ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1.5 ಕೋಟಿ ಬೆಲೆಯ ಪೆಟ್ರೋಲ್ ಕಾರಿಗೆ ಡೀಸೆಲ್ ಹುಯ್ದರು ಮಾರಾಯ್ರೆ!

ಮಂಗಳೂರಿನ ಶಾಸಕ ಮೊಯ್ದಿನ್ ಬಾವ ಅವರ 1.5 ಕೋಟಿ ರುಪಾಯಿಯ ಹೊಸ ವೋಲ್ವೋ ಪೆಟ್ರೋಲ್ ಕಾರಿಗೆ ಸೋಮವಾರ ಡೀಸೆಲ್ ಹಾಕಿರುವ ಕದ್ರಿ ಬಂಕ್ ನವರ ಜತೆ ಭಾರೀ ಜಟಾಪಟಿ ನಡೆದಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 28: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರ ಹೊಚ್ಚಹೊಸ ವೋಲ್ವೋ ಹೈಬ್ರಿಡ್ ಕಾರಿಗೆ ನಗರದ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಘಟನೆ ಸೋಮವಾರ ಸಂಜೆ ನಡೆದಿದೆ. ಮೊಯ್ದಿನ್ ಬಾವ ಅವರ ಪುತ್ರ ಮೆಹಸೂಬ್ ವೊಲ್ವೋ ಕಾರನ್ನು‌ ನಗರಕ್ಕೆ ತಂದಿದ್ದಾರೆ.

ಕದ್ರಿಯ ಬಂಕ್‌ಗೆ ಪೆಟ್ರೋಲ್ ಹಾಕಿಸಲು ಕೊಂಡೊಯ್ದು ನಿಲ್ಲಿಸಿದ್ದಾರೆ. ಆದರೆ ಬಂಕ್ ನಿರ್ವಾಹಕ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ್ದಾನೆ. ಎಡವಟ್ಟಿನ ಬಳಿಕ ಹೌಹಾರಿದ‌ ಬಾವ ಅವರ ಪುತ್ರ ಮತ್ತು ಬಂಕ್‌ನವರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ಬಂಕ್‌ ಮಾಲೀಕರು ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.[ಸಮೀಕ್ಷೆ: ದೇಶದಲ್ಲೇ ಮಂಗಳೂರು ಜೀವನಯೋಗ್ಯ ನಗರ]

Moideen Bava car filled by diesel instead of petrol at Kadri bunk

ವೋಲ್ವೋ ಸರ್ವೀಸ್ ಸೆಂಟರ್ ಮಂಗಳೂರಿನಲ್ಲಿ ಇಲ್ಲದ ಕಾರಣ ಬೆಂಗಳೂರಿನ ಡೀಲರ್‌ಗೆ ಮಾಹಿತಿ ಕೊಟ್ಟಿದ್ದು, ಅವರು ಬಂದು ಸರಿಪಡಿಸಲಿದ್ದಾರೆ. ಕೆಲ ದಿನದ ಹಿಂದೆಯಷ್ಟೇ 1.5 ಕೋಟಿ ರುಪಾಯಿ ಮೌಲ್ಯದ ವೋಲ್ವೋ ಹೈಬ್ರಿಡ್ ಕಾರನ್ನು ಶಾಸಕ ಬಾವ ಖರೀದಿಸಿದ್ದರು.[40 ರು. ಶುಲ್ಕ ಬದಲಿಗೆ 4 ಲಕ್ಷ ರು. ಮೊತ್ತಕ್ಕೆ ಸ್ವೈಪ್ ಮಾಡಿದ ಟೋಲ್ ಸಿಬ್ಬಂದಿ!]

Moideen Bava car filled by diesel instead of petrol at Kadri bunk

ಪೆಟ್ರೋಲ್ ಹಾಗೂ ಬ್ಯಾಟರಿ ಎರಡರಲ್ಲೂ ಓಡುವ ಕಾರಿನ ಬೆಲೆ ಒಂದೂವರೆ ಕೋಟಿಯಾಗಿದೆ. ಭಾರತದಲ್ಲಿ ಇಂತಹ ಕಾರನ್ನು ಮೊದಲ ಬಾರಿಗೆ ವೋಲ್ವೋ ಪರಿಚಯಿಸಿದೆ. ದೇಶದ ಮೊದಲ ಗ್ರಾಹಕ ಎಂಬ ಶ್ರೇಯಕ್ಕೆ ಶಾಸಕ ಮೊಯ್ದಿನ್ ಬಾವ ಭಾಜನರಾಗಿದ್ದಾರೆ.

English summary
Mangaluru MLA Moideen Bava recently purchased 1.5 crore Volvo petrol car. Monday when car drove to bunk to fill petrol, mistakenly filled with diesel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X