ಎಂದು ಹೇಳಿದರು. [ಡಿಎಲ್ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಹಾಕಿ]

ಮತ್ತಷ್ಟು ಸಿಗ್ನಲ್ : ಮುಂದಿನ ದಿನಗಳಲ್ಲಿ ಕಂಕನಾಡಿಯ ಕರಾವಳಿ ವೃತ್ತ, ಹಂಪನಕಟ್ಟೆ, ಅಂಬೇಡ್ಕರ್(ಜ್ಯೋತಿ), ಬಂಟ್ಸ್ ಹಾಸ್ಟೆಲ್ ಮತ್ತು ಪಿವಿಎಸ್ ವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗುತ್ತದೆ. ಕರಾವಳಿ ವೃತ್ತದಲ್ಲಿ 5 ವರ್ಷದ ಹಿಂದೆ ಕಂಬ ಹಾಕಲಾಗಿತ್ತು. ಇದೀಗ ಅದನ್ನು ತೆಗೆದು ಹೊಸ ವ್ಯವಸ್ಥೆಯಡಿ ಅಳವಡಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

Mangaluru

ಮಂಗಳೂರು ನಗರದ ಸಂಚಾರಿ ವ್ಯವಸ್ಥೆ ಸುಧಾರಣೆಗೆ ರಾಜ್ಯ ಸರ್ಕಾರ 5 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಅದರಲ್ಲಿ 1.25 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ಸಿಗ್ನಲ್ ಅಳವಡಿಸಲಾಗುತ್ತಿದೆ ಎಂದು ಉದಯ ನಾಯಕ್ ತಿಳಿಸಿದರು.

English summary
Mangaluru Traffic police plans to install signals at Four important junctions soon. The BEL team which will install the new signals and also maintain for three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X